ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಭಾರತೀಯ ವಿದ್ಯಾಭ್ಯಾಸ ಚಿಂತನೆ ಕಲಾತ್ಮಕತೆಯ ಸಂಯೋಗ-ಡಾ.ಮಹೇಶ್ ಕುಳಕ್ಕೋಡ್ಲು
ಕುಂಬಳೆ ಉಪಜಿಲ್ಲಾ ಕಲೋತ್ಸವ ಉದ್ಘಾಟನೆ
ಬದಿಯಡ್ಕ: ವಿಶಿಷ್ಟವಾದ ಭಾರತೀಯ ಪರಂಪರೆಯಲ್ಲಿ ಮಾನವತೆ ದೊಡ್ಡ ಸಂಪನ್ಮೂಲವಾಗಿದ್ದು, ಸದ್ಬುದ್ದಿಯನ್ನು ವಿಕಸನಗೊಳಿಸುವ ವಿದ್ಯೆಯೆಂಬ ಮಹಾನ ಸಂಪತ್ತು ಜಗತ್ತಿಗೆ ದಾರಿದೀಪ. ಜ್ಞಾನದ ಉತ್ಕೃಷ್ಟತೆಗೆ ಭರತ ಖಂಡದ ಮಹಾನ್ ಕೊಡುಗೆಯ ಕಾರಣ ವಿವಿಧ ಜ್ಞಾನ ಶಾಖೆಗಳು ಕಲಾತ್ಮಕತೆಯೊಂದಿಗೆ ಬೆಳೆದು ಬಂತು ಎಂದು ಮುಂಬೈ ಐ.ಐ.ಟಿಯ ಸಂಶೋಧನಾ ವಿಜ್ಞಾನಿ ಡಾ.ಮಹೇಶ ಕುಳಕ್ಕೋಡ್ಲು ಅಭಿಪ್ರಾಯ ವ್ಯಕ್ತಪಡಿಸಿದರು.
ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಕುಂಬಳೆ ಉಪಜಿಲ್ಲಾ 58ನೇ ಶಾಲಾ ಕಲೋತ್ಸವದ ಗುರುವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸತ್ ಶಿಷ್ಯರಿಗೆ ಧಾರೆಯೆರೆವ ವಿದ್ಯೆ ಕಲ್ಪವೃಕ್ಷದಷ್ಟು ಸಮೃದ್ದತೆ ಹೊಂದಿ ಬದುಕಿಗೆ ಶೋಭೆ ತರುತ್ತದೆ ಎಂದು ತಿಳಿಸಿದ ಅವರು, ಭಾರತೀಯ ಪ್ರಾಚೀನ ವಿದ್ಯಾಭ್ಯಾಸ ಸಿದ್ದಾಂತವು ಕಲಾತ್ಮಕತೆಯೊಂದಿಗೆ ಮನಸ್ಸು, ಬುದ್ದಿ ಮತ್ತು ಅಂತಸ್ಸತ್ವವನ್ನು ಬೆಳಗಿಸುವ ಶಕ್ತಿ ಹೊಂದಿತ್ತು ಎಂದು ತಿಳಿಸಿದರು. ಅಭಿವ್ಯಕ್ತಿಯನ್ನು ಕಲಾತ್ಮಕವಾಗಿ ಬೆಳೆಸಿದಾಗ ಸುಂದರ ಸಂಸ್ಕೃತಿಯ ಪ್ರತೀಕವೆಂದ ಅವರು, ಬುದ್ದಿ ವಿಕಾಸ ಮತ್ತು ಕೌಶಲ ಈ ಮಣ್ಣಿನ ವಿದ್ಯೆಯ ಲಕ್ಷ್ಯ ಎಂದರು. ಈ ಹಿನ್ನೆಲೆಯಲ್ಲಿ ವಿದ್ಯೆಯೊಂದಿಗೆ ಮಿಳಿತಗೊಂಡಿರುವ ಕಲಾ ಸೊಗಡನ್ನು ಪ್ರೋತ್ಸಾಹಿಸಲು ಶಾಲೆಗಳಲ್ಲಿ ಹಮ್ಮಿಕೊಳ್ಳುವ ಕಲೋತ್ಸವ ಆರೋಗ್ಯಪೂರ್ಣ ಸ್ಪಧರ್ಾತ್ಮಕತೆಯೊಂದಿಗೆ ಸದಾಶಯ, ಸಮೃದ್ದತೆಗೆ ಕಾರಣವಾಗುವುದು ಎಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ, ಕಲೋತ್ಸವ ಸಮಿತಿ ರಕ್ಷಾಧಿಕಾರಿ ಕೆ.ಎನ್.ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಮಾತನಾಡಿ, ಮಕ್ಕಳ ಸಹಜ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಮಹತ್ತರ ಪಾತ್ರವಹಿಸುವ ಕಲೋತ್ಸವ ಇತ್ತೀಚೆಗೆ ಮಕ್ಕಳ ಹೆತ್ತವರ ಪ್ರತಿಷ್ಠೆಯ ಸ್ಪಧರ್ೆಗಳಾಗಿ ಮಾರ್ಪಡುತ್ತಿದ್ದು, ಇದು ವಿದ್ಯಾಥರ್ಿಗಳಿಗೆ ಅಧಿಕ ಹೊರೆಯಾಗಿ ನೈಜ ಪ್ರತಿಭೆಯ ಅನಾವರಣದಿಂದ ವಂಚಿತಗೊಳ್ಳುವ ಭೀತಿ ಎದುರಾಗುತ್ತಿದೆ ಎಂದು ಬೊಟ್ಟು ಮಾಡಿದರು. ಈ ಹಿನ್ನೆಲೆಯಲ್ಲಿ ಮಕ್ಕಳ ಆಸಕ್ತಿ, ಪ್ರತಿಭೆಯ ಮಟ್ಟವನ್ನು ಸೂಕ್ಷ್ಮವಾಗಿ ಗಮನಿಸಿ ಪ್ರೋತ್ಸಾಹಿಸಿದಾಗ ಗುರಿ ಸಾಫಲ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ಅರುಣಾ ಜೆ, ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ರೂಪವಾಣಿ ಆರ್. ಭಟ್, ಬ್ಲಾ.ಪಂ. ಸದಸ್ಯ ಎ.ಎಸ್.ಅಹಮ್ಮದ್ ಮಾನ್ಯ, ಅವಿನಾಶ ವಿ.ರೈ ಬದಿಯಡ್ಕ, ಬದಿಯಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಸೈಬುನ್ನೀಸಾ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಸದಸ್ಯರಾದ ಜಯಂತಿ, ಪ್ರೇಮಾ ಕುಮಾರಿ, ಶಂಕರ ಡಿ, ಮುನೀರ್, ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ, ಬ್ಲಾಕ್ ಸಂಪನ್ಮೂಲ ಕೇಂದ್ರದ ಯೋಜನಾಧಿಕಾರಿ ಕುಂಞಿಕೃಷ್ಣನ್ ಎನ್.ವಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕಂಬಾರ್, ನೀಚರ್ಾಲು ಕೆಎಸಿಎಂ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ, ಕುಂಬಳೆ ಉಪಜಿಲ್ಲಾ ಮುಖ್ಯೋಪಾಧ್ಯಾಯರ ಪೋರಂ ಅಧ್ಯಕ್ಷ ವಿಷ್ಣುಪಾಲ ಬಿ, ಮಾತೃಸಂಘಗಳ ಅಧ್ಯಕ್ಷರುಗಳಾದ ಜಯ ಎಸ್.ಭಟ್, ಸ್ಮಿತಾ ಶಮರ್ಾ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕೈಲಾಸಮೂತರ್ಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ವಂದಿಸಿದರು. ಶಿಕ್ಷಕ ವಿಶ್ವನಾಥ ಭಟ್ ಅರೋಳಿ ಕಾರ್ಯಕ್ರಮ ನಿರೂಪಿಸಿದರು.
ಕಲೋತ್ಸವ ಶನಿವಾರ ಅಪರಾಹ್ನ 5 ಗಂಟೆಗೆ ಸಮಾರೋಪಗೊಳ್ಳಲಿದ್ದು, ಕಾಸರಗೋಡು ಬ್ಲಾ.ಪಂ. ಅಧ್ಯಕ್ಷ ಸಿ.ಎಚ್ ಮೊಹಮ್ಮದ್ ಕುಂಞಿ ಚಾಯಂದಡಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪವನ್ನು ಉದುಮ ಶಾಸಕ ಕೆ.ಕುಂಞಿರಾಮನ್ ಉದ್ಘಾಟಿಸುವರು. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬದಿಯಡ್ಕ ಪೋಲೀಸ್ ಠಾಣಾಧಿಕಾರಿ ಕೆ.ಪ್ರಶಾಂತ್ ಹಾಗು ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಕೆ ಬಹುಮಾನ ವಿತರಿಸುವರು.