ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 30, 2017
ರಾಜ್ಯ ಮಟ್ಟದ ವಿಜ್ಞಾನ ಮೇಳ
ಶೇಣಿ ಶಾಲೆ ವಿದ್ಯಾಥರ್ಿಗಳಿಗೆ 'ಎ' ಗ್ರೇಡ್
ಪೆರ್ಲ: ಕಲ್ಲಿಕೋಟೆಯಲ್ಲಿ ಜರಗಿದ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಶೇಣಿ ಶ್ರೀ ಶಾರದಾಂಬ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾಥರ್ಿಗಳಾದ ನಫೀಸತ್ಶಿಶಾ ಜಾಸ್ಮಿನ್ ಮತ್ತು ನಜೀಯ ಜೈನಬ 'ಎ' ಗ್ರೇಡ್ ಪಡೆದು ಹೊಸ ದಾಖಲೆಯೊಂದಿಗೆ ಮಿಂಚಿದ್ದಾರೆ.
ಸುಸ್ಥಿರ ಅಭಿವೃದ್ಧಿಗಾಗಿ ಆವಿಷ್ಕಾರ ಎಂಬ ಆಶಯವನ್ನಿಟ್ಟುಕೊಂಡು ತ್ಯಾಜ್ಯ ನಿರ್ವಹಣೆ ಮತ್ತು ಜಲ ಸಂರಕ್ಷಣೆ ಎಂಬ ಯೋಜನೆಯನ್ನು ಶಾಲಾ ಶಿಕ್ಷಕಿಯರಾದ ಸ್ಮಿತಾ ಇ.ಪಿ.ಹಾಗೂ ಸೆರಿನಿ ಕ್ರಾಸ್ತ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ಮಂಡಿಸಿದರು. ಕೃಷಿ ಪದ್ದತಿಯಲ್ಲಿ ನಾಚಿಕೆ ಮುಳ್ಳಿನ ಉಪಯೋಗವನ್ನು ಫಲಪ್ರಧವಾಗಿ ಹೇಗೆ ಉಪಯೋಗಿಸಬಹುದು ಎಂದು ವಿಜ್ಞಾನ ಮೇಳದಲ್ಲಿ ಸಮರ್ಪಕವಾಗಿ ತಿಳಿಯಪಡಿಸಿದ್ದಾರೆ. ನಾಚಿಕೆ ಮುಳ್ಳನ್ನು ಬೇರು ಸಹಿತ ಅರೆದು, ಭೂಮಿಗೆ ಬಿತ್ತನೆ ಬೀಜಗಳನ್ನು ಹಾಕುವ ಮೊದಲು ಮಣ್ಣಿಗೆ ಸೇರಿಸಿದರೆ ಗಿಡಗಳು ಸಮೃದ್ಧ ವಾಗಿ ಬೆಳೆಯುತ್ತದೆ. ನಾಚಿಕೆ ಮುಳ್ಳು ಕೇವಲ ಕಳೆಗಿಡಗಳು ಎಂದು ಪರಿಗಣಿಸುವುದಕ್ಕಿಂತ ಒಂದು ಜೈವಗೊಬ್ಬರ ಮತ್ತು ಜೈವ ಕೀಟ ನಾಶಕವಾಗಿ ಪರಿಗಣಿಸಬಹುದು ಎನ್ನುವುದನ್ನು ವಿಧ್ಯಾಥರ್ಿಗಳು ಪ್ರಯೋಗದ ಮೂಲಕ ಸಾಬೀತುಪಡಿಸಿದ್ದಾರೆ.
ವಿದ್ಯಾಥರ್ಿಗಳ ಈ ಸಾಧನೆಯನ್ನು ಶಾಲಾ ಪ್ರಬಂಧಕಿ ಶಾರದ ವೈ, ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ, ರಕ್ಷಕ ಶಿಕ್ಷಕ ಸಂಘ ಹಾಗೂ ವಿಧ್ಯಾಥರ್ಿ ವೃಂದವು ಅಭಿನಂದಿಸಿದೆ.