ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಗುರುವಂದನೆ-ರಂಗಪ್ರವೇಶೋತ್ಸವ
ಪೆರ್ಲ: ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಇಂದು ಏಕೈಕ ನಾಟ್ಯ ಸಹಿತ ಹಿಮ್ಮೇಳ ತರಬೇತಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಪಡ್ರೆಚಂದು ಸ್ಮಾರಕ ಕೇಂದ್ರ ಕರಾವಳಿಯ ಹೆಮ್ಮೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಪ್ರತಿಯೊಬ್ಬ ಕಲಾಪ್ರೇಮಿಗಳ ಸಹಕಾರದಿಂದ ಕೇಂದ್ರವನ್ನು ಇನ್ನಷ್ಟು ಬೆಳೆಸುವ ನಿಟ್ಟಿನ ಕಾರ್ಯಯೋಜನೆ ಅಗತ್ಯವಿದೆ ಎಂದು ಹಿರಿಯ ಕಲಾಪೋಷಕ ಡಾ. ಎಸ್.ಎನ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವತಿಯಿಂದ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದು ಮೇಳಕ್ಕೆ ಸೇರ್ಪಡೆಗೊಳ್ಳುವ ವಿದ್ಯಾಥರ್ಿಗಳ ಗುರುವಂದನೆ ಹಾಗೂ ರಂಗಪ್ರವೇಶೋತ್ಸವ ಕಾರ್ಯಕ್ರಮವನ್ನು ಪೆರ್ಲ ಸತ್ಯನಾರಾಯಣ ಮಂದಿರದಲ್ಲಿ ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಗ್ರ ಕಲಾಕ್ಷೇತ್ರದ ಬೆಳವಣಿಗೆಗೆ ಪಡ್ರೆಚಮದು ಸ್ಮಾರಕ ಕೇಂದ್ರ ಉತ್ತಮ ನಿದರ್ಶನವಾಗಿದ್ದು, ಪಾರಂಪರಿಕ ಅಧ್ಯಯನಕ್ಕೆ ಒತ್ತು ನೀಡುತ್ತಿರುವುದು ಸ್ತುತ್ಯರ್ಹವೆಂದು ಅವರು ತಿಳಿಸಿದರು. ಸಮಾನ ಮನಸ್ಕರ ಸಹಭಾಗಿತ್ವದಿಂದಷ್ಟೆ ಇಂತಹ ಕೇಂದ್ರಗಳನ್ನು ಮುನ್ನಡೆಸಬಹುದಾಗಿದ್ದು, ಈ ನಿಟ್ಟಿನ ಗಂಭೀರ ಚಿಂತನೆಗಳಾಗಬೇಕೆಮದು ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್ನ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸ.ನಾ ಹೈಸ್ಕೂಲ್ನ ಮುಖ್ಯ ಶಿಕ್ಷಕ ಬಿ.ರಾಜೇಂದ್ರ, ಶ್ರೀ ಸ.ನಾ ಹೈಸ್ಕೂಲ್ನ ಅಧ್ಯಾಪಕರು ಮತ್ತು ಭಾಗವತರಾದ ಸತೀಶ್ ಪುಣಿಂಚಿತ್ತಾಯ,.ಶ್ರೀಧರ ಪಂಜಾಜೆ ಉಪಸ್ಥಿತರಿದ್ದು ಶುಭಹಾರೈಸಿದರು. ಸಭೆಯಲ್ಲಿ ಕೇಂದ್ರದ ನಿದರ್ೇಶಕ, ಯಕ್ಷಗಾನ ಗುರು ಸಬ್ಬಣಕೋಡಿ ರಾಮ ಭಟ್ ರವರನ್ನು ಗೌರವಿಸಲಾಯಿತು. ರಾಮ ಭಟ್ ಸಬ್ಬಣಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು. ಉದಯಶಂಕರ ಅಮೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವೀರವೈಷ್ಣವ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.