ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಕಲ್ಲಿಕೋಟೆಯಲ್ಲಿ ಕನ್ನಡ ಮಕ್ಕಳ ಜಯಭೇರಿ
ಕುಂಬಳೆ: ಮಕ್ಕಳ ಕಲಿಯುವಿಕೆಯಲ್ಲಿ ಶಾಲೆಗಳಲ್ಲಿ ನಡೆಯುವ ಪಾಠಗಳ ಜೊತೆಗೆ ಪಾಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಶಾಲೆಗಳಲ್ಲಿ ಬಾಲಕಲೋತ್ಸವ, ಯುವ ಜನೋತ್ಸವ ವಿಜ್ಞಾನ ಮೇಳ, ಕಲೆ, ವೃತ್ತಿ ಪರಿಚಯ ಮೇಳಗಳಂತಹ ಹಲವಾರು ಚಟುವಟಿಕೆಗಳು ನಡೆಯುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳುತ್ತದೆ. ಇಂತಹ ಮೇಳಗಳಿಂದಾಗಿ ಎಷ್ಟೋ ಪ್ರತಿಭೆಗಳು ಬೆಳಗಿರುವುದನ್ನು ನಾವು ಕಾಣಬಹುದು.
ಇತ್ತೀಚೆಗೆ ಕೇರಳದ ಕೋಝಿಕ್ಕೋಡಿನ ಸೈಂಟ್ ಜೋಸೆಫ್ ಆಂಗ್ಲೋ ಇಂಡಿಯನ್ ಶಾಲೆಯಲ್ಲಿ ಕೇರಳ ರಾಜ್ಯ ಮಟ್ಟದ ವಿಜ್ಞಾನ ಮೇಳಗಳು ನಡೆಯಿತು. ಅದರಲ್ಲಿ ವಿಜ್ಞಾನದ ಸ್ಟಿಲ್ ಮೋಡೆಲ್ ವಿಭಾಗದಲ್ಲಿ ಭಾಗವಹಿಸುವ ಸುವಣರ್ಾವಕಾಶವು ಕಳತ್ತೂರಿನ ಇಚ್ಲಂಪಾಡಿ ಶಾಲೆಯ ಎರಡು ವಿದ್ಯಾಥರ್ಿಗಳಿಗೆ ಲಭಿಸಿತು. ಈ ಬಾರಿ ಕಾಸರಗೋಡು ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ವಿಜ್ಞಾನ ಸ್ಟಿಲ್ ಮೋಡೆಲ್ ವಿಭಾಗದಲ್ಲಿ ಆಯ್ಕೆ ಆಗಿರುವ ಎರಡು ತಂಡಗಳೂ ಕನ್ನಡ ಶಾಲೆಯದ್ದಾಗಿತ್ತು ಎಂಬುದು ಹೆಮ್ಮೆಯ ವಿಚಾರ. ಏಳನೇ ತರಗತಿಯ ವಿಜ್ಞಾನ ಪಾಠದಲ್ಲಿ ಬರುವ ಸಂಯೋಜಿತ ಕೃಷಿ ಪದ್ಧತಿ ಎಂಬ ವಿಷಯವನ್ನು ಆಧರಿಸಿ ಮಕ್ಕಳಿಗೆ ತರಬೇತಿಯನ್ನು ವಿಜ್ಞಾನ ಶಿಕ್ಷಕಿ ಸುಜಾತ ವಿಶ್ವರಾಜ್ರವರು, ಅವರಿಗೆ ಸಹಾಯಕಿಯಾಗಿ ಅಪರ್ಿತ ಲಕ್ಷ್ಮಿಪ್ರಸಾದ್ ಇವರು ಸಮಗ್ರ ಕೃಷಿ ಪದ್ಧತಿಯ ಸುಂದರ ಪ್ರತಿಕೃತಿ ತಯಾರಿಸಿಕೊಟ್ಟರು. ವಿವಿಧ ಚಾಟರ್ುಗಳನ್ನು ಆಂಗ್ಲ ಹಾಗೂ ಕನ್ನಡದಲ್ಲಿ ಬರೆದರು.
ಮಕ್ಕಳನ್ನು ಇಂಗ್ಲೀಷಿನಲ್ಲೇ ವಿವರಿಸುವಂತೆ ತರಬೇತಿ ನೀಡಿದರು. ಹತ್ತು ನಿಮಿಷಗಳ ವಿವರಣೆ ನೀಡುವಂತೆ ವಿದ್ಯಾಥರ್ಿಗಳಿಗೆ ತರಬೇತಿ ನೀಡಿದರು. ನಿಣರ್ಾಯಕರು ಬರುತ್ತಲೇ ಮಕ್ಕಳು ಅವರಿಗೆ ವಂದಿಸಿ, ವಿವರಣೆಗಳನ್ನು ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ನೀಡಿದರು. ತಾವು ತಯಾರಿಸಿದ ಪ್ರಾಜೆಕ್ಟ್ ರಿಪೋರ್ಟನ್ನು ಅವರ ಕೈಗಿತ್ತರು. ಲ್ಯಾಪ್ಟೋಪ್ನಲ್ಲಿ ಸ್ಲೈಡ್ಗಳನ್ನು ತೋರಿಸಿದರು. ಚಾಟರ್ುಗಳಲ್ಲಿ ಬರೆದುದನ್ನು ವಿವರಿಸಿ ಹೇಳಿದರು. ಈ ರೀತಿಯಾದ ಮಕ್ಕಳ ಚುರುಕು ಚಟುವಟಿಕೆಗಳಿಂದ ನಿಣರ್ಾಯಕರು ಎಲ್ಲವನ್ನು ಕೇಳಿ ಹೋಗುವಂತಹ ಸ್ಥಿತಿ ನಿಮರ್ಾಣವಾಯಿತು. ಮಕ್ಕಳ ಮಾತಿಗೆ ಕಿವಿಯಾದರು, ಪ್ರಶ್ನಿಸಿದರು, ತಿಳಿದುಕೊಂಡರು. `ಎ' ಗ್ರೇಡ್ ನೀಡಿ ಹರಸಿದರು. ಕೊನೆಯಲ್ಲಿ ಮಲಯಾಳ ಬರುತ್ತದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ಹೌದು ಎಂದು ಉತ್ತರಿಸಿದಾಗ ಇದನ್ನು ಮೊದಲೇ ಹೇಳಬೇಡವೇ ಎಂದು ನಗೆ ಚಟಾಕಿ ಹಾರಿಸಿದರು. ವಿದ್ಯಾಥರ್ಿಗಳಲ್ಲಿ ನಿರ್ಭಯತೆ, ಮಾತಿನಲ್ಲಿ ನಿರರ್ಗಳತೆ ಇದ್ದಲ್ಲಿ ಭಾಷೆ ಯಾವುದಾದರೇನು? ಪ್ರತಿಭೆಗೆ ಭಾಷೆಯ ಎಲ್ಲೆ ಇಲ್ಲ ಎಂಬುದು ಸತ್ಯವಾಯಿತು. ಒಂದು ಚಾರ್ಟನ್ನು ಕನ್ನಡದಲ್ಲೂ ಚಿತ್ರಗಳ ಅಡಿಬರಹ ಮಲಯಾಳದಲ್ಲೂ, ವಿವರಣೆಗಳು ಇಂಗ್ಲೀಷಿನಲ್ಲೂ ಬರೆದು ತಯಾರಿಸಿದ ಇಚ್ಲಂಪಾಡಿ ಶಾಲೆಯ ಸ್ಟಿಲ್ ಮೋಡೆಲ್ ರಾಜ್ಯಮಟ್ಟದಲ್ಲಿ `ಎ' ಗ್ರೇಡ್ ನೊಂದಿಗೆ ನಾಲ್ಕನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. 27 ಸ್ಪಧರ್ಿಗಳು ಭಾಗವಹಿಸಿದ್ದ ಈ ವಿಭಾಗದಲ್ಲಿ ಕಠಿಣ ಸ್ಪಧರ್ೆಯನ್ನು ಎದುರಿಸಿ ಮುಂದುವರಿಯಲು ಶಾಲಾ ಮುಖ್ಯೋಪಾಧ್ಯಾಯ ನರಹರಿ ಪಿ. ಸಂಪೂರ್ಣ ಸಹಕಾರವಿತ್ತರು.
ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ಪ್ರಥಮ ಹಾಗೂ ಐಶ್ವರ್ಯರು ಸಿಕ್ಕ ಸ್ವಲ್ಪ ಸಮಯದಲ್ಲಿ ಅಲ್ಲಿನ ಇತರ ವಿದ್ಯಾಥರ್ಿಗಳು ಹಾಗೂ ಅಧ್ಯಾಪಕರ ಜೊತೆಗೆ ಮಾತನಾಡುವ ಅವಕಾಶದಿಂದ ತಪ್ಪಿಸಿಕೊಳ್ಳಲಿಲ್ಲ. ಕಾಸರಗೋಡಿನ ಕನ್ನಡ ಮಕ್ಕಳು ಕನ್ನಡ, ಇಂಗ್ಲೀಷ್, ತುಳು, ಮಲೆಯಾಳಂ ಎಂದು ಎಲ್ಲಾ ಭಾಷೆಯಲ್ಲೂ ಸಂವಹನ ನಡೆಸಲು ಶಕ್ತರು ಎಂಬುದು ರಾಜ್ಯದ ಇತರ ಭಾಗಗಳಿಂದ ಬಂದ ವಿದ್ಯಾಥರ್ಿಗಳನ್ನು ಅಚ್ಚರಿಗೊಳಿಸಿತು. ಬಹು ಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ಹಿರಿಮೆಯನ್ನು ಕನ್ನಡ ಮಕ್ಕಳು ಅಲ್ಲೂ ಮೆರೆದರು.