ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಶೇಷವನ ಸಂಪರ್ಕ ರಸ್ತೆ ಹಾಗು ಸೇತುವೆ ಉದ್ಘಾಟನೆ
ಮಧೂರು: ಕೂಡ್ಲು ಸಮೀಪದ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕಿರುವ ಸಂಪರ್ಕ ರಸ್ತೆಯಾದ ಮಧೂರು ಗ್ರಾಮಪಂಚಾಯತು ನಿಮರ್ಿಸಿದ ನಾಂಗುರಿ ಶೇಷವನ ಕಾಂಕ್ರೀಟು ರಸ್ತೆ ಹಾಗು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಊರವರ ಸಹಾಯದಿಂದ ನಿಮರ್ಿಸಿದ ನಾಂಗುರಿ ತೋಡಿನ ಸೇತುವೆಯನ್ನು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಧೂರು ಗ್ರಾಮ ಪಂಚಾಯತು ಅಧ್ಯಕ್ಷೆ ಮಾಲತೀ ಸುರೇಶ್ ವಹಿಸಿದ್ದು, ಕಾಸರಗೋಡು ಬ್ಲಾಕ್ ಪಂಚಾಯತು ಸದಸ್ಯೆ ಯಶೋಧ, ಮಧೂರು ಗ್ರಾಮ ಪಂಚಾಯತು ಸದಸ್ಯ ಶ್ರೀಧರ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತು ಸದಸ್ಯೆ ಲೀಲ ಉಪಸ್ಥಿತರಿದ್ದು ಶುಭಹಾರೈಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಸದಾಶಿವ, ಸದಸ್ಯರಾದ ಕೃಷ್ಣ ಮಯ್ಯ, ರಾಜೇಶ್ ಹೊಳ್ಳ ಮಧೂರು ಮುಂತಾದವರು ಉಪಸ್ಥಿತರಿದ್ದರು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಆಡಳಿತ ಮೊಕ್ತೇಸರ ವೇಣುಗೋಪಾಲ ಕೂಡ್ಲು ಸ್ವಾಗತಿಸಿ, ಕಾರ್ಯದಶರ್ಿ ಸುರೇಶ್ ಮಣಿಯಾಣಿ ವಂದಿಸಿದರು. ಸದಸ್ಯ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್, ಶೇಷವನ ಯುವಕ ಸಂಘ, ಮಹಿಳಾ ಸಂಘ ಸಹಕರಿಸಿದರು.