ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಅಹಂ ತೊರೆದರೆ ಆತ್ಮ ಮತ್ತು ಪರಮಾತ್ಮರ ನಡುವೆ ಅವಿನಾಭಾವ ಸಂಬಂಧ ಬೆಳೆಯಲು ಸಾಧ್ಯ : ಸಾದ್ವಿ ಕಾಶಿಕಾನಂದ
ಕುಂಬಳೆ: ನಾನು ನನ್ನದು ನನ್ನಿಂದಲೇ ಎಂಬ ಅಹಂ ತೊರೆದಾಗಲೇ ಮಾತ್ರ ಆತ್ಮ ಮತ್ತು ಪರಮಾತ್ಮರ ನಡುವೆ ಅವಿನಾಭಾವ ಸಂಬಂಧ ಬೆಳೆಯಲು ಸಾಧ್ಯ. ಜೀವನದ ಎಲ್ಲಾ ಜಂಜಾಟವನ್ನು ಮರೆತು ಭಗವಂತನನ್ನು ಮುಕ್ತವಾಗಿ ಸೇರಿಸುವುದೇ ಭಜನೆ. ಅಂತಹ ಭಜನಾ ಕಾರ್ಯಕ್ರಮಗಳು ಎಲ್ಲಾ ಕಡೆ ನಡೆಯಬೇಕು. ಕನಕದಾಸರ ಕೀರ್ತನೆಗಳ ಒಳ ಅರ್ಥಗಳನ್ನು ಮನದಟ್ಟು ಮಾಡಿಕೊಂಡರೆ ಸಾಕು ಮನುಷ್ಯ ಪರಮಾತ್ಮನಿಗೆ ಹತ್ತಿರವಾಗುವುದರಲ್ಲಿ ಸಂಶಯವಿಲ್ಲ ಎಂದು ಕಾಸರಗೋಡು ಚಿನ್ಮಯ ಮಿಷನ್ನ ಸಾದ್ವಿ ಕಾಶಿಕಾನಂದ ಅವರು ಹೇಳಿದರು.
ಹನುಮ ಭಕ್ತ ಮಹಿಳಾ ವೃಂದ ಭಜನಾ ಸಂಘ ಕುಂಬಳೆ ಇದರ ಆಶ್ರಯದಲ್ಲಿ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ ಐದನೇ ವರ್ಷದ ಕನಕದಾಸ ಆರಾಧನೋತ್ಸವದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜೀವನದಲ್ಲಿ ಯಾವಾಗ ನಾವು ಸ್ಥಿತ ಪ್ರಜ್ಞರಾಗಿರುತ್ತೇವೆಯೋ ಆಗ ನಮ್ಮ ಜೀವನ ಸಾರ್ಥಕತೆ ಹೊಂದುತ್ತದೆ. ಭಜನಾ ಸಂಘದ ಮೂಲಕ ಮಾತ್ರವೇ ಸಾಮಾಜಿಕ, ಧಾಮರ್ಿಕ ಕ್ರಾಂತಿ ಸಾಧ್ಯ. ಆ ಕ್ರಾಂತಿ ಮೂಲಕವೇ ಒಂದು ಉತ್ತಮ ಸಮಾಜವನ್ನು ರೂಪಿಸಲು ಸಾಧ್ಯ ಎಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರು ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಮಾನವನಾಗಿ ಹುಟ್ಟಿದ ಮೇಲೆ ಸ್ವಾರ್ಥ ರಹಿತ ಸೇವೆ ನೀಡಬೇಕು. ಭಕ್ತಿ ಶ್ರದ್ಧೆಯ ಮೂಲಕ ಮಾತ್ರ ಭಗವಂತ ಒಲಿಯುತ್ತಾನೆ ಎಂದು ಅನಂತಪುರ ದೇವಸ್ಥಾನದ ಕಾರ್ಯದಶರ್ಿ ರಾಮಚಂದ್ರ ಭಟ್ ಹೇಳಿದರು.
ಧಾಮರ್ಿಕ ಮುಂದಾಳು ಗಣಪತಿ ಕೋಟೆಕಣಿ, ಆಶಾ ರಾಧಾಕೃಷ್ಣ, ಕೃಷ್ಣಮೂತರ್ಿ ಕೋಟೆಮನೆ, ಅನಂತಪದ್ಮನಾಭ ದೇವಸ್ಥಾನದ ಮೊಕ್ತೇಸರ ರಾಘವ ನಾಯರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೇಮಾ ಗೋಕುಲ್ದಾಸ್ ಅಧ್ಯಕ್ಷತೆ ವಹಿಸಿದ್ದರು. ರಸ ಪ್ರಶ್ನೆ ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾವ್ಯ ಕುಶಲ ಪಾರೆಕಟ್ಟೆ ಸ್ವಾಗತಿಇಸ, ನಿರೂಪಿಸಿದರು.