ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ನ.8 : `ಮಹಾಜನ ವರದಿ ಏನು ? ಎತ್ತ ?' ಚಿಂತನ ಕಾರ್ಯಕ್ರಮ
ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಮತ್ತು ಕನರ್ಾಟಕ ನವನಿಮರ್ಾಣ ಸೇನೆ ಕೇರಳ ರಾಜ್ಯ ಘಟಕದ ಸಂಯುಕ್ತ ಆಶ್ರಯದಲ್ಲಿ ನ.8 ರಂದು ಮಧ್ಯಾಹ್ನ 1 ಗಂಟೆಗೆ ವಿದ್ಯಾನಗರದ ಚಿನ್ಮಯ ಕಾಲನಿಯ ಶ್ರೀಕೃಷ್ಣ ಮಂದಿರದಲ್ಲಿ ಮಹಾಜನ ವರದಿ ಏನು? ಎತ್ತ?, ಗಡಿನಾಡಿನ ಪ್ರಸ್ತುತ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ಚಿಂತನೆ ಕಾರ್ಯಕ್ರಮ ನಡೆಯಲಿದೆ.
ಕನರ್ಾಟಕ ನವನಿಮರ್ಾಣ ಸೇನೆ ಕೇರಳ ರಾಜ್ಯ ಘಟಕ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕನರ್ಾಟಕ ನವನಿಮರ್ಾಣ ಸೇನೆ ಬೆಂಗಳೂರು ರಾಷ್ಟ್ರೀಯ ಅಧ್ಯಕ್ಷ ಭೀಮಾಶಂಕರ ಪಾಟೀಲ ಅವರು ಉದ್ಘಾಟಿಸುವರು.
ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ನವೀನ್ ಕುಮಾರ್, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್, ಕಾಸರಗೋಡು ನಗರಸಭಾ ಸದಸ್ಯ ಶಂಕರ್, ಮಂಗಳೂರಿನ ಓಮೆಗಾ ಆಸ್ಪತ್ರೆಯ ಆಡಳಿತಾಧಿಕಾರಿ ಎಸ್.ಎಲ್.ಭಾರದ್ವಾಜ್ ಬೇಕಲ್, ಬೆಳಗಾವಿ ಕ.ನ.ಸೇ. ಜಿಲ್ಲಾಧ್ಯಕ್ಷ ಪ್ರಕಾಶ್ ಗಾಯಕವಾಡ್, ಕಲಬುಗರ್ಿ ಕ.ನ.ಸೇ. ಜಿಲ್ಲಾಧ್ಯಕ್ಷ ರವಿ ದೇಗಾಂವ, ಬೆಂಗಳೂರು ನಗರ ಕ.ನ.ಸೇ. ಪ್ರಶಾಂತ ಗೌಡ, ಮಂಡ್ಯ ಕ.ನ.ಸೇ. ನವೀನ್ ಗೌಡ, ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಕೆ.ಗುರುಪ್ರಸಾದ ಕೋಟೆಕಣಿ, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಬಿ.ಸತ್ಯನಾರಾಯಣ ಹಾಗೂ ಕಾಸರಗೋಡಿನ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು.