HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮುತ್ತು ನೀರಾಗದು-ಕವನ ಸಂಕಲನ ಬಿಡುಗಡೆ ಮಂಜೇಶ್ವರ: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಟ್ರಸ್ಟ್ ಮತ್ತು ರಾ.ಗೋ.ಪೈ ಸ್ಮಾರಕ ಸಮಿತಿ ಸಹಕಾರದೊಂದಿಗೆ ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿಯವರ "ಮುತ್ತು ನೀರಾಗದು" ಕವನ ಸಂಕಲನ ಬಡುಗಡೆ, ಕವಿಗೋಷ್ಠಿ, ಕೃತಿ ಪರಿಚಯ ಮತ್ತು ಕಾವ್ಯಗಾಯನ ಕಾರ್ಯಕ್ರಮ ನ.11 ರಮದು ಅಪರಾಹ್ನ 2.30ಕ್ಕೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿನಲ್ಲಿ ನಡೆಯಲಿದೆ. ಸರಸ್ವತಿ ಸನ್ಮಾನ್ ಪುರಸ್ಕೃತ ಡಾ.ಎಂ. ವೀರಪ್ಪ ಮೊಯಿಲಿ ಕೃತಿ ಬಿಡುಗಡೆಗೊಳಿಸುವರು. ಸಂಶೋಧಕ ಡಾ.ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು. ಕವಿ, ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ಕೃತಿ ಪರಿಚಯ ಮಾಡುವರು. ಜಿಲ್ಲಾಧಿಕಾರಿ ಜೀವನ್ ಬಾಬು ಕೆ, ಕಸಾಪ ಕೇರಳ ಗಡಿನಾಡ ಘಟಕಾದ್ಯಕ್ಷ ಎಸ್.ವಿ.ಭಟ್, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಡಾ.ಯು.ಮಹೇಶ್ವರಿಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಶ್ರೀಕೃಷ್ಣಯ್ಯ ಅನಂತಪುರ, ವಿಜಯಲಕ್ಷ್ಮೀ ಶಾನುಭೋಗ್, ಡಾ.ರತ್ನಾಕರ ಮಲ್ಲಮೂಲೆ, ಡಾ.ಧನಂಜಯ ಕುಂಬ್ಳೆ, ಅಶೋಕ್ ಕುಮಾರ್ ಕಾಸರಗೋಡು, ಬಾಲ ಮಧುರಕಾನನ, ಯೋಗೀಶ್ ರಾವ್ ಚಿಗುರುಪಾದೆ, ಸತ್ಯವತಿ ಕೊಳಚ್ಚಪ್ಪು, ನೀರಬಿದಿರೆ ನಾರಾಯಣ ಸುಳ್ಯ, ವಿ.ಬಿ.ಕುಳಮರ್ವ, ಹರೀಶ್ ಸುಲಾಯ ಒಡ್ಡಂಬೆಟ್ಟು, ಪುರುಷೋತ್ತಮ ಭಟ್ ಕೆ, ಅಕ್ಷತಾ ರಾಜ್ ಪೆರ್ಲ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸುವರು. ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಹಾಗು ಡಾ.ಅನ್ನಪೂಣರ್ೇಶ್ವರಿ ಏತಡ್ಕ ಅವರಿಂದ ಕಾವ್ಯ ಗಾಯನ ನಡೆಯಲಿದೆ. ಕೃತಿ ಸಂಭ್ರಮ: ಉದಯೋನ್ಮುಖ ಲೇಖಕರ ಪುಸ್ತಕಗಳನ್ನು ಪ್ರದರ್ಶನ, ಪರಿಚಯ ಹಾಗು ಮಾರಾಟಕ್ಕೆ ಜಿಲ್ಲಾ ಲೇಖಕರ ವಸಂಘ ಕೃತಿ ಸಂಭ್ರಮ ಯೋಜನೆ ಇರಿಸಿದೆ. ಯೋಜನೆಯಲ್ಲಿ ಭಾಗವಹಿಸುವವರ ಒಂದೊಂದು ಪುಸ್ತಕ ಕೇಂದ್ರೀಕರಿಸಿ ಚೀಟಿ ಎತ್ತುವ ಮೂಲಕ ಎರಡು ನಗದು ಬಹುಮಾನವನ್ನು ನೀಡಲಾಗುವುದು. ಬಹುಮಾನದ ಮೊತ್ತ ಸಭೆಯಲ್ಲಿ ನಿರ್ಧರಿಸಲಾಗುವುದು. ಯೋಜನೆಯಲ್ಲಿ ಭಾಗವಹಿಸಿದ ಕೃತಿಗಳನ್ನು ಪಾಯೋಜಕರಿಗೆ ಅಥವಾ ಸಂಸ್ಥೆಗೆ ನೀಡಬೇಕು. ಮುಂದಿನ ಸರಣಿ ಕಾರ್ಯಕ್ರಮದಲ್ಲಿ ಅವುಗಳ ಅವಲೋಕನ ಮತ್ತು ಆಸ್ವಾದನೆಗೆ ಒಡ್ಡಲಾಗುವುದು. ಹೆಚ್ಚಿನ ಮಾಹಿತಿಗೆ 9446297226, 09495104578 ಸಂಖ್ಯೆಗೆ ಕರೆಮಾಡಿ ಸಂಪಕರ್ಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries