ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಅಪರೂಪದ ಪದವಿ
ಕಾಬೂಲ್ (ಎಎಫ್ಪಿ): ಅಫ್ಗಾನಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಆರಂಭಿಸಲಾದ 'ಮಹಿಳಾ ಅಧ್ಯಯನ' ಕೋಸರ್್ನಲ್ಲಿ ಪದವಿ ಪಡೆದ ವಿದ್ಯಾಥರ್ಿನಿಯರು ಟೋಪಿ ಮತ್ತು ನಿಲುವಂಗಿ ಧರಿಸಿ ತಮ್ಮ `ಅಪರೂಪದ ಪದವಿ'ಯ ಬಗ್ಗೆ ಹೆಮ್ಮೆ ಪಟ್ಟುಕೊಂಡರು.
`ಪುರುಷ ಪ್ರಧಾನ ದೇಶವೆಂದೇ ಬಿಂಬಿತವಾಗಿರುವ ಅಫ್ಗಾನಿಸ್ತಾನದ ಕಾಬೂಲ್ ವಿಶ್ವವಿದ್ಯಾಲಯ ಉನ್ನತ ಪದವಿಯಲ್ಲಿ ಲಿಂಗ ಮತ್ತು ಮಹಿಳೆಯರ ಕುರಿತಾದ ಪದವಿ ಆರಂಭಿಸಲಾಗಿದೆ. ಸ್ತ್ರೀವಾದ, ಮಾಧ್ಯಮ, ನಾಗರಿಕ ಸಮಾಜ, ಸಂಘರ್ಷ? ಸಂಕಲ್ಪ ಇತ್ಯಾದಿ ವಿಷಯಗಳಿಗೆ ಇದರಲ್ಲಿ ಒತ್ತು ನೀಡಲಾಗಿದೆ' ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಒಟ್ಟು 22 ಮಂದಿ ಪದವಿ ಪಡೆದಿದ್ದು, ಈ ಪೈಕಿ 7ಮಂದಿ ಪುರುಷರು.
`1996-2001 ಇಸ್ಲಾಮಿಕ್ ಆಡಳಿತದ ಸಮಯದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಹಿಳೆಯರು ಮನೆಯಲ್ಲಿ ಇರಲಷ್ಟೇ ಅರ್ಹರು ಎಂಬ ಮನೋಭಾವ ಆಗ ಇತ್ತು. ಈ ನಿರ್ಬಂಧ ಕ್ರಮೇಣ ಕಡಿಮೆಯಾಗುತ್ತಾ ಬಂದರೂ ಮಹಿಳೆಯರಿಗೆ ಎರಡನೆಯ ದಜರ್ೆಯನ್ನೇ ನೀಡಲಾಗುತ್ತಿತ್ತು. ಆದ್ದರಿಂದ 'ಮಹಿಳಾ ಅಧ್ಯಯನ' ಪದವಿ ಹೊಸದೊಂದು ಆಸೆಯನ್ನು ಮಹಿಳೆಯರಲ್ಲಿ ಹುಟ್ಟುಹಾಕಿದೆ.