ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಬದಿಯಡ್ಕ : ಕಾಸರಗೋಡಿನ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳನ್ನು ಹಾಗೂ ಅವಕಾಶಗಳನ್ನು ಸಂರಕ್ಷಿಸುವ ಮೂಲಕ ಕೇರಳ ಸರಕಾರವು ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಡಲು ಕನ್ನಡಿಗರೆಲ್ಲರೂ ಟೊಂಕಕಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇಂದು ನಮ್ಮ ಎದುರಿಗಿದೆ ಎಂದು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ, ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಹೇಳಿದರು.
ಅವರು ಬುಧವಾರ ಕನರ್ಾಟಕ ರಾಜ್ಯೋತ್ಸವದ ದಿನದಂದು ಕಾಸರಗೋಡು ಕನ್ನಡಿಗರ ಸಂಘಟನೆಗಳ ಒಕ್ಕೂಟವು ಬದಿಯಡ್ಕದಲ್ಲಿ ಸಂಜೆ ಹಮ್ಮಿಕೊಂಡ ಪ್ರತಿಭಟನಾ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಹಿರಿಯ ಪತ್ರಕರ್ತ ಕೆ.ಭಾಸ್ಕರ ಮಾತನಾಡುತ್ತಾ ಕನ್ನಡದ ಸಂಸ್ಕೃತಿ, ಭಾಷೆಯ ಅಳಿವು ಮತ್ತು ಉಳಿವಿನ ಪ್ರಶ್ನೆ ನಮ್ಮ ಮುಂದಿದೆ. ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ಸಕ್ರಿಯರಾಗದಿದ್ದಲ್ಲಿ ಕನ್ನಡ ಭಾಷೆಯನ್ನು ಮಲಯಾಳವು ಸಂಪೂರ್ಣವಾಗಿ ನುಂಗಿಹಾಕಲಿದೆ ಎಂದರು.
ನಿವೃತ್ತ ಪ್ರಾಂಶುಪಾಲಕ ಮೈರ್ಕಳ ನಾರಾಯಣ ಭಟ್, ಕರಿಂಬಿಲ ಲಕ್ಷ್ಮಣ ಪ್ರಭು, ಪ್ರೊ.ಉದಯ ಕುಮಾರ್, ನಿವೃತ್ತ ಅಧ್ಯಾಪಕ ಬಾಲ ಮಧುರಕಾನನ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲಕ ಡಾ| ಬೇ.ಸೀ.ಗೋಪಾಲಕೃಷ್ಣ ಭಟ್ ಸ್ವಾಗತಿಸುತ್ತಾ ಕನ್ನಡಿಗರಾದ ನಾವು ವ್ಯಾವಹಾರಿಕ ಭಾಷೆಯನ್ನು ಕನ್ನಡದಲ್ಲಿಯೇ ಮಾಡಬೇಕು ಎಂಬ ಸಂಕಲ್ಪವನ್ನು ಮಾಡಿಕೊಳ್ಳೋಣ ಎಂದರು. ಸುಂದರ ಬಾರಡ್ಕ ಧನ್ಯವಾದವನ್ನಿತ್ತರು. ಪ್ರತಿಭಟನೆಯಲ್ಲಿ ನೂರಾರು ಕನ್ನಡಿಗರು ಪಾಲ್ಗೊಂಡಿದ್ದರು.
ಆಗ್ರಹಿಸಿದ ವಿವಿಧ ಬೇಡಿಕೆಗಳು :
1 ಶಾಲಾ ವಿದ್ಯಾಥರ್ಿಗಳ ಮೇಲೆ ಹೇರುವುದಕ್ಕೆ ಸಿದ್ಧವಾಗಿರುವ ಖಡ್ಡಾಯ ಮಲಯಾಳ ಕಲಿಕೆಯ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು.
2. ಸರಕಾರದ ನಾನಾ ಇಲಾಖೆಗಳ ವಿವಿಧ ಹುದ್ದೆಗಳು ಕಾಸರಗೋಡಿನಲ್ಲಿ ಕನ್ನಡಿಗರಿಗಾಗಿ ಮೀಸಲಾಗಿದ್ದು ಅದನ್ನು ಕನ್ನಡಿಗರಿಗೇ ಒದಗಿಸುವಂತೆ ಮಾಡಬೇಕು.
3. ಕಾಸರಗೋಡಿನ ಸರಕಾರೀ ಕಛೇರಿಗಳಲ್ಲಿ ನಾಮಫಲಕ ಮತ್ತು ಸೂಚನಾ ಫಲಕಗಳನ್ನು ಕನ್ನಡದಲ್ಲಿಯೂ ವ್ಯವಸ್ಥೆಗೊಳಿಸಿ ಪ್ರದಶರ್ಿಸಬೇಕು.
4. ಕಾಸರಗೋಡಿನ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಕನ್ನಡದ ಅಜರ್ಿ ಪತ್ರಗಳ ನಮೂನೆಗಳನ್ನು ಒದಗಿಸಬೇಕು.
5. ಅಂಗನವಾಡಿಯಿಂದ ಹಿಡಿದು ಉನ್ನತ ತರಗತಿಯ ವರೆಗೆ ಕನ್ನಡ ವಿದ್ಯಾಥರ್ಿಗಳ ಅಗತ್ಯಕ್ಕಿರುವ ಪಾಠ ಹಾಗೂ ಪರಾಮರ್ಶನ ಪುಸ್ತಕಗಳನ್ನು ಕನ್ನಡದಲ್ಲಿಯೇ ಮುದ್ರಿಸಿ ಪೂರೈಸುವುದು.
6. ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತು ಕನ್ನಡಿಗರಿಗೆ ಯೋಗ್ಯವಾದ ಮನ್ನಣೆ ಪ್ರಾಪ್ತವಾಗಬೇಕು.