ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಜನರನ್ನು ತಟ್ಟುವ ಭಾವಗೀತೆಗಳು ಇಂದಿನ ಅಗತ್ಯ
ಗಾಯಕ ಗತರ್ಿಕೆರೆ ರಾಘಣ್ಣ
ಬದಿಯಡ್ಕ : ಸುಗಮ ಸಂಗೀತ ಕಲಾವಿದರಿಗೆ ಹಾಡಲು ಉತ್ತಮವಾದ ಭಾವಗೀತೆಗಳು ತೀರಾ ಅಗತ್ಯ. ಇಂದು ಅಂತಹ ಹಾಡುಗಳ ಅಗತ್ಯ ತುಂಬ ಇದೆ. 'ಮಧುರವಾಹಿನಿ' ಆ ಕೊರತೆಯನ್ನು ನೀಗಿಸುತ್ತದೆ ಎಂದು ಪ್ರಸಿದ್ಧ ಸುಗಮ ಸಂಗೀತ ಕಲಾವಿದ ಗತರ್ಿಕೆರೆ ರಾಘಣ್ಣ ಹೇಳಿದರು.
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಇತ್ತೀಚೆಗೆ ಜರಗಿದ ಸಮಾರಂಭದಲ್ಲಿ ಮಧುರಕಾನನ ಗಣಪತಿ ಭಟ್ಟರ 'ಮಧುರವಾಹಿನಿ' ಕವನ ಸಂಕಲನ ಮತ್ತು ಗಾನಮಧುರಂ ಎಂಬ ಸಿ. ಡಿ. ಹಾಗೂ ಮಧುರಕಾನನ ಗೋಪಾಲಕೃಷ್ಣ ಭಟ್ಟರ 'ರಾಗಸಂಗಮ' ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.
ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಮಾತನಾಡಿ, ಕಾಲಕಾಲಕ್ಕೆ ಕಾವ್ಯದ ಸ್ವರೂಪ ಬದಲಾಗುತ್ತದೆ. ನವೋದಯ ಮತ್ತು ನವ್ಯ ಕಾವ್ಯದ ಬಳಿಕ ಈಗ ಚುಟಕ ಮತ್ತು ಹನಿಗವನಗಳ ಕಾಲ ಬಂದಿದೆ. ಹಳಗನ್ನಡದ ದೀರ್ಘ ಕಾವ್ಯಗಳ ಅನುಭವವನ್ನು ಸಾವಿರಾರು ಹನಿಗವನಗಳನ್ನು ಒಟ್ಟಾಗಿ ಓದಿದಾಗ ಉಂಟಾಗಬಹುದು. ಹನಿಗವನಗಳೇ ಇಂದಿನ ವೈಶಿಷ್ಟ್ಯ ಎಂದು ಹೇಳಿದರು.
ಸಂಗೀತಜ್ಞ ಯು. ಎಸ್. ರಾಮಕೃಷ್ಣ ಭಟ್ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಬೇ. ಸೀ. ಗೋಪಾಲಕೃಷ್ಣ ಭಟ್ ಅವರು ಕೃತಿಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗತರ್ಿಕೆರೆ ರಾಘಣ್ಣ ( ಸುಗಮ ಸಂಗೀತ), ಪೆರಡಂಜಿ ಗೋಪಾಲಕೃಷ್ಣ ಭಟ್ ಬದಿಯಡ್ಕ (ಯಕ್ಷಗಾನ), ನಾಗರಾಜ ಭಟ್ ಸುಳ್ಯ (ಪೌರೋಹಿತ್ಯ), ಶ್ರೀದೇವಿ ಗತರ್ಿಕೆರೆ (ಗಾಯನ), ಕೆ. ವಿ. ರಮೇಶ ಕಾಸರಗೋಡು (ಗೊಂಬೆಯಾಟ), ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ (ನೃತ್ಯ), ಪಾಣಿನಿ ದೇರಾಜೆ (ಸಂಗೀತ) ಮೊದಲಾದವರನ್ನು ಸನ್ಮಾನಿಸಲಾಯಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪ್ರೊ. ವಿ. ಬಿ.ಅತರ್ಿಕಜೆ ಹಾಗೂ ಬಿ. ಪುರಂದರ ಭಟ್ ಶುಭಾಶಂಸನೆಗೈದರು.
ಕೃತಿಕಾರ ಮಧುರಕಾನನ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಾಧ್ಯಾಪಕಿ ವಿಜಯಾಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ವಿಧಾತ್ರಿ ಸ್ವಾಗತಗೀತೆ ಹಾಡಿದರು. ಅಡ್ಕ ಕೃಷ್ಣ ಭಟ್ ವಂದಿಸಿದರು.
ಬಳಿಕ ಗತರ್ಿಕೆರೆ ರಾಘಣ್ಣ, ಶ್ರೀದೇವಿ ಗತರ್ಿಕೆರೆ ಮತ್ತು ಬಳಗದವರು ಭಾವಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಎಡನೀರಿನ ಭೂಮಿಕಾ ಪ್ರತಿಷ್ಠಾನದ ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ನೃತ್ಯರೂಪಕ ಪ್ರದಶರ್ಿಸಿದರು.