ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸುದೃಢ ಭವಿಷ್ಯ
ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಸ್ರ ಸಂಖ್ಯೆಯ ಸಹೋದರಿಯರು ಸಬಲೆಯಾಗುವುದರೊಂದಿಗೆ ಸ್ವ ಉದ್ಯೋಗವನ್ನು ಮಾಡುವುದರ ಮೂಲಕ ಸುದೃಢ ಭವಿಷ್ಯಕ್ಕೆ ತೆರೆದುಕೊಳ್ಳುವಂತಾಗಿದೆ ಎಂದು ಕೇರಳ ಜಾನಪದ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಭಾಗವತ ನಾರಾಯಣ ಮಾಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ಹಣದ ಉಳಿತಾಯ, ಸ್ವ ಉದ್ಯೋಗದ ಜೊತೆಗೆ ಸಮಗ್ರ ಗ್ರಾಮಾಭಿವೃದ್ದಿಯನ್ನು ಲಕ್ಷ್ಯವಿರಿಸಿ ಕೃಷಿ ಅಭಿವೃದ್ದಿ, ಕೌಶಲ್ಯ ತರಬೇತಿ, ಮದ್ಯವರ್ಜನ ಶಿಬಿರಗಳಂತಹ ಎಲ್ಲಾ ವಿಭಾಗಗಳ ಅಭಿವೃದ್ದಿಗೆ ಯೋಜನೆ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳ ಅದ್ಬುತ ಯಶಸ್ವಿಯಾಗುತ್ತಿದ್ದು, ಪ್ರತಿಯೊಬ್ಬರ ಅಳಿಲ ಸೇವೆ ಅಗತ್ಯ ಎಂದು ಅವರು ತಿಳಿಸಿದರು.
ಅವರು ಅಡೂರು ಸಮೀಪದ ಮಾಟೆಬಯಲಿನಲ್ಲಿ ಇತ್ತೀಚೆಗೆ ನಡೆದ ಶ್ರೀ ವಿಷ್ಣು ಸ್ವ ಸಹಾಯ ಸಂಘದ ಮೂರನೇ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಘದ ಅಧ್ಯಕ್ಷೆ ರೇವತಿ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ವಲಯ ಮೇಲ್ವಿಚಾರಕ ಉದಯ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೇವಾ ಪ್ರತಿನಿಧಿ ನಯನಾ, ಒಕ್ಕೂಟದ ಉಪಾಧ್ಯಕ್ಷ ದಾಕೋಜಿ ರಾವ್ ಸಂಜೆಕಡವು ಉಪಸ್ಥಿತರಿದ್ದರು. ಕಾರ್ಯದಶರ್ಿ ರೇಣುಕಾ ವರದಿ ವಾಚಿಸಿದರು.
ಸಂಘದ ಸದಸ್ಯೆ ಶೋಭಾ ಸ್ವಾಗತಿಸಿ, ಕೋಶಾಧಿಕಾರಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.