ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ರಿಲಯನ್ಸ್ ಜಿಯೋಫೋನ್ ಗ್ರಾಹಕರಿಗೊಂದು ಸುದ್ದಿ
ಬೆಂಗಳೂರು: ರಿಲಯನ್ಸ್ ಜಿಯೋ ಉಚಿತ ಫೋನ್ ಪ್ರಿಯರಿಗೆ ಮತ್ತೆ ಸುದ್ದಿ ಇಲ್ಲಿದೆ. ಜಿಯೋಫೋನ್ ಪ್ರೀ ಬುಕ್ಕಿಂಗ್ ಮತ್ತೊಮ್ಮೆ ಆರಂಭವಾಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ. ಬೆಂಗಳೂರಿನ ವೈಫೈ ಡಬ್ಬಾದಿಂದ ಭರ್ಜರಿ ಆಫರ್! ಮೊದಲ ಹಂತದ ಪ್ರೀ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು. ಇದಲ್ಲದೆ, 10ಮಿಲಿಯನ್ ಗ್ರಾಹಕರು ಈ ಫೋನ್ ಬಗ್ಗೆ ತಮ್ಮ ಆಸಕ್ತಿ ತೋರಿದ್ದರು. ಆದರೆ, ಫೋನ್ ಕಾಯ್ದಿರಿಸಿ ಖರೀದಿ ಮಾಡಲು ಸಾಧ್ಯವಾಗದವರಿಗೆ ಕಂಪನಿ ಇಂಟರೆಸ್ಟ್ ರಿಜಿಸ್ಟ್ರೇಷನ್ ಗೆ ಅವಕಾಶ ನೀಡಲಾಗಿತ್ತು. ಆದರೆ, ಒಟ್ಟಾರೆ ಜಿಯೋ ಫೋನ್ ಯೋಜನೆ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಇನ್ನೊಮ್ಮೆ ಉಚಿತ ಫೋನ್ ಗ್ರಾಹಕರಿಗೆ ನೀಡಲು ಸಂಸ್ಥೆ ಮುಂದಾಗಿದೆ. ಪ್ರೀಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ನಿಂದ ಭರ್ಜರಿ ಆಫರ್! ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಇಂಟರೆಸ್ಟ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಹೆಸರು ನೋಂದಾಯಿಸಿದ ಬಳಿಕ ಕಂಪನಿಯಿಂದ ದೃಢಪಡಿಸಿದ ಸಂದೇಶ ಬರಲಿದೆ. ಈ ಸಂದೇಶದಲ್ಲಿ ಒಂದು ಲಿಂಕ್ ನೀಡಲಾಗಿರುತ್ತದೆ. ಈ ಲಿಂಕ್ ಓಪನ್ ಮಾಡಿದ್ರೆ ಗ್ರಾಹಕರ ಕೋಡ್ ನಂಬರ್ ಸಿಗುತ್ತದೆ. ಕೋಡ್ ನಂಬರನ್ನು ಸ್ಥಳೀಯ ರಿಲಯನ್ಸ್ ಜಿಯೋ ಮಳಿಗೆಯಲ್ಲಿ ತೋರಿಸಿದ್ರೆ ಜಿಯೋ ಫೋನ್ ನಿಮ್ಮ ಕೈ ಸೇರಲಿದೆ. ರಿಲಯನ್ಸ್ ಜಿಯೋ ಫೀಚರ್ ಫೋನ್ನನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಭದ್ರತಾ ಠೇವಣಿಯಾಗಿ ಒಂದು ಬಾರಿ 1500 ರೂಪಾಯಿ ನೀಡಬೇಕಾಗುತ್ತದೆ. ಮೂರು ವರ್ಷಗಳ ನಂತರ ಗ್ರಾಹಕ ಈ ಫೋನನ್ನು ವಾಪಸ್ ಕೂಡಾ ಮಾಡಬಹುದಾಗಿದೆ. ಪ್ರತಿ ತಿಂಗಳು 153 ರೂಪಾಯಿ ರಿಚಾಜರ್್ ಮಾಡಿದಲ್ಲಿ ಮಾತ್ರ ಕಂಪನಿ ನೀಡುವ ಲಾಭವನ್ನು ನೀವು ಪಡೆಯಬಹುದಾಗಿದೆ.
ಏರ್ ಟೆಲ್ -ಕಾರ್ಬನ್ ಫೋನ್ :
ದೇಶಿ ಮಾರುಕಟ್ಟೆಯ ಅಗ್ರಗಣ್ಯ ಸಂಸ್ಥೆ ಕಾರ್ಬನ್ ಜತೆ ಒಪ್ಪಂದ ಮಾಡಿಕೊಂಡಿರುವ ಭಾತರ್ಿ ಏರ್ ಟೆಲ್ ಎರಡು ಹೊಸ 4ಜಿ ಆಂಡ್ರಾಯ್ಡ್ ಸ್ಮಾಟರ್್ ಫೋನ್ ಬಿಡುಗಡೆ ಮಾಡಿದೆ. 4ಜಿ ಸ್ಮಾಟ್ಫರ್ೋನ್ ಎ40 ಇಂಡಿಯನ್ ಫೋನ್ ಬಿಡುಗಡೆ ಮಾಡಿ ಯಶಸ್ಸು ಕಂಡ ಬಳಿಕ ಇನ್ನಷ್ಟು ಸ್ಮಾಟರ್್ ಫೋನ್ ಗಳನ್ನು 'ನನ್ನ ಮೊದಲ ಸ್ಮಾಟರ್್ ಫೋನ್' ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ವೋಡಾಫೋನ್ :
ಮೈಕ್ರೋ ಮ್ಯಾಕ್ಸ್ ಜತೆ ಒಪ್ಪಂದ ಮಾಡಿಕೊಂಡಿರುವ ವೋಡಾಫೋನ್ ಸಂಸ್ಥೆ ಭಾರತ್ 2 ಅಲ್ಟ್ರಾ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಫೋನ್ ಪರಿಚಯಿಸಿದೆ. ಉಳಿದ ಫೋನ್ ಗಳಿಗೆ ಹೋಲಿಸಿದರೆ ಇದು ಆಂಡ್ರಾಯ್ಡ್ ಆಧಾರಿತ ಸ್ಮಾಟರ್್ ಫೋನಾಗಿದ್ದು, 999 ರು ಗೆ ಲಭ್ಯವಿದೆ. ಗ್ರಾಹಕರು 2,899 ರು ನೀಡಿದರೆ ಡೇಟಾ ಸೇವೆ ಸಹಿತ ಫುಲ್ ಪ್ಯಾಕೇಜ್ ದೊರೆಯಲಿದೆ.
ಬಿಎಸ್ಎನ್ಎಲ್ :
ಸಕರ್ಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ ಎನ್ಎಲ್) ಕೂಡಾ ಮೈಕ್ರೋಮ್ಯಾಕ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಕಡಿಮೆ ದರದಲ್ಲಿ ಡೇಟಾ ಪ್ಯಾಕ್ ಸಹಿತ ಭಾರತ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.