ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಕುಟುಂಬದಲ್ಲಿ ಭಯೋತ್ಪಾದಕರಿರುವುದನ್ನು ಬಯಸುವುದಿಲ್ಲ: ಸುಪ್ರೀಂ ನಿಧರ್ಾರ ಸ್ವಾಗತಿಸಿದ ಹಾದಿಯಾ ತಂದೆ
ಪಿಟಿಐ ಚಿತ್ರ
ನವದೆಹಲಿ: ಬಲವಂತದಿಂದ ಮತಾಂತರ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಯುವತಿ ಹಾದಿಯಾ ಅವರ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂಕೋಟರ್್ ಆದೇಶವನ್ನು ಹಾದಿಯಾ ತಂದೆ ಸ್ವಾಗತಿಸಿದ್ದಾರೆ. ಜತೆಗೆ, ಮನೆಯೊಳಗೆ ಒಬ್ಬ ಉಗ್ರ ಇರುವುದಕ್ಕೆ ಸಾಧ್ಯವಿಲ್ಲ ಎಂದು ಪ್ರತಿಕ್ರಿಸಿದ್ದಾರೆ.
ತಮ್ಮ ಮಗಳು ಹಾದಿಯ ಇಸ್ಲಾಂ ಧರ್ಮಕ್ಕೆ ಮತಾಂತರವಾದ ನಂತರ ಸಿರಿಯಾಕ್ಕೆ ತೆರಳಲು ಬಯಸಿದ್ದಾಳೆ. ಸಿರಿಯಾ ಬಗೆಗಿನ ಯಾವ ಕಲ್ಪನೆಯೂ ಆಕೆಗಿಲ್ಲ. ಅಲ್ಲಿಗೆ ಹೋದ ನಂತರ ಏನಾಗಬಹುದು ಎನ್ನುವುದೂ ಅವಳಿಗೆ ಗೊತ್ತಿಲ್ಲ ಎಂದು ಕೆ.ಎಂ ಅಶೋಕನ್ ಹೇಳಿದ್ದಾರೆ.
ನನ್ನ ಮಗಳು ಸಿರಿಯಾಕ್ಕೆ ತೆರಳಿದ್ದರೆ ನಾವು ಅಹಿತಕರ ಅನುಭವಗಳನ್ನು ಅನುಭವಿಸಬೇಕಾಗುತ್ತಿತ್ತು. ಸುಪ್ರೀಂಕೋಟರ್್ ಅವಳ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಸಂತಸವಾಗಿದೆ ಎಂದು ಹೇಳಿದ್ದಾರೆ.
ಅಂತರ-ಧಾಮರ್ಿಕ ವಿವಾಹಗಳ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ನಾನು ಒಂದು ಧರ್ಮ ಮತ್ತು ಒಬ್ಬ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ' ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಾದಿಯಾ ಅವರು ಸೋಮವಾರ ಸುಪ್ರೀಂ ಕೋಟರ್್ ಮುಂದೆ ಹಾಜರಾಗಿದ್ದರು. ಎರಡು ಗಂಟೆ ಕಾಲ ನಡೆದ ವಿಚಾರಣೆಯ ವೇಳೆ ತಾವು ಮದುವೆಗೆ ಮುಂಚೆ ಓದುತ್ತಿದ್ದ ಹೋಮಿಯೋಪಥಿ ವ್ಯಾಸಂಗವನ್ನು ಮುಂದುವರಿಸುವುದಾಗಿ ಮತ್ತು ಗಂಡ ಸಫಿನ್ ಜಹಾನ್ ಜತೆಗೆ ಇರಲು ಬಯಸುವುದಾಗಿ ಹೇಳಿಕೆ ನೀಡಿದ್ದರು.
ವಿಚಾರಣೆಯ ಬಳಿಕ ಸೇಲಂನಲ್ಲಿರುವ ಹೋಮಿಯೋಪಥಿ ಕಾಲೇಜಿಗೆ ಹೋಗುವುದಕ್ಕೆ ಹಾದಿಯಾ ಅವರಿಗೆ ಭದ್ರತೆ ಒದಗಿಸುವಂತೆ ಕೇರಳ ಪೊಲೀಸರಿಗೆ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಸೂಚನೆ ನೀಡಿತ್ತು. ಜತೆಗೆ ಕಾಲೇಜಿನ ಡೀನ್ ಅವರನ್ನು ಹಾದಿಯಾ ಅವರ ಪಾಲಕರಾಗಿ ಪೀಠ ನೇಮಿಸಿ, ಯಾವುದೇ ಸಮಸ್ಯೆ ಎದುರಾದ ಸಂದರ್ಭದಲ್ಲಿ ಸುಪ್ರೀಂ ಕೋರ್ಟನ್ನು ನೇರವಾಗಿ ಸಂಪಕರ್ಿಸುವ ಸ್ವಾತಂತ್ರ್ಯವನ್ನು ಅವರಿಗೆ ನೀಡಿತ್ತು.
ಹಾದಿಯಾ ಅವರನ್ನು ಮರುಸೇರ್ಪಡೆ ಮಾಡುವಂತೆ ಮತ್ತು ಅವರಿಗೆ ಹಾಸ್ಟೆಲ್ ಸೌಲಭ್ಯ ಒದಗಿಸುವಂತೆಯೂ ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಪೀಠ ಸೂಚಿಸಿತ್ತು.
ಕಳೆದ ಡಿಸೆಂಬರ್ನಲ್ಲಿ ಹಾದಿಯಾ ಅವರು ಮುಸ್ಲಿಂ ಯುವಕ ಸಫಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. ಇದೊಂದು ಲವ್ ಜಿಹಾದ್ ಪ್ರಕರಣ ಎಂದಿದ್ದ ಹಾದಿಯಾ ಪೋಷಕರು ತಮ್ಮ ಮಗಳನ್ನು ಬಲವಂತದಿಂದ ಮತಾಂತರ ಮಾಡಲಾಗಿದೆ. ಈ ವಿವಾಹವನ್ನು ರದ್ದುಗೊಳಿಸಬೇಕು ಎಂದು ಕೇರಳ ಹೈಕೋಟರ್್ಗೆ ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಕೇರಳ ಹೈಕೋಟರ್್, ಹಾದಿಯಾ?ಸಫಿನ್ ಮದುವೆಯನ್ನು ರದ್ದು ಮಾಡಿ ಇದೊಂದು `ಲವ್ ಜಿಹಾದ್' ಪ್ರಕರಣ ಎಂದು ಬಣ್ಣಿಸಿತ್ತು. ಜತೆಗೆ ಇಂತಹ ಪ್ರಕರಣಗಳ ತನಿಖೆ ನಡೆಸುವಂತೆ ಕೇರಳ ಪೊಲೀಸರಿಗೆ ಸೂಚಿಸಿತ್ತು.
ಕೇರಳ ಹೈಕೋಟರ್್ ಆದೇಶವನ್ನು ಪ್ರಶ್ನಿಸಿ ಸಫಿನ್ ಅವರು ಸುಪ್ರೀಂ ಕೋಟರ್್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.