ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2017
ಜಿಎಸ್ಟಿ: ವ್ಯಾಪಾರಿಗಳಿಗೆ ಕೇಂದ್ರದಿಂದ ತೆರಿಗೆ ರಿಯಾಯಿತಿ ಸಾಧ್ಯತೆ
ನವದೆಹಲಿ: ಜಿಎಸ್ಟಿ ಜಾರಿಯಿಂದ ತೊಂದರೆಗೊಳಗಾಗಿರುವ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ಮುಂದಿನ ವಾರ ಕೇಂದ್ರ ಸರಕಾರ ಸಹಾಯ ಹಸ್ತ ಚಾಚುವ ಸಾಧ್ಯತೆ ಇದೆ. ಜಿಎಸ್ಟಿ ಜಾರಿಯಿಂದ ತಾವು ಹೆಚ್ಚು ತೆರಿಗೆ ಪಾವತಿಸಬೇಕಾಗಿದೆ ಮತ್ತು ಆಡಳಿತ ವೆಚ್ಚ ಹೆಚ್ಚಾಗುತ್ತಿದೆ ಎಂದು ಈ ವರ್ಗದವರು ಅಸಮಧಾನ ವ್ಯಕ್ತಪಡಿಸಿದ್ದರು.
ನವೆಂಬರ್ 9 ಅಥವಾ 10ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು ವ್ಯಾಪಾರಿಗಳಿಗೆ ಸಹಾಯ ಮಾಡಲು ಮತ್ತು ದೇಶದ ಆಥರ್ಿಕತೆಯನ್ನು ಗಟ್ಟಿಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ ತಿಂಗಳು ಸಚಿವರ ಸಮಿತಿಯು ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಿಗಳ ತೆರಿಗೆ ಕಡಿತಗೊಳಿಸುವಂತೆ ಜಿಎಸ್ಟಿ ಮಂಡಳಿಗೆ ಶಿಫಾರಸ್ಸು ಮಾಡಿತ್ತು. ಕಂಪೆನಿಗಳು ತೆರಿಗೆ ಪಾವತಿಸಬೇಕಾದ ಗರಿಷ್ಠ ಮಿತಿಯನ್ನೂ ಏರಿಸುವಂತೆ ಸಮಿತಿ ಶಿಫಾರಸ್ಸು ಮಾಡಿತ್ತು.