ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಹಕ್ಕು ಸಂರಕ್ಷಣೆಗೆ ಸಂಘಟನೆ ಬಲಪಡಿಸಬೇಕು-ಪ್ರಭಾಕರನ್ ನಾಯರ್.
ಬದಿಯಡ್ಕ : ಕೇರಳ ರಾಜ್ಯ ಪಿಂಚಣಿದಾರರ ಹಕ್ಕು ಮತ್ತು ಸೌಲಭ್ಯಗಳ ರಕ್ಷಣೆಗೆ ಸಂಘಟನೆಗಳನ್ನು ಬಲಪಡಿಸಬೇಕಾದುದು ಅಗತ್ಯವೆಂದು ಕೇರಳ ರಾಜ್ಯ ಪಿಂಚಣಿದಾರರ ಅಧ್ಯಕ್ಷ ಪ್ರಭಾಕರನ್ ನಾಯರ್ ಹೇಳಿದರು.
ಇಡುಕ್ಕಿ ಜಿಲ್ಲೆಯ ತೊಡುಪುಯದಲ್ಲಿ ಗುರುವಾರ ಕೇರಳ ರಾಜ್ಯ ಪೆನ್ಶನರ್ಸ್ ಸಂಘಟನೆಯ ರಾಜ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ನಿವೃತ್ತ ನ್ಯಾಯಾಧೀಶ ಸಿ.ಯನ್ ರಾಮಚಂದ್ರನ್ ನಾಯರ್ ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿದರು. ಭಾರತೀಯ ಮಜ್ದೂರ್ ಸಂಘದ ಕೇರಳ ರಾಜ್ಯ ಕಾರ್ಯದಶರ್ಿ ಪಿ. ಶಶಿಧರನ್, ಬಿ.ಜೆ.ಪಿಯ ರಾಜ್ಯ ಸಮಿತಿಯ ಸದಸ್ಯ ನ್ಯಾಯವಾದಿ ರಾಧಾಕೃಷ್ಣ ಮೆನೋನ್, ಎಫ್.ಇ.ಟಿ.ಒ.ದ ರಾಜ್ಯ ಕಾರ್ಯದಶರ್ಿ ಪಿ. ಸುನಿಲ್ ಕುಮಾರ್ ಶುಭಹಾರೈಸಿದರು. ಬಳಿಕ ಸಾಂಸ್ಕೃತಿಕ ಸಮ್ಮೇಳನ ಹಾಗೂ ವನಿತಾ ಸಮ್ಮೇಳನಗಳು ಜರಗಿದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯಭಾಷಣಗಾರರಾಗಿ ರಬ್ಬರ್ ಬೋಡರ್್ನ ಉಪ ನಿದರ್ೇಶಕ ನ್ಯಾಯವಾದಿ ಜಯಸೂರ್ಯನ್ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರತಿನಿಧಿಗಳ ಭಾಗವಹಿಸುವಿಕೆಯಿಂದ ಸಮ್ಮೇಳನವು 2 ದಿನಗಳಲ್ಲಾಗಿ ಯಶಸ್ವಿಯಾಗಿ ಸಂಪನ್ನವಾಯಿತು. ಸಮ್ಮೇಳನದಲ್ಲಿ ಕಾಸರಗೋಡು ಜಿಲ್ಲೆಯ ಸದಸ್ಯರು ಪಾಲ್ಗೊಂಡಿದ್ದರು.