ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
"ಧರ್ಮ ಸಂಸದ್' ನಿರ್ಣಯ ಶೀಘ್ರ ಕೇಂದ್ರಕ್ಕೆ ಸಲ್ಲಿಕೆ
ಉಡುಪಿ: ಉಡುಪಿಯಲ್ಲಿ ಜರಗಿದ "ಧರ್ಮಸಂಸದ್'ನಲ್ಲಿ ಸಂತರು ಕೈಗೊಂಡಿರುವ ನಿರ್ಣಯಗಳನ್ನು ಶೀಘ್ರ?ದಲ್ಲಿಯೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನ ಕಾರ್ಯದಶರ್ಿ ಗೋಪಾಲ್ ಅವರು ತಿಳಿಸಿದ್ದಾರೆ.
"ಧರ್ಮಸಂಸದ್' ಯಶಸ್ಸಿಗೆ ಕಾರಣ?ಕರ್ತರಾದವರಿಗೆ ಕೃತಜ್ಞತೆ ಸಲ್ಲಿಸುವ ಪ್ರಯಕ್ತ ಪತ್ರಿಕಾಗೋಷ್ಠಿಯಲ್ಲಿ ಮಾತ?ನಾಡಿದ ಅವರು, ಅಯೋಧ್ಯೆಯಲ್ಲಿ ಮುಂದಿನ ಒಂದು ವರ್ಷದೊಳಗೆ ರಾಮ?ಮಂದಿರ ನಿಮರ್ಾಣ ಕಾರ್ಯ ಆರಂಭ?ವಾಗಬೇಕು, ಗೋರಕ್ಷಣೆಗಾಗಿ ಕಾನೂನು ರೂಪಿಸಿ ಗೋವು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲ್ಪಡಬೇಕು, ಅಸ್ಪೃಶ್ಯತೆ ಸಂಪೂರ್ಣವಾಗಿ ದೂರವಾಗಬೇಕು, ಅಲ್ಪ?ಸಂಖ್ಯಾಕರಿಗೆ ದೊರೆಯುವ ಸೌಲಭ್ಯಗಳು ಬಹುಸಂಖ್ಯಾಕರಿಗೂ ದೊರೆಯಬೇಕು, ದೇವಸ್ಥಾನಗಳು ಸರಕಾರಿ ಆಡಳಿತದಿಂದ ಮುಕ್ತವಾಗಿ ಸಂತರು, ಭಕ್ತರ ಕೈಗೆ ಸಿಗ?ಬೇಕು, ದೇವಾಲಯಗಳ ಹಣ ಧಾಮರ್ಿಕ ಕಾರ್ಯಗಳಿಗೆ ಮಾತ್ರ ಬಳಸಲ್ಪಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದನ್ನು ಸರಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ಪೇಜಾವರ ಶ್ರೀಗಳು ಪ್ರೇರಕ ಶಕ್ತಿ
"ಧರ್ಮಸಂಸದ್' ಸೇರಿದಂತೆ ನಮ್ಮೆಲ್ಲಾ ಚಟುವಟಿಕೆಗಳಿಗೆ ಪೇಜಾವರ ಶ್ರೀಗಳು ಪ್ರೇರಕ ಶಕ್ತಿಯಾಗಿದ್ದಾರೆ. ಕಾರ್ಯಕರ್ತರು ರೂಪಿಸಿದ "ಹಿಂದೂವೈಭವ ಪ್ರದಶರ್ಿನಿ' ವೀಕ್ಷಣೆ ಮಾಡಲೇಬೇಕೆಂದು ನ. 26ರಂದು (ಧರ್ಮಸಂಸದ್ ಕೊನೆಯ ದಿನ) ರಾತ್ರಿ 9.40ಕ್ಕೆ ಆಗಮಿಸಿ ಒಂದು ತಾಸು ವೀಕ್ಷಿಸಿದ್ದಾರೆ. ಇದು ಅವರು ನೀಡುತ್ತಿರುವ ಪ್ರೇರಣೆ, ಸ್ಫೂತರ್ಿಗೆ ಒಂದು ಉದಾಹರಣೆ ಎಂದು ಗೋಪಾಲ್ ಹೇಳಿದರು.
ಪೊಲೀಸರು ಕೂಡ ಉತ್ತಮವಾಗಿ ಸಹಕರಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಅಲ್ಲಿನ ಪೊಲೀಸರು ಹಿಂದೂ ಕಾರ್ಯಕರ್ತರಿಗೆ ಬೈಕ್ಯರ್ಾಲಿ ಮಾಡಲು ಬಿಡಲಿಲ್ಲ. ಆದರೆ ಉಡುಪಿಯಲ್ಲಿ ಅವಕಾಶ ದೊರೆಯಿತು. ಭಜನಮಂಡಳಿ, ಉಡುಪಿ ನಾಗರಿಕರು, ಹೊಟೇಲುಗಳು ಸಹಿತ ಎಲ್ಲರೂ ವಿಶೇಷ ರೀತಿ?ಯಲ್ಲಿ ಸಹಕರಿ?ಸಿದ್ದಾರೆ. ಉಡುಪಿಯ ಓರ್ವ ವೃದ್ಧ ಮಹಿಳೆ "ಧರ್ಮ ಸಂಸದ್'?ಗಾಗಿ 6,000 ರೂ. ಧನ?ಸಹಾಯ ನೀಡಿ?ದ್ದಾರೆ. ಇಡೀ ಸಮಾಜ ನಮ್ಮ ಜತೆಗೆ ಸಹಕರಿ?ಸಿದೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯೋಗಿ ಆದಿತ್ಯನಾಥ ಸಹಿತ ನಾವು ಆಹ್ವಾನಿಸಿದ ಗಣ್ಯರೆಲ್ಲರೂ ಆಗಮಿಸುವ ವಿಶ್ವಾಸವಿತ್ತು. ಆದರೆ ಕೆಲವೊಬ್ಬರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಉಳಿದವರೆಲ್ಲರೂ ನಿರೀಕ್ಷೆಯಂತೆಯೇ ಆಗಮಿಸಿದ್ದಾರೆ ಎಂದು ತಿಳಿಸಿದರು.
ವಿಹಿಂಪ ಪ್ರಾಂತಕಾರ್ಯದಶರ್ಿ ಟಿ.ಎ.ಪಿ. ಶೆಣೈ, ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ನಗರಾಧ್ಯಕ್ಷ ಸಂತೋಷ್ ಸುವರ್ಣ ಬೊಳೆರಿ ಉಪಸ್ಥಿತರಿದ್ದರು.
ತಡೆಯಲಾಗದ ಜನಪ್ರವಾಹ
ಶೋಭಾಯಾತ್ರೆಯನ್ನು ನಿಗದಿತ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ಆರಂಭಿಸಲಾಯಿತು. ಜನಪ್ರವಾಹವನ್ನು ತಡೆಯಲು ಅಸಾಧ್ಯವಾದ ಕಾರಣ ಈ ರೀತಿ ಮಾಡುವುದು ಅನಿವಾರ್ಯವಾಯಿತು. ನಾವು ನಿರೀಕ್ಷೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಹಿಂದೂ ಬಾಂಧವರು ಸ್ಪಂದಿಸಿದ್ದಾರೆ. ಸಂತರು ಕೂಡ ನಿರೀಕ್ಷಿತ ಸಂಖ್ಯೆಗಿಂತಲೂ ಹೆಚ್ಚಾಗಿ ಆಗಮಿಸಿ ಸಹಕರಿಸಿದ್ದಾರೆ ಎಂದು ಗೋಪಾಲ್ ತಿಳಿಸಿದರು.
24 ಗಂಟೆಗಳಲ್ಲಿ ಸುತ್ತೋಲೆ ವಾಪಸ್!
"ಹಿಂದೂ ವೈಭವ' ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರದರ್ಶನವಾಗಿತ್ತೇ ಹೊರತು ನಿದರ್ಿಷ್ಟ ಧರ್ಮ, ಜಾತಿಯನ್ನು ಪ್ರತಿನಿಧಿಸುವಂತದ್ದಾಗಿರಲಿಲ್ಲ. ಆದರೆ ಮೊದಲು ಇದರ ವೀಕ್ಷಣೆಗೆ ಶಾಲಾ ವಿದ್ಯಾಥರ್ಿಗಳನ್ನು ಕಳುಹಿಸುವಂತೆ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ 24 ಗಂಟೆಗಳಲ್ಲಿ ಅದನ್ನು ವಾಪಸ್ ತೆಗೆದುಕೊಂಡಿತು. ಆದರೂ ಅನೇಕ ಶಾಲೆಗಳ ಮುಖ್ಯಸ್ಥರು ವಿದ್ಯಾಥರ್ಿಗಳನ್ನು ಕರೆತಂದು ಅವರಿಗೆ ಅಪೂರ್ವ ವಸ್ತುಪ್ರದರ್ಶನ ತೋರಿಸಿ ಪುರಾತನ ವೈಭವ, ಸಂಸ್ಕೃತಿಯ ಜ್ಞಾನ ನೀಡಿದ್ದಾರೆ ಎಂದು ಪ್ರಾಂತ ಕಾಯರ್ಾಧ್ಯಕ್ಷ ಎಂ.ಬಿ. ಪುರಾಣಿಕ್ ಅವರು ತಿಳಿಸಿದರು.