ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಇನ್ನು ಕಾಡು ಪ್ರಾಣಿಗಳ ಭಯವಿಲ್ಲ-ಸಂಶೋಧನೆಯಾಗಿದೆ ನಮ್ಮೂರ ಕೃಷಿಕರ ಸಾಧನೆ
ಮುಳ್ಳೇರಿಯ: ಅನಿವಾರ್ಯತೆಗಳು ಹೊಸ ಅನ್ವೇಷಣೆ ಮತ್ತು ಸೃಷ್ಟಿಗೆ ಕಾರಣವಾಗುತ್ತದೆ. ಹಾಗೆ ಇಲ್ಲೊಬ್ಬರು ಕೃಷಿಕರು ಕೃಷಿ ಉತ್ಪನ್ನಗಳನ್ನು ಹಾಳುಗೆಡಹುವ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಸ್ವತಃ ನೂತನ ಯಂತ್ರವೊಂದನ್ನು ಅನ್ವೇಶಿಸಿದ್ದು, ಇದೀಗ ಸರಕಾರದ ಗಮನ ಸೆಳೆದು ಗ್ರಾಮೀಣ ಕೃಷಿಕರೋರ್ವರು ಗಮನ ಸೆಳೆದಿದ್ದಾರೆ.
ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಗಡಿ ಗ್ರಾಮ ನೆಟ್ಟಣಿಗೆ ಸಮೀಪದ ಕೈಪಂಗಳ ರಾಜಗೋಪಾಲ ಭಟ್ ಕೃಷಿ ಗದ್ದೆ-ತೋಟಗಳಿಗೆ ನುಗ್ಗಿ ಕೃಷಿ ಹಾಳುಗೆಡಹುವ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಲೆಟ್ ಲೈಟ್ ಉಪಕರಣವೊಂದನ್ನು ಅನ್ವೇಶಿಸಿ ಯಶಸ್ವಿಯಾಗಿದ್ದು, ಈಗದು ರಾಜ್ಯ ಅರಣ್ಯ ಇಲಾಖೆಯ ಪ್ರಶಮಸೆಗೆ ಪಾತ್ರವಾಗಿ ಸ್ವತಃ ಇಲಾಖೆಯೇ ಇವರಿಮದ ಖರೀಧಿಸಿ ಅಳವಡಿಸುವ ಚಿಂತನೆ ನಡೆಸುತ್ತಿದೆ.
ಏನಿದು ಲೆಡ್ ಲೈಟ್?:
ಸಾಮಾನ್ಯವಾಗಿ ಕೃಷಿ ತೋಟಗಳಿಗೆ ನುಗ್ಗುವ ಹಂದಿ, ಮಂಗಗಳು, ಕಾಡಾನೆಗಳು ಮೊದಲಾದವುಗಳು ಅಧಿಕ ಪ್ರಭೆ ಬೀರುವ ಬೆಳಕಿಗೆ ಹೆದರಿ ಹಿಮ್ಮೆಟ್ಟುತ್ತದೆ. ಈ ನಿಟ್ಟಿನಲ್ಲಿ ಸುಮಾರು ಎರಡೂವರೆ ವರ್ಷಗಳಿಂದ ಕ್ರಿಯಾಶೀಲ ತಂತ್ರಜ್ಞಾನಗಳ ಅಳವಡಿಕೆಗೆ ಪ್ರಯತ್ನಿಸಿದ ಕೈಪಂಗಳದ ರಾಜಗೋಪಾಲ ಭಟ್ ಕೊನೆಗೂ ಹೊಸ ನಮೂನೆಯ ಉಪಕರಣವನ್ನು ತಯಾರಿಸಿರುವರು. ಕಾಡು ಹಂದಿಗಳು ಸಾಮಾನ್ಯವಾಗಿ ತಲೆಬಗ್ಗಿಸಿ ಲಕ್ಷ್ಯದತ್ತ ಮುನ್ನುಗ್ಗುತ್ತಿರುವ ಕಾರಣ 28 ಸೆಂಟೀಮೀಟರ್ ಎತ್ತರದಲ್ಲಿ ನಿಲ್ಲುವಂತೆ ನಾಲ್ಕೂ ದಿಕ್ಕುಗಳಿಗೂ ಬೆಳಕು ಬೀಳುವ ಪೋಕಸ್ ಆಗುವ ಬಲ್ಬ್ ಇರುವಂತೆ ಉಪಕರಣ ನಿಮರ್ಿಸಿದರು. 50 ಮೀಟರ ಗಳಷ್ಟು ವ್ಯಾಪ್ತಿಗೆ ಪ್ರಭೆ ನೀಡುವ ಈ ಲೈಟ್ ಗಳನ್ನು ತಮ್ಮ ಅಡಿಕೆ, ತೆಂಗು, ಬಾಳೆ ಸಹಿತ ಇತರ ಕೃಷಿ ಭೂಮಿಯ ಸುತ್ತಲೂ ಕಳೆದ ಒಂದೂವರೆ ವರ್ಷಗಳಿಂದ ಅಳವಡಿಸಿ ಯಶಸ್ವಿಯಾಗಿದ್ದು, ಆ ಬಳಿಕ ಯಾವುದೇ ಕಾಡು ಪ್ರಾಣಿಗಳು ತಮ್ಮ ಕೃಷಿಯತ್ತ ಕಣ್ಣೆತ್ತಿಯೂ ನೋಡಿಲ್ಲ ಎಂದು ಹೆಮ್ಮೆಯಿಂದ ರಾಜಗೋಪಾಲ ಭಟ್ ಪತ್ರಿಕೆಯೊಂದಿಗೆ ತಿಳಿಸಿರುವರು. ಈ ಬಲ್ಬ್ ಗಳಿಗೆ ತಮ್ಮ ಮನೆಯಿಂದಲೇ ವಿದ್ಯುತ್ ಸಂಪರ್ಕ ನೀಡಿದ್ದು, ಇನ್ನಷ್ಟು ವಿಸ್ತರಿಸಿ ಇದೀಗ ಬ್ಯಾಟರಿ ಚಾಲಿತ ಮತ್ತು ಸೋಲಾರ್ ಮೂಲಕವೂ ಕಾರ್ಯನಿರ್ವಹಿಸುವಂತೆ ಅವಿಷ್ಕಾರವನ್ನು ಎತ್ತರಕ್ಕೇರಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಬೇಡಿಕೆ:
ರಾಜಗೋಪಾಲ ಭಟ್ ರವರ ನೂತನ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರಾಜ್ಯ ಅರಣ್ಯ ಇಲಾಖೆಯ ಗಮನ ಸೆಳೆದಿದ್ದು, ಕಾಸರಗೋಡು ಜಿಲ್ಲಾ ಅರಣ್ಯ ಅಧಿಕಾರಿ(ಡಿಎಫ್ಓ) ರಾಜೀವನ್ ಎಂ. ಸ್ವತಃ ಕೈಪಂಗಳಕ್ಕೆ ಆಗಮಿಸಿ ಲೆಟ್ ಲೈಟ್ ವ್ಯವಸ್ಥೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಇಲಾಖೆಯು ಅತ್ಯಂತ ಹೆಚ್ಚು ಸಂಕಷ್ಟ ಅನುಭವಿಸುತ್ತಿರುವ ಕಾಡಾನೆ ಧಾಳಿ ನಿಯಂತ್ರಣಕ್ಕೆ ಮುಂದಾಗುವಲ್ಲಿ ಕಾರಣವಾಯಿತು. ಕೆಲವು ತಿಂಗಳುಗಳ ಹಿಂದೆ ರಾಜಗೋಪಾಲ ಕೈಪಂಗಳರಿಂದ ಕಾಡಾನೆ ಧಾಳಿಗೆ ಪರಿಣಾಮಕಾರಿಯಾಗುವಂತೆ ಲೆಡ್ ಲೈಟ್ ವ್ಯವಸ್ಥೆಯನ್ನು ಮೇಲ್ದಜರ್ೆಗೇರಿಸಿ ಅಳವಡಿಸುವಲ್ಲಿ ಸಹಕರಿಸುವಂತೆ ಮನವಿ ನೀಡಿದ್ದು, ಅದರಂತೆ ಭಟ್ ರವರು ಆನೆಗಳ ಧಾಳಿಯನ್ನೂ ನಿಯಂತ್ರಿಸುವ ಮಟ್ಟದ ವ್ಯವಸ್ಥೆ ನಿಮರ್ಿಸಿ ಪ್ರಯೋಗಾತ್ಮಕವಾಗಿ ವಿತರಿಸಿದ್ದು, ಅದೀಗ ಯಶಸ್ವಿಯಾಗಿ ಇಲಾಖೆಯ ಎಲ್ಲಿಲ್ಲದ ಖುಷಿ ಮತ್ತು ಇನ್ನಷ್ಟು ಒದಗಿಸಿ ಕೊಡುವ ಮನವಿಯೊಂದಿಗೆ ರಾಜಗೋಪಾಲರ ಕೃತಾರ್ಥತೆಗೆ ಕಾರಣವಾಗಿದೆ.
ಕೈಪಂಗಳರ ಬಗ್ಗೆ:
ರಾಜಗೋಪಾಲ ಕೈಪಂಗಳ ಇಲೆಕ್ಟ್ರಾನಿಕ್ಸ್ ಪದವೀಧರರಾಗಿದ್ದು, ಕೆಲವು ವರ್ಷ ರಾಷ್ಟ್ರದ ವಿವಿಧೆಡೆ ಮತ್ತು ವಿದೇಶದಲ್ಲಿ ಮಾರುಕಟ್ಟೆ ವಿಭಾಗಕ್ಕೆ ಸಂಬಂಧಿಸಿ ದುಡಿದಿದ್ದರು. ಆದರೆ ಹುಟ್ಟಿದ ಗ್ರಾಮ ಮತ್ತು ಕೃಷಿಯ ಆಸಕ್ತಿಯಿಂದ ಬಲು ಬೇಗ ಉದ್ಯೋಗಕ್ಕೆ ತಲಾಂಜಲಿ ನೀಡಿ ಊರಿಗೆ ಮರಳಿದ ಭಟ್ ರವರು ಪರಂಪರಾಗತವಾಗಿ ಬಂದಿರುವ ಕೃಷಿ ಕಾಯಕದಲ್ಲಿ ನಿರತರಾದರು. ಅಡಿಕೆ ತೆಂಗು ಕೃಷಿಯ ಜೊತೆಗೆ ಬಾಳೆ, ವಿವಿಧ ಹಣ್ಣುಗಳು, ಔಷಧೀ ಕೃಷಿ, ತರಕಾರಿ ಮೊದಲಾದವುಗಳನ್ನು ಯಶಸ್ವಿಯಾಗಿ ನಾಟಿ ಮಾಡುತ್ತಿದ್ದಾರೆ. ಆದರೆ ತಮ್ಮ ಕೃಷಿ ನಿರಂತರ ಹಾನಿಗೊಳಿಸುವ ಮಂಗಗಳು ಮತ್ತು ಕಾಡುಹಂದಿಗಳ ಉಪಟಳ ತಾಳಲಾರದೆ ಅವುಗಳ ನಿಯಂತ್ರಣಕ್ಕಾಗಿ 16 ವಿಧದ ತಂತ್ರಜ್ಞಾನ ಅಳವಡಿಕೆ ಮಾಡಿ ಕೊನೆಗೆ ಲೆಡ್ ಲೈಟ್ ವ್ಯವಸ್ಥೆಯ ಅವಿಷ್ಕಾರದ ಮೂಲಕ ಯಶಸ್ವಿಯಾಗಿದ್ದು, ಜೊತೆಗೆ ಇತರೆಡೆಗಳಿಗೂ ವಿಸ್ತರಿಸುವಂತೆ ಮನವಿಗಳು ಬರುತ್ತಿರುವುದು ಸಾಧಕ ಕೃಷಿಕನೊಬ್ಬನ ಸಾಧನೆಗೆ ಸಂದ ಗೆಲುವೆನ್ನಲು ಅಡ್ಡಿಯಿಲ್ಲ.
ಏನಂತಾರೆ ಕೇಳಿ:
ಲಕ್ಷಾಂತರ ರೂ. ವ್ಯಯಿಸಿ ನಡೆಸುವ ಕೃಷಿಗೆ ನಿರೀಕ್ಷಿತ ಲಾಭ ಬರುವ ಹಂತದಲ್ಲಿ ಕಾಡು ಪ್ರಾಣಿಗಳಿಂದ ಉಪಟಳವಾಗುವುದು ತೀವ್ರ ನೋವು ತರಿಸಿದ್ದರಿಂದ ನನ್ನಲ್ಲಿರುವ ತಂತ್ರಜ್ಞಾನವನ್ನು ವಿಸ್ತರಿಸಿ ಇದೀಗ ಯಶಸ್ವಿಯಾಗಿದ್ದು, ಖುಷಿ ನೀಡಿದೆ. ಜೊತೆಗೆ ಅರಣ್ಯ ಇಲಾಖೆ ನನ್ನ ಅವಿಷ್ಕಾರವನ್ನು ಬೆಂಬಲಿಸಿ ಸ್ವತಃ ಅವರ ಅಗತ್ಯಕ್ಕೆ ಬೆಡಿಕೆ ನೀಡಿರುವುದು ಇನ್ನಷ್ಟು ಉತ್ಸಾಹಕ್ಕೆ ಕಾರಣವಾಗಿದ್ದು, ಸಾಮಾನ್ಯ ತೊಟಗಳಿಗೆ ಕೇವಲ 2 ಸಾವಿರದ ಬೆಲೆಯಲ್ಲಿ ಮತ್ತು ಕಾಡಾನೆಗಳ ನಿಯಂತ್ರಣದಂತಹ ಉನ್ನತ ಮಟ್ಟದ ಕ್ರಮಗಳಿಗೆ 6-7 ಸಾವಿರ ರೂ.ಗಳ ಅಗ್ಗದ ಬೆಲೆಯಲ್ಲಿ ನಿಮರ್ಿಸಬಹುದಾಗಿದೆ.
ಭಟ್ ರವರ ಸಂಪರ್ಕ ಸಂಖ್ಯೆ: 9061674679.
ರಾಜಗೋಪಾಲ ಭಟ್ ಕೈಪಂಗಳ
ಲೆಡ್ ಲೈಟ್ ತಂತ್ರಜ್ಞಾನದ ರೂವಾರಿ. ಪ್ರಗತಿಪರ ಕೃಷಿಕ.