ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಆದಯಾತ್ಮಿಕ ನೆಲೆಗಟ್ಟಿನ ಬದುಕು ಸೌಖ್ಯ ನೀಡುತ್ತದೆ-ರಾಘವೇಶ್ವರ ಶ್ರೀ
ಏಣಿಯಪರ್ು ಈಶಾವಾಸ್ಯದ ಮೊಕ್ಕಾಂ ನಲ್ಲಿ ಅನುಗ್ರಹ
ಬದಿಯಡ್ಕ: ಶ್ರೀರಾಮಾನುಗ್ರಹದಿಂದ ಕಲಿಯುಗ ತ್ರೇತಾಯುಗವಾಗುವ ಶಕ್ತಿಹೊಂದಿದೆ. ಸನ್ಮಾರ್ಗದ ಕರ್ಮ ಸಾಧನೆಯಿಂದ ಭಗವದನುಗ್ರ ಪ್ರಾಪ್ತಿಯಾಗುತ್ತದೆ. ನಿಷ್ಕಲ್ಮಶ ಭಕ್ತಿ ಸಕಲ ದುರಿತಗಳನ್ನು ನಿವಾಳಿಸಿ ಸನ್ಮಂಗಳಕ್ಕೆ ಕಾರಣವಾಗುವುದು ಎಂದು ಶ್ರೀಮದ್ ಹೊಸನಗರ ಮಠಾಧೀಶ ಶ್ರೀರಾಘವೇಶ್ವರ ಭಾರತಿ ಶ್ರೀಗಳು ಅನುಗ್ರಹ ಭಾಷಣ ಮಾಡಿದರು.
ನೀಚರ್ಾಲು ಸಮೀಪದ ಏಣಿಯಪರ್ು ಬಾಲಕೃಷ್ಣ ಭಟ್ ರವರ ಈಶಾವಾಸ್ಯ ಮನೆಯಲ್ಲಿ ಸೋಮವಾರ ಹಾಗು ಮಂಗಳವಾರ ನಡೆಸಿದ ಮೊಕ್ಕಾಂ ನ ಭಾಗವಾಗಿ ಮಂಗಳವಾರ ಮಧ್ಯಾಹ್ನ ಅನುಗ್ರಹ ಭಾಷಣಗೈದು ಅವರು ಮಾತನಾಡಿದರು.
ಶ್ರೀಮಠದ ಸಕಲ ಯೋಜನೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಮುಳ್ಳೇರಿಯ ಮಂಡಲದ ಕಾರ್ಯಕರ್ತ ಭಕ್ತರ ಶ್ರದ್ದೆ ಇತರರಿಗೆ ಮಾದರಿಯಾಗಿದ್ದು, ಸಂತುಷ್ಠ ಜೀವನ ಎಲ್ಲರಿಗೂ ಶ್ರೀರಾಮಾನುಗ್ರಹದಿಂದ ಪ್ರಾಪ್ತಿಯಾಗುವುದೆಂದು ಅವರು ತಿಳಿಸಿದರು. ಆಧ್ಯಾತ್ಮಿಕ ನೆಲೆಗಟ್ಟಿನ ಸಮಾಜ ಸುಭದ್ರವಾಗಿ ಯಾವುದೇ ತೊಡರುಗಳಿಲ್ಲದೆ ಬೆಳೆದು ಬರುತ್ತದೆ. ಪ್ರತಿಯೊಂದು ಜೀವರಾಶಿಯಲ್ಲೂ ಭಗವಂತನ ಶಕ್ತಿಯನ್ನು ಕಾಣುವ, ನೆರವಾಗುವ ಮನಸ್ಸು ಎಲ್ಲರಲ್ಲೂ ಅಂತರಾಳದಿಂದ ಹೊಮ್ಮಿಬರಲಿ ಎಂದು ತಿಳಿಸಿದ ಶ್ರೀಗಳು, ಮಠದ ಶ್ರದ್ದಾಳುಗಳಿಗೆ ಅನುಗ್ರಹ ಪೂರ್ಣವಾಗಿ ಇದೆ ಎಂದು ಆಶೀರ್ವಚನವಿತ್ತರು.
ಏಣಿಯರ್ಪ ಬಾಲಕೃಷ್ಣ ಭಟ್ ದಂಪತಿಗಳಿಗೆ ಸ್ವರ್ಣ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಹರಸಿದರು. ಮುಳ್ಳೇರಿಯಾ ಮಂಡಲ ಪ್ರಮುಖರು, ವಿವಿಧ ವಲಯಗಳ ಮುಖಂಡರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಂಗಳವಾರ ಬೆಳಿಗ್ಗೆ ಕುಂಬಳೆ ಸೀಮೆಯ ಪ್ರಧಾನ ಪ್ರಥಮ ಪೂಜಿತ ಕ್ಷೇತ್ರ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.