ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ!
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ ಸಂಭವಿಸಿದೆ.
ಪಾಲಂ ಏರ್ ಫೋಸರ್್ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವಾಗಲೇ ವ್ಯಕ್ತಿಯೋರ್ವ ಪಿಚ್ ಗೆ ಕಾರು ನುಗ್ಗಿಸಿರುವುದು ಭದ್ರತಾ ಲೋಪಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ 2 ನೇ ಇನ್ನಿಂಗ್ಸ್ ಆಡುತ್ತಿರಬೇಕಾದರೆ ಈ ಘಟನೆ ನಡೆದಿದ್ದು, ಭದ್ರತಾ ಲೋಪ ಸಂಭವಿಸಿರುವುದರಿಂದ 20 ನಿಮಿಷ ಮೊದಲೇ ದಿನದ ಆಟವನ್ನು ಮುಕ್ತಾಯಗೊಳಿಸಲಾಗಿದೆ.
ಗಿರೀಶ್ ಶರ್ಮ ಎಂಬ ವ್ಯಕ್ತಿ ವಾಗನಾರ್ ಕಾರನ್ನು ಕ್ರೀಡಾಂಗಣದ ಒಳಗೆ ನುಗ್ಗಿಸಿದ್ದು, ಪ್ರಧಾನ ಗೇಟ್ ಬಳಿ ಭದ್ರತಾ ಸಿಬ್ಬಂದಿ ಹಾಜರಿಲ್ಲದೇ ಇದ್ದದ್ದೇ ಈ ಅವಾಂತರ ನಡೆಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಗಿರೀಶ್ ಶಮರ್ಾನನ್ನು ವಶಕ್ಕೆ ಪಡೆದ ಏಫರ್ೋಸರ್್ ಪೊಲೀಸರು ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರಾದ ಇಶಾಂತ್ ಶರ್ಮ, ಗೌತಮ್ ಗಂಭೀರ್, ರಿಷಭ್ ಪಂತ್ ಇದ್ದರು.
ಬೆಂಗಳೂರಿಗೆ ತೆರಳುತ್ತಿದ್ದ ನನ್ನ ಸಹೋದರಿಯನ್ನು ಏರ್ ಪೋಟರ್್ ಗೆ ಡ್ರಾಪ್ ಮಾಡಲು ಹೋಗಿ ವಾಪಸ್ಸಾಗುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಕ್ರಿಕೆಟ್ ನಡೆಯುತ್ತಿರುವುದನ್ನು ಗಮನಿಸಿದೆ, ಎಂಟ್ರಿ ಗೇಟ್ ನಲ್ಲಿ ಯಾರೂ ಇರಲಿಲ್ಲ, ಅಷ್ಟೇ ಅಲ್ಲದೇ ಕಾರನ್ನು ಎಲ್ಲಿ ಪಾಕರ್್ ಮಾಡಬೇಕು ಎಂಬುದನ್ನು ಹೇಳಲೂ ಯಾರೂ ಇರಲಿಲ್ಲ, ಜೊತೆಗೆ ನೆಚ್ಚಿನ ಆಟಗಾರರನ್ನು ಭೇಟಿಯಾಗಬೇಕೆಂದೆನಿಸಿ ಕಾರನ್ನು ಸೀದಾ ಮೈದಾನದೊಳಗೆ ಕೊಂಡೊಯ್ದೆ ಎಂದು ಬಂಧಿತ ಗಿರೀಶ್ ಶಮರ್ಾ ಹೇಳಿದ್ದಾರೆ.