ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಅಂಗನವಾಡಿ ಪ್ರವೇಶೋತ್ಸವ
ಬದಿಯಡ್ಕ : ಬದಿಯಡ್ಕ ಗ್ರಾಮಪಂಚಾಯತಿನ ಪಟ್ಟಾಜೆ ಅಂಗನವಾಡಿಯಲ್ಲಿ ಪ್ರವೇಶೋತ್ಸವ ಹಾಗೂ ಕೇರಳ ರಾಜ್ಯೋದಯದ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಂಗನವಾಡಿ ಅಭಿವೃದ್ಧಿ ಸಮಿತಿಯ ಲೋಹಿತಾಕ್ಷನ್ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ರಾಮ ಪಟ್ಟಾಜೆ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಯೋವೃದ್ಧ ಹಿರಿಯರಾದ ಅಪ್ಪು ಮುಖಾರಿಯವರನ್ನು ಸನ್ಮಾನಿಸಲಾಯಿತು. ಆಶಾ ವರ್ಕರ್ ನಳಿನಿ ಪಟ್ಟಾಜೆ ಶುಭಹಾರೈಸಿದರು. ಅಂಗನವಾಡಿ ಕಾರ್ಯಕತರ್ೆ ಚಿತ್ರಕಲಾ ಪಟ್ಟಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಅಂಗನವಾಡಿಯ ಆಗುಹೋಗುಗಳ ಕುರಿತು ವಿವರಣೆ ನೀಡಿ ಸ್ವಾಗತಿಸಿದರು.