ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2017
ಮಂಜೇಶ್ವರ ಬ್ಲಾಕ್ ಪಂಚಾಯತು ಕೇರಳೋತ್ಸವ ಉದ್ಘಾಟನೆ
ಉಪ್ಪಳ: ಮಂಜೇಶ್ವರ ಬ್ಲಾಕ್ ಪಂಚಾಯತು ಮಟ್ಟದ ಕೇರಳೋತ್ಸವ ಗುರುವಾರ ಮಣ್ಣಂಗುಳಿ ಮೈದಾನದಲ್ಲಿ ನಡೆಯಿತು. ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಮಮತಾ ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪ ಅಮೆಕ್ಕಳ, ಬ್ಲಾಕ್ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಾಫ, ಕಾರ್ಯದಶರ್ಿ ಅಬ್ದುಲ್ಲ, ಮಂಗಲ್ಪಾಡಿ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಂ.ಮುಸ್ತಾಫ, ಬ್ಲಾಕ್ ಪಂಚಾಯತು ಸದಸ್ಯರಾದ ಮಿಸ್ಬಾನ, ತಾಹಿರಾ, ಪ್ರಸಾದ್ ರೈ ಕಯ್ಯಾರ್, ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು. ವಾಲಿಬಾಲ್, ಪುಟ್ಬಾಲ್, ಹಗ್ಗಜಗ್ಗಾಟ ಮೊದಲಾದ ಸ್ಪಧರ್ೆಗಳು ನಡೆುತು.