ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಬೇರ್ಯತ್ತೆ ವೀಡು ತರವಾಡು ಸಮಿತಿ ಸಭೆ
ಕುಂಬಳೆ: ಮುಖಾರಿ ಮೂವಾರಿ ಸಮುದಾಯದ ವಿಷ್ಣುವಳ್ಳಿ ಕುಟುಂಬ ಬೇರ್ಯತ್ತೆ ವೀಡು ತರವಾಡು ಸಮಿತಿ ಹಾಗೂ ನಿಮರ್ಾಣ ಸಮಿತಿ, ಯುವಕರ ಸಮಿತಿ ಮತ್ತು ಮಾತೃ ಸಮಿತಿ ಮತ್ತು ಕುಟುಂಬಸ್ಥರ ವಿಶೇಷ ಸಭೆಯು ನ.5ರಂದು ಬೆಳಿಗ್ಗೆ 10ಗಂಟೆಗೆ ತರವಾಡು ಸಮಿತಿಯ ಗೌರವಾಧ್ಯಕ್ಷ ಮಹಾಲಿಂಗ ಮುಖಾರಿ ಬೆಳ್ಚಪ್ಪಾಡರ ಸ್ವಗೃಹ ಪೊನ್ನೆಂಗಳದಲ್ಲಿ ಜರಗಲಿದೆ.
ಪೊನ್ನೆಂಗಳ ಬೇರ್ಯದಲ್ಲಿ ಪುನರ್ ನಿಮರ್ಾಣಗೊಳ್ಳುತ್ತಿರುವ ಬೇರ್ಯತ್ತೆ ವೀಡು ಮೂಲ ತರವಾಡಿನ ಕೆಲಸವು ಭರದಿಂದ ಸಾಗುತ್ತಿದೆ. ಈಗಾಗಲೇ ತರವಾಡು ಮನೆ ಮತ್ತು ಶ್ರೀ ವಿಷ್ಣುಮೂತರ್ಿ ದೈವದ ಸ್ಥಾನದ ಅಡಿಪಾಯ ನಿಮರ್ಾಣ ಕಾರ್ಯವು ಕೊನೆಯ ಹಂತಕ್ಕೆ ತಲುಪಿದೆ. ಪ್ರತಿ ಭಾನುವಾರವೂ ಶ್ರಮದಾನದ ಮೂಲಕ ಹಲವಾರು ಮಂದಿ ಭಕ್ತಾದಿಗಳು ದುಡಿಯುತ್ತಿದ್ದಾರೆ.
ಈ ನಿಟ್ಟಿನಲ್ಲಿ ಆದಷ್ಟು ಬೇಗನೆ ತರವಾಡಿನ ನಿಮರ್ಾಣ ಕಾರ್ಯವನ್ನು ಪೂತರ್ಿಗೊಳಿಸಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವವನ್ನು ನಡೆಸುವುದರ ಬಗ್ಗೆ ಈ ಸಭೆಯಲ್ಲಿ ಚಚರ್ಿಸಿ ತೀಮರ್ಾನಿಸಲಾಗುವುದು. ಅಲ್ಲದೆ ಡಿಸೆಂಬರ್ 29ರಂದು ತರವಾಡಿನ ಶ್ರೀ ನಾಗದೇವರ ಪ್ರತಿಷ್ಠಾ ವಾಷರ್ಿಕ ಮಹೋತ್ಸವದ ಕುರಿತು ನಿರ್ಧರಿಸಲಾಗುವುದು. ಆದುದರಿಂದ ಈ ಜಂಟಿ ಸಭೆಯಲ್ಲಿ ಸಮಿತಿ ಸದಸ್ಯರು ಹಾಗೂ ಕುಟುಂಬಸ್ಥರು ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕೆಂದು ಪ್ರಮುಖರಾದ ನಾರಾಯಣ ಅಡ್ಕತ್ತಬೈಲು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.