ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಕುಂಬಳೆ ಕುತ್ಯಾಳ ಶ್ರೀ ರಕ್ತೇಶ್ವರಿ ದೈವಸ್ಥಾನದ ನೂತನ ಪಧಾದಿಕಾರಿಗಳ ಆಯ್ಕೆ:
ಕುಂಬಳೆ : ಕುತ್ಯಾಳ ಶ್ರೀ ರಕ್ತೇಶ್ವರಿ ಗುಳಿಗ ನಾಗಬ್ರಹ್ಮ ದೈವಸ್ಥಾನದಲ್ಲಿ ವಾಷರ್ಿಕ ಮಹಾಸಭೆ ಭಾನುವಾರ ದೈವಸ್ಥಾನದ ಪರಿಸರದಲ್ಲಿ ನಡೆಯಿತು. ಸಭೆಯಲ್ಲಿ ದೈವಸ್ಥಾನದ ನೂತನವಾಗಿ ಸೇವಾ ಸಮಿತಿ ಮತ್ತು ಭಜನಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸೇವಾ ಸಮಿತಿಯ ಅಧ್ಯಕ್ಷರಾಗಿ ಪದ್ಮನಾಭ ಪೂಜಾರಿ ಪೆಲ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರವೀಣ್ ಹೆಗ್ಡೆ ಮತ್ತು ಮಂಜುಳಾ ಹೆಗ್ಡೆ, ಪ್ರಧಾನ ಕಾರ್ಯದಶರ್ಿಯಾಗಿ ಹರೀಶ್ ಬಳ್ಳಂಪಾಡಿ, ಕಾರ್ಯದಶರ್ಿಯಾಗಿ ರಾಮಚಂದ್ರ ಪೂಜಾರಿ ಮತ್ತು ಸುಮಿತ್ರಾ ಪಾಟಾಳಿ, ಕೋಶಾಧಿಕಾರಿಯಾಗಿ ತ್ಯಾಂಪಣ್ಣ ರೈ, ಲೆಕ್ಕ ಪರಿಶೋದಕರಾಗಿ ಶರತ್ ಕುಮಾರ್ ಜೆ.ಕೆ. ಮತ್ತು ಸಮಿತಿ ಸದಸ್ಯರಾಗಿ ಸಂತೋಷ್ ಗಟ್ಟಿ, ಹರೀಶ್ ಶೆಟ್ಟಿ, ಮನೋಜ್ ಗಟ್ಟಿ, ಲತಾ ಭಂಡಾರಿ ಮತ್ತು ಜ್ಯೋತಿ ಗಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.
ಭಜನಾ ಸಮಿತಿಗೆ ಅಧ್ಯಕ್ಷರಾಗಿ ರಾಮಚಂದ್ರ ಗಟ್ಟಿ, ಉಪಾಧ್ಯಕ್ಷರಾಗಿ ಸುಮಿತ್ರಾ ಕುಲಾಲ್, ಪ್ರಧಾನ ಕಾರ್ಯದಶರ್ಿಯಾಗಿ ಶ್ರೀಧರ ಗಟ್ಟಿ, ಕಾರ್ಯದಶರ್ಿಯಾಗಿ ಮಮತಾ ಗಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಮಚಂದ್ರ ಗಟ್ಟಿ ಸ್ವಾಗತಿಸಿ, ಹರೀಶ್ ಬಳ್ಳಂಪಾಡಿ ವಂದಿಸಿದರು.