ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಯುದ್ಧದಲ್ಲಿ ಹೋರಾಡಿ ಗೆಲ್ಲಲು ಸಿದ್ಧವಾಗಿರಿ, ಚೀನಾ ಸೇನೆಗೆ ಕ್ಸೀ ಜಿನ್ ಪಿಂಗ್ ಕರೆ
ಬೀಜಿಂಗ್: ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಚೀನಾ ಸೇನೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ.
ಹೋರಾಟದ ಸಾಮಥ್ರ್ಯವನ್ನು ಸುಧಾರಣೆ ಮಾಡಿಕೊಳ್ಳುವಂತೆ ಹಾಗೂ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ. ಚೀನಾದ ಕೇಂದ್ರೀಯ ಮಿಲಿಟರಿ ಕಮಿಷನ್ (ಸಿಎಂಸಿ)ಯ ತಪಾಸಣೆ ನಡೆಸಿದ ಬಳಿಕ ಯೋಧರನ್ನುದ್ದೇಶಿಸಿ ಮಾತನಾಡಿರುವ ಕ್ಸೀ ಜಿನ್ ಪಿಂಗ್, ಸೇನಾ ಯೋಧರನ್ನು ಯುದ್ಧ ಗೆಲ್ಲುವ ಹಾಗೂ ಹೋರಾಟಕ್ಕೆ ಸಿಎಂಸಿ ಮುನ್ನಡೆಸಬೇಕು ಎಂದು ಹೇಳಿದ್ದಾರೆ.
ಕಮ್ಯುನಿಷ್ಟ್ ಪಾಟರ್ಿ ಆಫ್ ಚೀನಾದ ಪ್ರಧಾನ ಕಾರ್ಯದಶರ್ಿಯಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಕ್ಸೀ ಜಿನ್ ಪಿಂಗ್ ಚೀನಾ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಯೋಧರಿಗೆ 2 ಬಾರಿ ಕರೆ ನೀಡಿದ್ದು ಈಗ ಮಹತ್ವ ಪಡೆದುಕೊಂಡಿದೆ.