HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಭಾರತೀಯರೇ ನಮಗೆಲ್ಲಾ ಸ್ಫೂತರ್ಿ: ಇವಾಂಕ ಟ್ರಂಪ್ ಹೈದರಾಬಾದ್: ಭಾರತೀಯರೇ ನಮಗೆಲ್ಲಾ ಸ್ಫೂತರ್ಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾತರ್ಿ ಇವಾಂಕ ಟ್ರಂಪ್ ಅವರು ಮಂಗಳವಾರ ಹೇಳಿದ್ದಾರೆ. ಮಂಗಳವಾರ ಮಧ್ಯಾಹ್ನ ಮುತ್ತಿನಗರಿಯಲ್ಲಿ ಅಮೆರಿಕ ಸಹಭಾಗಿತ್ವದಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾದ ಮೊದಲ ಜಾಗತಿಕ ಉದ್ಯಮಶೀಲತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಇವಾಂಕ, ಭಾರತ ಅಮೆರಿಕದ ನಿಜವಾದ ಸ್ನೇಹಿತ ಮತ್ತು ಅತ್ಯಂತ ವೇಗವಾಗಿ ಆಥರ್ಿಕ ಅಭಿವೃದ್ಧಿ ಸಾಧಿಸುತ್ತಿರುವ ದೇಶ ಎಂದರು. 70ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಭಾರತೀಯರನ್ನು ನಾನು ಅಭಿನಂದಿಸುತ್ತೇನೆ. ಬಾಲ್ಯದಲ್ಲಿ ಚಾಹ ಮಾರುತ್ತಿದ್ದ ವ್ಯಕ್ತಿ ಇಂದು ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲದ ಪರಿವರ್ತನೆ ಅಥವಾ ಬದಲಾವಣೆ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇವಾಂಕ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ವಿಶ್ವಕ್ಕೆ ಭರವಸೆಯ ರಾಷ್ಟ್ರವಾಗಿ ಕಾಣಿಸುತ್ತಿದೆ. ಮೋದಿ ಪ್ರಜಾಪ್ರಭುತ್ವದ ಸಂಕೇತವಾಗಿದ್ದಾರೆ. ಈ ಶೃಂಗಸಭೆಯು ಭಾರತ ಮತ್ತು ಅಮೆರಿಕ ನಡುವಿನ ಆಥರ್ಿಕತೆ ಮತ್ತು ರಕ್ಷಣಾತ್ಮಕ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಇವಾಂಕ ಹೇಳಿದರು. ಪ್ರಧಾನಿ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ. ಕಳೆದ 10 ವರ್ಷಗಳಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಶೇ.52ರಷ್ಟು ಮಹಿಳಾ ಉದ್ಯಮಿಗಳು ಭಾಗಿಯಾಗಿದ್ದು ಸಂತಸ ತಂದಿದೆ ಎಂದರು. ಉದ್ಯಮ ಶೀಲತಾ ಸಮಾವೇಶಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಇವಾಂಕ, ಹಲವಾರು ವಿಷಯಗಳ ಬಗ್ಗೆ ಚಚರ್ಿಸಿದರು. ಅಲ್ಲದೇ ಭಾರತದ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡರು. ಇವಾಂಕ ಅವರು ಶ್ವೇತ ಭವನದ ಹಿರಿಯ ಅಧಿಕಾರಿಗಳ ನಿಯೋಗವೊಂದನ್ನು ಈ ಸಮಾವೇಶಕ್ಕೆ ಕರೆತಂದಿದ್ದು, ಶ್ವೇತ ಭವನ ಸಲಹೆಗಾತರ್ಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries