ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಮಹಾಜನ ವರದಿ ಮತ್ತೆ ಮತ್ತೆ ಕೆದಕಬೇಕು : ಭೀಮಾಶಂಕರ ಪಾಟೀಲ
ಕಾಸರಗೋಡು: ಕಾಸರಗೋಡಿನ ಕನ್ನಡಿಗರ ಕರುಳಬಳ್ಳಿಯ ಸಂಕಟದ ನೋವಿನ ಕಥೆ ಮಹಾಜನ ವರದಿಯಲ್ಲಿ ಅಡಗಿದೆ. ನೋವು ಇನ್ನೂ ಹಸಿಯಾಗಿಯೇ ಇರುವುದರಿಂದ ಅದನ್ನು ಮತ್ತೆ ಮತ್ತೆ ಕೆದಕಬೇಕು ಎಂದು ಮನಸ್ಸು ಹಂಬಲಿಸುತ್ತಲೇ ಇದೆ. ಸತತ ಪ್ರಯತ್ನದಿಂದ ಮಹಾಜನ ವರದಿಯನ್ನು ಜಾರಿಗೊಳಿಸುವ ಮೂಲಕ ಇಲ್ಲಿನ ಕನ್ನಡ ವಿರೋಧಿಗಳಿಗೆ ಎಚ್ಚರಿಕೆಯ ಕರೆಘಂಟೆಯನ್ನು ಬಾರಿಸಬೇಕು. ಗಡಿನಾಡು ಕಾಸರಗೋಡನ್ನು ಅಖಂಡ ಕನರ್ಾಟಕದ ನಕ್ಷೆಯೊಳಗೆ ಸೇರಿಸುವ ಪ್ರಯತ್ನ ಕೊನೆಯ ಉಸಿರಿರುವವರೆಗೂ ಸಿದ್ಧ ಎಂದು ಕನರ್ಾಟಕ ನವನಿಮರ್ಾಣ ಸೇನೆ ಬೆಂಗಳೂರು ಇದರ ಅಧ್ಯಕ್ಷ ಭೀಮಾಸಂಕರ ಪಾಟೀಲ ಅವರು ಹೇಳಿದರು.
ಕನರ್ಾಟಕ ನವನಿಮರ್ಾಣ ಸೇನೆ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬು`ವಾರ ಮಹಾಜನ ವರದಿ ಏನು..?ಎತ್ತ..? ಗಡಿನಾಡಿನ ಪ್ರಸ್ತುತ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನರ್ಾಟಕ ರಾಜ್ಯೋದಯವಾಗಿ 62 ವರ್ಷಗಳಾದರೂ ಮಹಾರಾಷ್ಟ್ರ, ಆಂಧ್ರ, ಕೇರಳ ರಾಜ್ಯಗಳಿಗೆ ಹಂಚಿ ಹೋದ ಅನೇಕ ಅಚ್ಛ ಕನ್ನಡ ಪ್ರದೇಶಗಳು ಗಂಭೀರ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಆ ಪ್ರದೇಶಗಳೆಲ್ಲ ಅಖಂಡ ಕನರ್ಾಟಕದ ಆಸ್ತಿಗಳು. ಇನ್ನೂ ಕೂಡಾ ಅವುಗಳನ್ನು ಕನರ್ಾಟಕದೊಳಗೆ ಸೇರಿಸಿಕೊಳ್ಳಲು ಅಸಾಧ್ಯವಾಗಿರುವುದೆಂದು ಬಹು ದೊಡ್ಡ ದುರಂತವೆಂದೇ ಹೇಳಬಹುದು. ಗಡಿನಾಡುಗಳಲ್ಲಿ ಹಂತ ಹಂತವಾಗಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಮುಂದಿನ ದಿನಗಳಲ್ಲಾದರೂ ಕೇರಳದ ವಿದಾನಸ`ೆಯಲ್ಲಿ ಕನ್ನಡದ ಬಾವುಟ ಹಾರಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕನರ್ಾಟಕ ನವನಿಮರ್ಾಣ ಸೇನೆ ಕೇರಳ ಘಟಕಾಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಿರಾಳಕೊಪ್ಪ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ನವೀನ್ಕುಮಾರ್, ಸಾಹಿತಿ ಮಹದೇವಪ್ಪ, ಕಾಸರಗೋಡಿನ ಹಿರಿಯ ಹೋರಾಟಗಾರ ಅಡೂರು ಉಮೇಶ ನಾಕ್, ಕಲಬುಗರ್ಿ ಕನರ್ಾಟಕ ನವನಿಮರ್ಾಣ ಸೇನೆಯ ಅಧ್ಯಕ್ಷ ರವಿ ದೇಗಾಂವ, ಕಾಸರಗೋಡು ಸರಕಾರೀ ಕಾಲೇಜಿನ ಸ್ನೇಹರಂಗದ ಅಧ್ಯಕ್ಷ ಬಾಲಕೃಷ್ಣ ಬೆಳಿಂಜೆ, ಕಾಸರಗೋಡು ನಗರ ಸಭೆ ಕೌನ್ಸಿಲರ್ಗಳಾದ ಸವಿತಾ ಟೀಚರ್ ಹಾಗೂ ಶಂಕರ್, ದಯಾನಂದ ಕುಮಾರ್ ಹೊಸದುರ್ಗ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಸಾಹಿತಿ ರಾ`ಾಕೃಷ್ಣ ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಬಿ.ಸತ್ಯನಾರಾಯಣ ಸ್ವಾಗತಿಸಿ, ದಿವಾಕರ ಅಶೋಕನಗರ ವಂದಿಸಿದರು. ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು.