ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 01, 2017
ಕ್ರಿಮಿನಲ್ ಆರೋಪಿ ರಾಜಕಾರಣಿಗಳಿಗೆ ವಿಶೇಷ ಕೋಟರ್್ ಸ್ಥಾಪಿಸಲು ಸುಪ್ರೀಂ ಸೂಚನೆ
ನವದೆಹಲಿ: ರಾಜಕಾರಣಿಗಳು ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸುವುದಕ್ಕಾಗಿಯೇ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕೆಂದು ಸುಪ್ರೀಂ ಕೋಟರ್್ ಕೇಂದ್ರ ಸಕರ್ಾರಕ್ಕೆ ಸೂಚನೆ ನೀಡಿದೆ.
ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸುವುದರಿಂದ ವಿಚಾರಣೆ ತ್ವರಿತಗತಿಯಲ್ಲಿ ಮುಕ್ತಾಯಗೊಳ್ಳಲಿವೆ ಎಂದು ಕೋಟರ್್ ಅಭಿಪ್ರಾಯಪಟ್ಟಿದೆ. ನ್ಯಾ.ರಂಜನ್ ಗೋಗೋಯ್ ಹಾಗೂ ನ್ಯಾ. ನವೀನ್ ಸಿನ್ಹಾ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ಹಾಗೂ ಯೋಜನೆಯನ್ನು ರೂಪಿಸಲು 6 ವಾರಗಳ ಕಾಲಾವಕಾಶ ನೀಡಿದೆ.
ಇದೇ ವೇಳೆ 2014 ರಿಂದ ರಾಜಕಾರಣಿಗಳು ಎದುರಿಸುತ್ತಿರುವ 1,581 ಪ್ರಕರಣಗಳ ವಿಚಾರಣೆಯ ಸ್ಥಿತಿಗತಿಗಳನ್ನು ಕೋಟರ್್ ಕೇಳಿದ್ದು, 2014 ರಿಂದ ಈ ವರೆಗೆ ಎಷ್ಟು ರಾಜಕಾರಣಿಗಳ ವಿರುದ್ಧ ಹೊಸದಾಗಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂಬ ಅಂಕಿ-ಅಂಶಗಳನ್ನೂ ಸಹ ಕೇಳಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 13 ಕ್ಕೆ ಮುಂದೂಡಿದೆ.