ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ನವೀಕರಣದ ಕೂಪನ್ ಬಿಡುಗಡೆ
ಬದಿಯಡ್ಕ: ದೇವಾಲಯಗಳು ,ಭಜನಾ ಮಂದಿರಗಳೆಲ್ಲಾ ನಾಡಿನ ಸುಭಿಕ್ಷೆಯನ್ನುಂಟುಮಾಡುವ ಧಾಮರ್ಿಕ ಕೇಂದ್ರಗಳಾಗಿವೆ.ಅವುಗಳ ಜೀಣರ್ೊದ್ಧಾರ ಕಾರ್ಯದಲ್ಲಿ ತೊಡಗುವುದರಿಂದ ಆ ಪ್ರದೇಶದ ಕ್ಲೇಶಗಳೆಲ್ಲಾ ದೂರವಾಗುತ್ತದೆ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರೂ , ಮಜೀರ್ಪಳ್ಳ ಕಟ್ಟೆ ಶ್ರೀ ಮಣಿಕಂಠ ಭಜನಾ ಮಂದಿರದ ಜೀಣರ್ೊದ್ಧಾರ ಸಮಿತಿಯ ಅಧ್ಯಕ್ಷರಾದ ಕೆ.ಎನ್ ಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಕಿಳಿಂಗಾರು ಮಜೀರ್ಪಳ್ಳ ಕಟ್ಟೆ ಶ್ರೀ ಮಣಿಕಂಠ ಭಜನಾ ಮಂದಿರದ ನವೀಕರಣದ ಕೂಪನ್ನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರತಿಯೊಂದು ಕ್ಷೇತ್ರಗಳ ಜೀಣರ್ೊದ್ಧಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತದ್ದು ನಮ್ಮ ಪಾಲಿಗೊದಗುವ ಮಹಾ ಭಾಗ್ಯವಾಗಿದೆ.ಆದುದರಿಂದ ಪ್ರತಿಯೋರ್ವರೂ ಜೀಣರ್ೊದ್ಧಾರ ಕಾರ್ಯಗಳಲ್ಲಿ ತೊಡಗಬೇಕೆಂದು ಜೀಣರ್ೊದ್ಧಾರ ಸಮಿತಿಯ ಗೌರವ ಅಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಈ ಸಂದರ್ಭ ಆಶೀರ್ವಚನ ನೀಡಿ ಮಾತನಾಡಿದರು.
ವೇಣುಗೋಪಾಲ ರೈ ಪುತ್ತಿಗೆ, ಮರಕ್ಕಾಡ್ ನಾರಾಯಣ ಗುರುಸ್ವಾಮಿ, ಆನಂದ ಗುರುಸ್ವಾಮಿ, ಸುಕುಮಾರ ಕುದ್ರೆಪ್ಪಾಡಿ,ಸುರೇಶ್ ನಿಡುಗಳ,ಶಿವರಾಮ ಮೆಣಸಿನಪಾರೆ,ಬಾಬು ಗುರುಸ್ವಾಮಿ ಪುತ್ತಿಗೆ, ಅಪ್ಪಣ್ಣ ಸೀತಾಂಗೋಳಿ, ಭುಜಂಗ ಬೇರ್ಯ ಮೊದಲಾದವರು ಉಪಸ್ಥಿತರಿದ್ದರು.
ಜೀಣರ್ೊದ್ಧಾರ ಸಮಿತಿಯ ಕಾರ್ಯದಶರ್ಿ ಪ್ರದೀಪ್ ಮಾಸ್ಟರ್ ಬೇಳ ಸ್ವಾಗತಿಸಿ, ಗಣೇಶ್ ಪಿ.ಯಂ ಮುಂಡಾನ್ತಡ್ಕ ವಂದಿಸಿದರು.