ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಕುಂಜತ್ತೂರು ಭಜನಾ ಮಂಡಳಿ ವಾಷರ್ಿಕೋತ್ಸವ
ಮಂಜೇಶ್ವರ: ಕುಂಜತ್ತೂರು ಅಡ್ಕ ಶ್ರೀ ನಾಗಮೂಲ ಭಜನಾ ಮಂಡಳಿಯ ವಾಷರ್ಿಕೋತ್ಸವವು ನ.5ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಿಗ್ಗೆ 6.30ಕ್ಕೆ ಕ್ಷೇತ್ರದ ಅರ್ಚಕ ಹರೀಶ್ ಮೂಲ್ಯಣ್ಣ ದೀಪ ಬೆಳಗಿಸುವರು.
ಬಳಿಕ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಸಂಜೆ 6.30ಕ್ಕೆ ಧಾಮರ್ಿಕ ಸಭೆ ಜರಗಲಿದ್ದು, ಉದ್ಯಮಿ ಬಾಲಕೃಷ್ಣ ಬಿ. ಉದ್ಘಾಟಿಸುವರು. ಅಡ್ಕ ಶ್ರೀ ನಾಗಮೂಲ ಸ್ಥಾನದ ಗೌರವಾಧ್ಯಕ್ಷ ಸೀತಾರಾಮ ಬಂಗೇರ ಅಧ್ಯಕ್ಷತೆ ವಹಿಸುವರು. ಸಹನಾ ಕುಂದರ್ ಧಾಮರ್ಿಕ ಉಪನ್ಯಾಸ ನೀಡಲಿದ್ದಾರೆ.
ತೂಮಿನಾಡು ಶ್ರೀ ಮಹಾಕಾಳಿ ಭಜನಾ ಮಂದಿರದ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಬಿಜೆಪಿ ಓಬಿಸಿ ಮೋಚರ್ಾದ ರಾಜ್ಯ ಸಮಿತಿಯ ಸದಸ್ಯ, ನ್ಯಾಯವಾದಿ ನವೀನ್ರಾಜ್ ಕೆ.ಜೆ., ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಶೋಭಾ ವಿ.ಶೆಟ್ಟಿ , ಐತ್ತಪ್ಪ ಶೆಟ್ಟಿ , ಕೇಶವ ತಲಪಾಡಿ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾರದಾ ಟೀಚರ್, ಚಲನಚಿತ್ರ ನಟ ಪ್ರಕಾಶ್ ತೂಮಿನಾಡು ಅವರನ್ನು ಸಮ್ಮಾನಿಸಲಾಗುವುದು. ರಾತ್ರಿ 9.30ಕ್ಕೆ ಮಂಜೇಶ್ವರ ಶಾರದಾ ಆಟ್ಸರ್್ ಕಲಾವಿದರಿಂದ `ಅಣ್ಣೆ ಬಪರ್ೆಗೆ' ತುಳು ನಾಟಕ ಪ್ರದರ್ಶನಗೊಳ್ಳಲಿದೆ.