ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಭಾರತೀಯ ಸೇನೆ ಸೇರಲಿದೆ ಕನರ್ಾಟಕದ ಮಧೋಳ ಶ್ವಾನ!
ಡೆಹರಾಡೂನ್: ಬೇಟೆಗೆ ಹೆಸರಾದ ಕನರ್ಾಟಕದ ಮುಧೋಳದ ನಾಯಿಗಳು ಇದೀಗ ಭಾರತೀಯ ಸೇನೆ ಸೇರಲು ಸಿದ್ದವಾಗಿವೆ.
ಜರ್ಮನ್ ಶೆಫಡರ್್, ಲ್ಯಾಬ್ರಡೋಸರ್್ ಮತ್ತು ಗ್ರೇಟ್ ಸ್ವಿಸ್ಟೆ ಮೌಂಟೇನ್ ಇಂತಹಾ ವಿದೇಶೀ ತಳಿಗಳೇ ತುಂಬಿರುವ ಭಾರತೀಯ ಸೈನ್ಯಕ್ಕೀಗ ಇದೇ ಮೊದಲ ಬಾರಿ ದೇಶಿಯ ಶ್ವಾನ ತಳಿ ಸೇರ್ಪಡೆಯಾಗುತ್ತಿರುವುದು ವಿಶೇಷ. ಅದರಲ್ಲಿಯೂ ಕನರ್ಾಟಕದ ಜನರ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ.
ಪ್ರಾರಂಭದಲ್ಲಿ 6 ಮುಧೋಳ ನಾಯಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು ಅವು ಈ ವರ್ಷದ ಅಂತ್ಯದ ವೇಳೆಗ್ ಸೈನ್ಯಕ್ಕೆ ಸೇರಲಿವೆ. ಭಯೋತ್ಪಾದಕರ ಉಪಟಳ ಹೆಚ್ಚಾಗಿರುವ ಜಮ್ಮು ಕಾಶ್ಮೀರದಲ್ಲಿ ನಡೆಯುವ ಸೇನಾ ಕಾಯರ್ಾಚರಣೆಯಲ್ಲಿ ಇವು ಭಾಗವಹಿಸಲಿವೆ.
ಕನರ್ಾಟಕದಿಂದ ಈ ಆರು ಮಧೋಳ ತಳಿಯ ನಾಯಿಗಳನ್ನು ಆರ್ವಿಸಿ ಕೇಂದ್ರಕ್ಕೆ ತರಬೇತಿಗಾಗಿ ಕಳುಹಿಸಲಾಗಿತ್ತು.
ಮಧೋಳ ನಾಯಿ-ಒಂದು ಪರಿಚಯ
ಸಾವಿರಾರು ವರ್ಷಗಳ ಹಿಂದೆಯೇ ಕನರ್ಾಟಕದವರಿಗೆ ಮಧೋಲ ನಾಯಿ ತಳಿ ಪರಿಚಯವಿತ್ತು. ಅರೇಬಿಯಾ, ಮದ್ಯ ಏಷ್ಯಾದಿಂದ ಈ ನಾಯಿ ಭಾರತಕ್ಕೆ ಬಂದಿತ್ತು. ಮಧೋಳದ ರಾಜ ಮಾಲೋಜಿ ರಾವ್ ಘೋರ್ಪಡೆ ಪ್ರೀತಿ ಇಅದಕ್ಕೆ ಸಿಕ್ಕಿತ್ತು. ಅಲ್ಲದೆ ಆತ ಒಂದು ಜೊತೆ ಮಧೋಳ ನಾಯಿಗಳನ್ನು ಬ್ರಿಟನ್ ದೊರೆ ಐದನೇ ಜಾಜರ್್ ಗೆ ಉಡುಗೊರೆಯಾಗಿ ನೀಡಿದ್ದನು.ಹಲಗಲಿಯ ಬೇಡರು ಬೇಟೆಗಾಗಿ ಈ ನಾಯಿಗಳನ್ನು ಬಳಸಿದ್ದರು.
ಈ ತಳಿಯ ನಾಯಿಗಳು ಸುಮಾರು 13, 14 ವರ್ಷಗಳ ಕಾಲ ಬದುಕುತ್ತವೆ. ಒಟ್ಟು 18 ತಿಂಗಳಲ್ಲಿ ಈ ನಾಯಿ ಪೂರ್ಣ ಬೆಳವಣಿಗೆ ಕಾಣುತ್ತದೆ. ನಾಯಿಯ ಒಟ್ಟು ಮೈಕಟ್ಟು 1.8 ರಿಂದ 2.3 ಅಡಿಗಳಷ್ಟು ಇರುತ್ತದೆ. ಈಗಲೂ ಮಧೋಲದ ಸುಮಾರು 750ಕುಟುಂಬಗಳು ಈ ನಾಯಿಯನ್ನು ಸಾಕಿ ಮಾರಾಟ ಮಾಡುತ್ತಿವೆ.