HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಉಪ್ಪಳ ರೈಲು ನಿಲ್ದಾಣ-ಶುಭ ನಿರೀಕ್ಷೆಯೊಂದಿಗೆ ಮಂಗಳವಾರ ಸಂಜೆ ಉಪ್ಪಳ: ಜಿಲ್ಲೆಯ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಉಪ್ಪಳ ಪೇಟೆಯೂ ಒಂದು. ವಾಣಿಜ್ಯಕೇಂದ್ರವಾಗಿ ಪ್ರಗತಿಯಲ್ಲಿರುವ ಉಪ್ಪಳದಲ್ಲಿ ಮೂಲಭೂತ ಸೌಕರ್ಯ ಕೊಡಮಾಡುವ ಮೂಲಕ ಪ್ರಯಾಣಿಕರ ಸುಖಿ ಪ್ರಯಾಣಕ್ಕೆ ಸಹಕಾರಿಯಾಗಬಲ್ಲ ರೈಲು ನಿಲ್ದಾಣ ಅತ್ಯವಶ್ಯ.ಇದಕ್ಕಾಗಿ ರೈಲು ನಿಲ್ದಾಣದ ಮೇಲ್ದಜರ್ೆ ಮಾಡಬೇಕೆಂಬುದು ಇಲ್ಲಿನ ರೈಲು ಪ್ರಯಾಣಿಕರ ಬಹು ಕಾಲದ ಬೇಡಿಕೆಯಾಗಿದೆ. ಪಾಲಕ್ಕಾಡ್ ರೈಲ್ವೇ ವಿಭಾಗಕ್ಕೆ ಒಳಪಟ್ಟಿರುವ ಉಪ್ಪಳ ರೈಲು ನಿಲ್ದಾಣವು ಆಡಳಿತಾತ್ಮಕವಾಗಿ ಹಾಗೂ ಕಾರ್ಯ ವೈಖರಿಯ ಮೂಲಕ ಅಬಿವೃದ್ಧಿ ಹೊಂದಿದೆ ಎನ್ನುತ್ತಾರೆ ಪಾಲಕ್ಕಾಡ್ ರೈಲ್ವೇ ವಿಭಾಗದ ಮುಖ್ಯಸ್ಥರು. ಆದರೆ ನಿಲ್ದಾಣದಲ್ಲಿ ಯಾವುದೇ ಗುರುತರ ಬದಲಾವಣೆಗಳಾಗಲಿ ಮೇಲ್ದಜರ್ೆ ಕಾರ್ಯವಾಗಲಿ ನಡೆಯದೇ ಇರುವುದು ವ್ಯಾಪಕ ಜನಾಕ್ರೋಶಕ್ಕೂ ಕಾರಣವಾಗಿದೆ. ಪಾಲಕ್ಕಾಡ್ ರೈಲ್ವೇ ವಿಭಾಗದ ಅಧಿಕಾರಿಗಳ ಪ್ರಕಾರ ಉಪ್ಪಳ ರೈಲು ನಿಲ್ದಾಣವು ಮುಂದಿನ ದಿನಗಳಲ್ಲಿ ಐಬಿಎಸ್(ಮಧ್ಯಂತರತಡೆ ಸಂಜ್ಞಾ ವ್ಯವಸ್ಥೆ)ಗೆ ಒಳಪಡಲಿದೆ. ಒಂದು ವೇಳೆ ಈ ಬದಲಾವಣೆಯಾದಲ್ಲಿ ಪ್ರಸ್ತುತ ಸ್ಟೇಶನ್ ಮಾಸ್ಟರ್ಗೆ ಯಾವುದೇ ಕೆಲಸವಿರುವುದಿಲ್ಲ. ಹೊಸ ವ್ಯವಸ್ಥೆಗೆ ನಿಲ್ದಾಣ ಒಳಪಟ್ಟಲ್ಲಿ ಕುಂಬಳೆ ಹಾಗೂ ಮಂಜೇಶ್ವರದಿಂದ ಉಪ್ಪಳ ರೈಲು ನಿಲ್ದಾಣದ ಕಾರ್ಯಗಳನ್ನು ನಿಯಂತ್ರಿಸಲಾಗುವುದು. ಇಂತಹ ದ್ವಿಮುಖ ಸಿಗ್ನಲಿಂಗ್ ವ್ಯವಸ್ಥೆಗೆ 2.8 ಕೋಟಿ ರೂ.ವೆಚ್ಚ ತಗಲುತ್ತದೆ ಎಂದು ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಹೊಸ ಸಿಗ್ನಲಿಂಗ್ ವ್ಯವಸ್ಥೆಯು ಈ ತನಕ ಸ್ಟೇಶನ್ ಮಾಸ್ಟರ್ ನಿರ್ವಹಿಸುತ್ತಿದ್ದ ಕಾರ್ಯ ಮಾಡಲಿದೆ. ಹಾಗಾದಲ್ಲಿ ಪ್ರಸ್ತುತ ಇರುವ ಸಿಬ್ಬಂದಿಯನ್ನು ಬೇರೆಡೆಗೆ ವಗರ್ಾಯಿಸಬೇಕಾಗುತ್ತದೆ. ಪಾಲಕ್ಕಾಡಿನ ವಂಕರ ರೈಲ್ವೇ ನಿಲ್ದಾಣವನ್ನು ಇತ್ತೀಚೆಗೆ ಐಬಿಎಸ್ಗೆ ಒಳಪಡಿಸಿದ ಪರಿಣಾಮ ರೈಲು ನಿಲ್ದಾಣದ ಚಿತ್ರಣ ಸಂಪೂರ್ಣ ಬದಲಾಗಿದೆ, ಜೊತೆಗೆ ಸಿಬ್ಬಂದಿಯನ್ನು ಬೇರೆಡೆಗೆ ವಗರ್ಾಯಿಸಲಾಗಿದೆ. ಇದೇ ಪರಿಸ್ಥಿತಿ ಉಪ್ಪಳ ರೈಲು ನಿಲ್ದಾಣಕ್ಕೂ ಉಂಟಾಗುವ ಸಾಧ್ಯತೆಗಳಿವೆ. ವಿಸ್ಕೃತ ಪ್ರದೇಶವಾಸಿಗಳ ಬಳಕೆ: 105 ವರ್ಷಗಳಿಗಿಂತಲೂ ಹಳೆಯದಾದ ಉಪ್ಪಳ ರೈಲು ನಿಲ್ದಾಣ ವಿಸ್ಕೃತವಾದ ವ್ಯಾಪ್ತಿಯ ಬಳಕೆದಾರರನ್ನು ಹೊಂದಿದೆ.ಗ್ರಾಮೀಣ ಪ್ರದೇಶಗಳಾದ ಪೈವಳಿಕೆ, ಬಾಯಾರು, ಧರ್ಮತ್ತಡ್ಕ, ಪೆಮರ್ುದೆ, ಬಂದ್ಯೋಡು, ಕಯ್ಯಾರು, ಚಿಪ್ಪಾರು, ಬಾಳಿಯೂರು, ಮೀಯಪದವು ಸಹಿತ ವಿಸ್ಕೃತವಾದ ಭೂಪ್ರದೇಶಗಳ ಸಾವಿರಾರು ನಿತ್ಯ ಪ್ರಯಾಣಿಕರಿರುವ ರೈಲು ಬಳಕೆದಾರರನ್ನು ಹೊಂದಿದೆ. ಈ ಪ್ರದೇಶಗಳ ನಾಗರಿಕರು ಕಾಸರಗೋಡು, ಕಣ್ಣೂರು, ಮಂಗಳೂರು ಸಹಿತ ಹೆಚ್ಚಿನ ಪ್ರದೇಶಗಳಿಗೆ ಉಪ್ಪಳ ರೈಲು ನಿಲ್ಧಾಣವನ್ನು ಆಶ್ರಯಿಸುತ್ತಿದ್ದಾರೆ. ಸರಕು ಸಾಗಾಟ ಜೋರಿತ್ತು: ಹೊರೆಕಲ್ಲುಗಳು ಸಾಕ್ಷಿ! ದಶಕಗಳ ಹಿಂದೆ ಮಂಗಳೂರಿಗೆ ನೇತ್ರಾವತಿ ಸೇತುವೆ ಆಗುವ ಮೊದಲು ಮಂಗಳೂರು, ಬಂಟ್ವಾಳಗಳಿಂದ ಸರಕು ಸೇವೆಗಳು ಉಪ್ಪಳ ರೈಲು ನಿಲ್ದಾಣದ ಮೂಲಕ ಬಹಳಷ್ಟು ದೊಡ್ಡ ಮಟ್ಟಿಗೆ ನಡೆಯುತ್ತಿತ್ತೆಂದು ಹಿರಿಯ ತಲೆಮಾರಿನ ನಾಗರಿಕರು ಈಗಲೂ ನೆನಪಿಸುತ್ತಾರೆ.ಇದರ ಕುರುಹುಗಳಾದ ದೊಡ್ಡ ಸರಕು ಸರಂಜಾಮುಗಳನ್ನು ತಲೆಗೆ ಏರಿಸಲು-ಇಳಿಸಲು ಸಹಾಯಕವಾಗುವ ಹೊರೆಕಲ್ಲುಗಳು ಈಗಲೂ ಇಲ್ಲಿ ಕಾಣಸಿಗುತ್ತವೆ. ದಿವ್ಯ ನಿರ್ಲಕ್ಷ್ಯ: ಉಪ್ಪಳದಿಂದ ವಿವಿಧ ಪ್ರದೇಶಕ್ಕೆ ದಿನನಿತ್ಯ ಸಾವಿರಾರು ಮಂದಿ ರೈಲು ಪ್ರಯಾಣಿಕರಿದ್ದೂ, ಇಲ್ಲಿಯವರೆಗೂ ಯಾವುದೇ ಸಮರ್ಪಕ ವ್ಯವಸ್ಥೆಯನ್ನು ಕೈಗೊಂಡಿಲ್ಲ. ಅಲ್ಲದೆ ದಶಕಗಳ ಹಿಂದಿನಿಂದಲೂ ಇಲ್ಲಿನ ರೈಲು ನಿಲ್ದಾಣವನ್ನು ಸ್ಥಳಿಯರು ರೈಲ್ವೇ ಮೇಲ್ದಜರ್ೆಗೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸುತ್ತಿದ್ದರೂ ಸಂಬಂಧಪಟ್ಟವರು ಕ್ಯಾರೇ ಅನ್ನದಿರುವುದು ಇಲ್ಲಿನ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯವನ್ನು ಮೂಲೆಗೆ ಸರಿಸಿರುವುದು ತಿಳಿದು ಬರುತ್ತದೆ. ರೈಲ್ವೇ ಅಧಿಕೃತರ ಪ್ರಕಾರ ಉಪ್ಪಳ ರೈಲು ನಿಲ್ದಾಣ "ಇ" ಕೆಟಗರಿಗೆ ಸೇರಿದೆ. ದಿನಂಪ್ರತಿ 5-6 ಸಾವಿರ ರೂ.ಗಳಂತೆ ಪ್ರಯಾಣದರ ಸಂಗ್ರಹವಾಗುತ್ತದೆ. ವಾಷರ್ಿಕ 60 ಲಕ್ಷ ರೂ.ಗಳಿಗಿಂತ ಕಡಿಮೆ ವರಮಾನಗಿಟ್ಟಿಸಿಕೊಳ್ಳುವ ನಿಲ್ದಾಣಗಳನ್ನು ಇ ಕೆಟಗರಿಗೆ ಸೇರಿಸಲಾಗುತ್ತಿದೆ. ವಿದ್ಯುತ್ ಸಬ್ ಸ್ಟೇಶನ: ಪಾಲಕ್ಕಾಡ್ ಡಿವಿಶನ್ ನ ರೈಲು ಹಳಿಯ ವಿದ್ಯುತ್ತೀಕರಣ ಪೂರ್ಣಗೊಳ್ಳುತ್ತಿದ್ದು, ಈ ಪೈಕಿ ರೈಲು ವಿದ್ಯುತ್ತೀಕರಣದ ಪ್ರಮುಖ ಭಾಗವಾದ ವಿದ್ಯುತ್ ಸಬ್ ಸ್ಟೇಶನ್ ಉಪ್ಪಳದಲ್ಲೂ ನಿಮರ್ಾಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು ಮೂರು ರೈಲ್ವೇ ಸಬ್ ಸ್ಟೇಶನ್ ಗಳಿದ್ದು, ಈ ಪೈಕಿ ಕಾಮಗಾರಿ ಕೊನೆಯ ಹಂತದಲ್ಲಿರುವ ಉಪ್ಪಳ ಸಬ್ ಸ್ಟೇಶನ್ ರೈಲು ನಿಲ್ದಾಣದ ಉನ್ನಿತೀಕರಣಕ್ಕೆ ಬಲ ನೀಡುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ಹೋರಾಟ ಅಗತ್ಯ. ಮೇಲ್ಸೇತುವೆ ಓಕೆ: ಉಪ್ಪಳ ರೈಲು ನಿಲ್ದಾಣದ ಪ್ರಯಾಣಿಕರಿಗೆ ಪ್ಲಾಟ್ ಪಾರಂ ದಾಟಲು ಈಗಾಗಲೇ ಮೇಲ್ಸೇತುವೆ ನಿಮರ್ಾಣ ಒದಗಿಸಲಾಗಿದೆ. ಹಾಗಿದ್ದೂ ಕೆಳದಜರ್ೆಗೆ ತಳ್ಳುವ ಯತ್ನ ಬೇರೇನೋ ವಾಸನೆಗೆ ಕಾರಣವಾಗಿದೆ. ಉಪ್ಪಳ ನಿಲ್ದಾಣದ ಆಚೆಗಿನ ಮಣಿಮುಂಡ, ಶಾರದಾನಗರ, ಕಡಪ್ಪುರ ಪರಿಸರದ ಸಾವಿರಾರು ಕುಟುಂಬಗಳು ರೈಲುಹಳಿ ದಾಟಿ ತೆರಳಬೇಕಾಗುತ್ತದೆ. ರೈಲುಗಾಡಿಗಳು ನಿಲುಗಡೆಗೊಂಡಿದ್ದರೆ ಗಂಟೆಗಳ ಕಾಲ ಕಾಯುವ ಪರಿಸ್ಥಿತಿಯೂ ಇದೆ. ಆದ್ದರಿಂದ ಆಚೆಗೆ ಪ್ರಯಾಣಿಸುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ. ಕ್ರಿಯಾ ಸಮಿತಿ ಅಸ್ತಿತ್ವಕ್ಕೆ: ಉಪ್ಪಳ ರೈಲು ನಿಲ್ದಾಣದ ಹಿನ್ನಡೆ, ನಿರ್ಲಕ್ಷ್ಯವನ್ನು ಪ್ರತಿಭಟಿಸಿ ವ್ಯಾಪಕ ಪ್ರಮಾಣದ ಸಂಘಟನಾತ್ಮಕ ಹೋರಾಟ ರೂಪುಗೊಳ್ಳತೊಡಗಿದ್ದು, ತತ್ಪಲವಾಗಿ "ಸೇವ್ ಉಪ್ಪಳ ರೈಲು ನಿಲ್ದಾಣ" ಎಂಬ ಕ್ರಿಯಾ ಸಮಿತಿ ಮುಂಚೂಣಿಯಲ್ಲಿ ನಿಂತು ಪ್ರಸ್ತುತ ನಿಲ್ದಾಣ ನಿರ್ಲಕ್ಷ್ಯದ ವಿರುದ್ದ ಧ್ವನಿಯೆತ್ತಿದೆ. ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷರಾಗಿಯೂ, ಅಝೀಂ ಮಣಿಮುಂಡ ಪ್ರಧಾನ ಕಾರ್ಯದಶರ್ಿಯಾಗಿರುವ ಈ ಕ್ರಿಯಾ ಸಮಿತಿ ಈಗಾಗಲೇ ಹಲವು ಪ್ರತಿಭಟನೆಯ ಮೂಲಕ ಗಮನ ಸೆಳೆದಿದೆ. ಜೊತೆಗೆ ಉನ್ನತ ರೈಲು ಅಧಿಕಾರಿಗಳು, ಮುಖಂಡರುಗಳನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಚಚರ್ಿಸಿದೆ. ಇಂದು ಅಧಿಕೃತರ ಭೇಟಿ-ಚಿಗುರೊಡೆದ ಭರವಸೆ: ಕ್ರಿಯಾ ಸಮಿತಿಯು ಹೋರಾಡುತ್ತಿರುವ ಮಧ್ಯೆ ಅವರ ಹೋರಾಟಕ್ಕೆ ಬಲ ನೀಡುವಂತೆ ಇದೀಗ ರೈಲ್ವೇ ಅಧಿಕೃತರು ಭೇಟಿ ನೀಡಿ ಪರಿಶೀಲನೆ ನಡೆಸುವ ಭರವಸೆ ನೀಡಿದ್ದು ಮಂಗಳವಾರ ಅಪರಾಹ್ನ ಪಾಲಕ್ಕಾಡ್ ಡಿವಿಜನಲ್ ರೈಲ್ವೇ ಪ್ರಬಂಧಕ ನರೇಶ್ ಲನ್ವಾನಿ ಆಗಮಿಸುವರು. ಜೊತೆಗೆ ಸಂಸದ ಪಿ. ಕರುಣಾಕರನ್, ಶಾಸಕ ಪಿ.ಬಿ ಅಬ್ದುಲ್ ರಝಾಕ್ ಉಪಸ್ಥಿತರಿರುವರು. ಅಪರಾಹ್ನ 3 ಗಂಟೆಗೆ ಉಪ್ಪಳ ನಿಲ್ದಾಣ ಪರಿಸರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ರೈಲ್ವೇ ಅಧಿಕೃತರು ನಿಲ್ದಾಣದ ಅಭಿವೃದ್ದಿಯ ನಿಟ್ಟಿನಲ್ಲಿ ತಮ್ಮ ಅಂತಿಮ ತೀಮರ್ಾನವನ್ನು ತಿಳಿಸಲಿರುವರು. ಸಾರ್ವಜನಿಕರು, ರೈಲು ಬಳಕೆದಾರರು ಪಾಲ್ಗೊಂಡು ಅಧಿಕಾರಿಗಳಲ್ಲಿ ಮುಕ್ತ ಸಂವಾದ ನಡೆಸಬೇಕೆಂದು ರೈಲು ನಿಲ್ದಾಣ ಕ್ರಿಯಾ ಸಮಿತಿ ತಿಳಿಸಿದೆ. ಸಮರಸಕೆ ಏನಂದ್ರು (ಇತರ ಗಮನೀಯ ಅಂಶಗಳು) 1) ಅನ್ಯ ರಾಜ್ಯದ ಕಾಮರ್ಿಕರು ಹೆಚ್ಚಾಗಿ ಉಪ್ಪಳ ಮಂಜೇಶ್ವರ ಪ್ರದೇಶದಲ್ಲಿದ್ದಾರೆ. ಜಿಲ್ಲೆಯಲ್ಲಿ ಉಪ್ಪಳ ರೈಲು ನಿಲ್ದಾಣಕ್ಕೆ ಹೆಚ್ಚಿನ ವರಮಾನ ಸಿಗುತ್ತಿದೆ, ಒಟ್ಟಾರೆ 12 ಬ್ಯಾಂಕುಗಳು ಉಪ್ಪಳ ಪ್ರದೇಶದಲ್ಲಿ ಕಾಯರ್ಾಚರಿಸುತ್ತಿವೆ. ರೈಲ್ವೇ ವಿಬಾಗವು ಹೆಚ್ಚಿನ ರೈಲುಗಳ ನಿಲುಗಡೆಗೆ ಅನುಮತಿಸಿದರೆ ಪ್ರಯಾಣಿಕರ ಸಂಖ್ಯೆಗಣನೀಯವಾಗಿ ಹೆಚ್ಚಳಗೊಂಡು ಆದಾಯ ದ್ವಿಗುಣವಾಗಲಿದೆ. ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲ್ವೇ ವಿಭಾಗವು ಟಿಕೆಟಿಂಗ್ ಏಜೆಂಟ್ ಹಾಗೂ ಸೂಕ್ತ ಸಿಬ್ಬಂದಿಯನ್ನು ನೇಮಿಸದ ಹೊರತು ಸೀಸನ್ ಟಿಕೆಟ್ ಹಾಗೂ ದೂರ ಪ್ರಯಾಣದ ಟಿಕೆಟ್ ವಿತರಣ ಸಂಖ್ಯೆಯಲ್ಲಿ ಹೆಚ್ಚಳ ಅಸಾಧ್ಯ. ರಕ್ಷಣಾ ಸಮಿತಿಯು ಸೀಸನ್ ಟಿಕೆಟ್ ಹಿಂಪಡೆ ವ್ಯವಸ್ಥೆಯಂತಹ ಕ್ರಮವನ್ನು ಖಂಡಿಸುತ್ತದೆ. ಹೇರೂರು, ಬಾಯಾರು, ಮಂಗಲ್ಪಾಡಿ, ಪೈವಳಿಕೆ, ಮೀಂಜ ಮೊದಲಾದ ಗ್ರಾ.ಪಂ ಪ್ರದೇಶಗಳಿಂದ ಸಾವಿರಾರು ವಿದ್ಯಾಥರ್ಿಗಳು ಪ್ರತಿನಿತ್ಯ ಕಾಸರಗೋಡು ಹಾಗೂ ಮಂಗಳೂರು ಭಾಗಕ್ಕೆ ಪ್ರಯಾಣಿಸುತ್ತಾರೆ. ಮಾತ್ರವಲ್ಲದೆ ಉಪ್ಪಳವು ಮಂಜೇಶ್ವರ ತಾಲೂಕು ಕಚೇರಿ ಕೇಂದ್ರವಾಗಿದೆ. ಹಲವು ಸರಕಾರಿ ಕಚೇರಿಗಳು ಈ ಭಾಗದಲ್ಲಿದ್ದು ನೌಕರರು ರೈಲುಯಾನವನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಸೀಸನ್ ಟಿಕೆಟ್ತಡೆ ಕ್ರಮವು ರೈಲ್ವೇ ವಿಭಾಗದಿಂದಾಗುವ ಗುರುತರ ಅನ್ಯಾಯ. ಅಝೀಂ ಮಣಿಮುಂಡ, ಪ್ರಧಾನ ಕಾರ್ಯದಶರ್ಿ ಸೇವ್ ಉಪ್ಪಳ ರೈಲ್ವೇ ನಿಲ್ದಾಣ ನಾಗರಿಕ ಹೋರಾಟ ಸಮಿತಿ 2) ಕಾಸರಗೋಡು ಲೋಕಸಭಾಕ್ಷೇತ್ರಕ್ಕೆ ಒಳಪಟ್ಟ ಉಪ್ಪಳ ರೈಲು ನಿಲ್ದಾಣದ ಮೇಲ್ದಜರ್ೆ ವಿಚಾರವನ್ನು ಈಗಾಗಲೇ ಸಂಸದ ಪಿ.ಕರುಣಾಕರನ್ ಅವರಲ್ಲಿ ಪ್ರಾಸ್ತಾಪಿಸಲಾಗಿದೆ. ರೈಲು ನಿಲ್ದಾಣದ ಅಭಿವೃದ್ಧಿ ಮಾಡಬೇಕೆನ್ನುವ ಬೇಡಿಕೆಯನ್ನು ಮುಂದಿಡಲಾಗಿದೆ. ರೆ`ಲ್ವೇ ವಿಭಾಗದ ಮೂಲಕ ಉಪ್ಪಳ ರೈಲು ನಿಲ್ದಾಣಕ್ಕೆ ಕೆಳ ದಜರ್ೆಗೆ ತಳ್ಳುವ ನಿಧರ್ಾರ ಖಂಡನೀಯವಾಗಿದ್ದು, ಈ ಕ್ರಮವನ್ನು ಅಧಿಕೃತರು ಹಿಂಪಡೆಯಬೇಕು ನ್ಯಾಯವಾದಿ. ಬಾಲಕೃಷ್ಣ ಶೆಟ್ಟಿ, ಸೇವ್ ಉಪ್ಪಳ ರೈಲುನಿಲ್ದಾಣ ಕ್ರಿಯಾ ಸಮಿತಿ ಅಧ್ಯಕ್ಷ .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries