ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
"ಸ್ನೇಹ ತಣಲ್" ಯೋಜನೆ ಉಧ್ಘಾಟನೆ
ಪೆರ್ಲ: ಎಂಡೋಸಲ್ಫಾನ್ ಬಾಧಿತ ಕುಟುಂಬಗಳ ತಾಯಂದಿರಿಗೆ ಸ್ವ-ಉದ್ಯೋಗದ ಗುರಿಯನ್ನಿರಿಸಿಕೊಂಡು ಪ್ರಾರಂಭಿಸಿದ ಸ್ನೇಹ ತಣಲ್ ಯೋಜನೆ ಮಾದರಿ ಯೋಜನೆಯೆಂದು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಹೇಳಿದರು.
ಅವರು ಪಂಚಾಯತು ಸಭಾಂಗಣದಲ್ಲಿ ಬಡ್ಸ್ ಶಾಲೆಯ ಪುಟಾಣಿಗಳ ಹೆತ್ತವರಿಗೆ "ಸ್ನೇಹ ತಣಲ್" ಯೋಜನೆಯನ್ನು ಗುರುವಾರ ಉಧ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯತು ನೇತೃತ್ವದಲ್ಲಿ ಮನೋರಮಾ ಹಾಗೂ ಕುಟುಂಬಶ್ರೀ ಮಿಷನ್ ಸಹಕಾರದೊಂದಿಗೆ ಪ್ರಾರಂಭಗೊಂಡ ಈ ಯೋಜನೆಯ ಉಧ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ ವಹಿಸಿದ್ದರು. ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜನಾಧಿಕಾರಿ ರಂಜಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಜನೆಯ ಜಿಲ್ಲಾ ಸಂಯೋಜಕಿ ಜ್ಯೋತಿಷ್ ವಿವರಣೆಯನ್ನು ನೀಡಿದರು.ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ.ಬಿ, ಜಯಶ್ರೀ ಕುಲಾಲ್, ಸದಸ್ಯೆರಾದ ಶಶಿಕಲಾ,ಬ್ಲಾಕ್ ಪಂಚಾಯತು ಸದಸ್ಯೆ ಸಫ್ರಿನಾ, ಕೆಡಿಸಿ ಪ್ರತಿನಿಧಿ,ಮನೋರಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಯೋಜನೆಯ ಪಂಚಾಯತು ಸಂಯೋಜಕಿ ಪ್ರವೀಣಾ ಸ್ವಾಗತಿಸಿ, ಸಿಡಿಎಸ್ ಉಪಾಧ್ಯಕ್ಷೆ ಶಾರದಾ ವಂದಿಸಿದರು. ಸುಮಾರು 20 ಜನ ತಾಯಂದಿರಿಗೆ ಬ್ಯಾಗ್ ಹಾಗೂ ಕೊಡೆ ತಯಾರಿಕೆ ಉಚಿತ ತರಬೇತಿ ಹಾಗಾ ಮಾರುಕಟ್ಟೆ ದೊರಕಿಸಿ ಕೊಡುವ ಈ ಯೋಜನೆಗೆ ಪಂಚಾಯತು ನೇತೃತ್ವ ನೀಡುತ್ತಿದ್ದು ಎಂಡೋಸಲ್ಫಾನ್ ಸಂತ್ರಪ್ತ ಕುಟುಂಬಗಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ.