ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಅಯ್ಯಪ್ಪ ತತ್ವ ಅಧ್ಯಯನ ಶಿಬಿರ
ಮಂಜೇಶ್ವರ: ಕೇರಳದಲ್ಲಿ ಹಿಂದು ಆಚಾರ ಪದ್ಧತಿಗಳಿಗೆ ಆಡಳಿತಾರೂಢ ಸರಕಾರಗಳು, ನಾಸ್ತಿಕವಾದಿಗಳು ನಿರಂತರ ದಾಳಿ, ಅಪಚಾರ ಮಾಡುತ್ತಿದ್ದರೂ, ಹಿಂದು ಸಮಾಜ ಇಂದಿಗೂ ಸುದೃಢವಾಗಿರುವುದು ಹಿಂದುಗಳ ಶಾಂತಿಯುತ ಹಾಗೂ ತಾಳ್ಮೆಯುತ ಧಾಮರ್ಿಕ ಚಿಂತನೆಯಿಂದ ಮತ್ತು ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯಿಂದ ಎಂದು ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜ (ಎಸ್ಎಎಸ್ಎಸ್)ದ ರಾಷ್ಟ್ರೀಯ ಉಪಾಧ್ಯಕ್ಷ , ಹಿರಿಯ ಧಾಮರ್ಿಕ ಚಿಂತಕ ಸ್ವಾಮಿ ಅಯ್ಯಪ್ಪದಾಸ್ ಹೇಳಿದರು.
ಮಂಜೇಶ್ವರ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಏಕದಿನ ಅಯ್ಯಪ್ಪ ತತ್ವ ಅಧ್ಯಯನ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ಚಟುವಟಿಕೆಗಳನ್ನು ಹಿಂದುಗಳು ಇನ್ನಷ್ಟು ಒಗ್ಗಟ್ಟಾಗಿ ಎದುರಿಸಬೇಕು. ಹಿಂದು ದೇವಾಲಯಗಳನ್ನು ಮಾತ್ರ ರಾಜ್ಯ ಸರಕಾರವು ಸ್ವಾನಪಡಿಸುತ್ತಿರುವುದು ಯಾಕೆಂದು ಒಟ್ಟಾಗಿ ಪ್ರಶ್ನಿಸಬೇಕು. ಅಲ್ಲದೆ ಇತರ ಮತ ಧರ್ಮದವರ ಆರಾಧನಾಲಯಗಳನ್ನು ತನ್ನ ತೆಕ್ಕೆಗೆ ತರಲು ಕೇರಳ ಸರಕಾರಕ್ಕೆ ಧೈರ್ಯ ಇದೆಯೇ ಎಂದವರು ಬಹಿರಂಗ ಸವಾಲು ಹಾಕಿದರು.
ಶಬರಿಮಲೆ ಪುಣ್ಯಕ್ಷೇತ್ರದಲ್ಲಿ ಸಂಗ್ರಹವಾಗುವ ಕೋಟ್ಯಾಂತರ ರೂಪಾಯಿಗಳನ್ನು ಯಾವ ರೀತಿ ವಿನಿಯೋಗಿಸಲಾಗುತ್ತಿದೆ ಎಂಬುದನ್ನು ರಾಜ್ಯ ಸರಕಾರವು ಜನರಿಗೆ ಬಹಿರಂಗಗೊಳಿಸಬೇಕು. ಹಜ್ ಯಾತ್ರೆಗೆ ಸಬ್ಸಿಡಿ ನೀಡುವ ಸರಕಾರವು, ಬಡ ಅಯ್ಯಪ್ಪ ಭಕ್ತರಿಗೆ ಹಾಗೂ ಅನ್ಯರಾಜ್ಯದ ಭಕ್ತಾದಿಗಳಿಗೆ, ವಾಹನಗಳಿಗೆ ಅನಗತ್ಯ ಸುಂಕ ಹೇರುತ್ತಿರುವುದು ಯಾವ ನ್ಯಾಯ ಹಾಗೂ ಇದೊಂದು ಅನ್ಯಾಯದ ಪರಮಾವ ಎಂದು ಅವರು ಕಟುಶಬ್ಧಗಳಲ್ಲಿ ನುಡಿದರು.
ಶ್ರೀ ಅಯ್ಯಪ್ಪ ಸೇವಾ ಸಮಾಜದ ಮಂಜೇಶ್ವರ ತಾಲೂಕು ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ ಮಾಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಶಶಿಧರ ಶೆಟ್ಟಿ , ಗುರುಸ್ವಾಮಿಗಳಾದ ಉಮೇಶ್ ಬಿ.ಎಂ., ಕುಟ್ಟಿಕೃಷ್ಣನ್, ಎಂ.ರಂಜಿತ್ಕುಮಾರ್ ಉಪಸ್ಥಿತರಿದ್ದರು. ಪದ್ಮನಾಭ ಕಡಪ್ಪರ ಸ್ವಾಗತಿಸಿ, ಆದಶರ್್ ಬಿ.ಎಂ. ವಂದಿಸಿದರು. ದಿನಕರ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು.