ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಪರಂಪರೆಯನ್ನು ಉಳಿಸುವ ಶಕ್ತಿ ಕಲೆಗಳಿಗಿವೆ=ಮಾಧವ ಅಡಿಗ ಕುಂಬಳೆ
ಕುಂಬಳೆ: ಆಧುನಿಕ ಸಮಾಜ ವ್ಯವಸ್ಥೆ ಧಾಮರ್ಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಹಿನ್ನಡೆಗೆ ಸರಿದಿರುವುದರಿಂದ ಶಾಂತಿ, ನೆಮ್ಮದಿಗಳು ನಾಶವಾಗಿ ಅಸಂತುಷ್ಠತೆ ನಿಮರ್ಾಣವಾಗಿದೆ. ಯುವ ಸಮೂಹಕ್ಕೆ ಪರಂಪರೆಯನ್ನು ಪರಿಚಯಿಸುವ ಯತ್ನಗಳು ಕಥಾ ಸಂಕೀರ್ತನೆ, ಯಕ್ಷಗಾನದಂತಹ ಕಲೆಗಳಿಂದ ಆಗುತ್ತದೆ. ಈ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳು ಅಗತ್ಯವಿದೆ ಎಂದು ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕ ಕೆ.ಮಾಧವ ಅಡಿಗ ಅಭಿಪ್ರಾಯ ವ್ಯಕ್ತಪಡಿಸಿದರು.
ಅನಂತಪುರದ ಕೀರ್ತನ ಕುಟೀರದ ಆಶ್ರಯದಲ್ಲಿ ನಡೆಸಲಾಗುವ ಒಂಭತ್ತನೇ ವರ್ಷದ ಹರಿಕಥಾ ಸಪ್ತಾಹ ಹರಿಕೀರ್ತನಾ ಹಬ್ಬ 2017 ನ್ನು ಸೋಮವಾರ ಸಂಜೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರ ಪರಿಸರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನ ಹರಿಕಥಾ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ಕೆ.ಮಹಾಬಲ ಶೆಟ್ಟಿ ಕೂಡ್ಲು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಣಿಪುರ ಶ್ರೀಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಾಮನಾಥ ಶೆಟ್ಟಿ ಮಾತನಾಡಿ, ಸಾಮಾಜಿಕ ಅನಿಷ್ಠಗಳನ್ನು ನಿವಾರಿಸಿ, ಏಕತೆಯನ್ನು ಮೂಡಿಸುವಲಲಿ ಹರಿಕಥಾ ಸಂಕೀರ್ತನೆ ಅಗತ್ಯವಿದ್ದು ಎಳೆಯ ಮಕ್ಕಳನ್ನು ಉತ್ತಮ ಹಾದಿಯಲ್ಲಿ ಬೆಳೆಸಲು ಕಾರಣವಾಗುತ್ತದೆ ಎಂದು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುರೋಹಿತ, ಜ್ಯೋತಿಷಿ ದಿನೇಶ್ ಭಟ್ ರವರು ಮಾತನಾಡಿ ಪುರಾಣ, ವೇದ, ಉಪನಿಷತ್ತುಗಳ ಮರ್ಮವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಕಥಾ ಸಂಕೀರ್ಥನೆಯಂತಹ ಸಾಂಸ್ಕೃತಿಕ ರಂಗದ ಕೊಡುಗೆ ಮಹತ್ತರವಾಗಿದ್ದು, ಈ ಬಗೆಗೆ ಕಾರ್ಯನಿರ್ವಹಿಸುತ್ತಿರುವ ಕೀರ್ತನಾ ಕುಟೀರದ ಪ್ರಯತ್ನಗಳು ಶ್ಲಾಘನೀಯ ಎಂದು ತಿಳಿಸಿದರು.
ಹರಿಕೀರ್ತನ ಹಬ್ಬದ ಕಾರ್ಯಕ್ರಮ ಸಮಿತಿ ಅಧ್ಯಕ್ಷೆ ಸರೋಜಿನಿ ಶಿವರಾಮ ಭಟ್ ಉಪಸ್ಥಿತರಿದ್ದರು.ಕೀರ್ತನ ಕುಟೀರದ ನಿದರ್ೇಶಕ ನ್ಯಾಯವಾದಿ ಕಲಾರತ್ನ ಶಂ.ನಾ.ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಕಲೆಯ ಬೆಳವಣಿಗೆಯ ಮೂಲಕ ಸಮಾಜದ ಉನ್ನತಿಗೆ ಕೀರ್ತನಾ ಕುಟೀರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಮಗ್ರವಾಗಿ ವಿವರಿಸಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಶಂ.ನಾ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾಥರ್ಿಗಳಾದ ಮುೃದುಲಾ ಮತ್ತು ಪೂಜಾರಿಂದ ಹರಿಕಥಾ ಸಂಕೀರ್ತನೆ, ದೇವಕೀತನಯ ಕೂಡ್ಲು ರವರಿಂದ ದ್ರೌಪದಿ ಪರಿಣಯ ಕೀರ್ತನೆ ನಡೆಯಿತು. ಮಂಗಳವಾರ ಸಂಜೆ 4. 30 ರಿಂದ ಕೀರ್ತನಾ ಕುಟೀರದ ವಿದ್ಯಾಥರ್ಿಗಳಾದ ಶ್ರಾವಣ್ಯ, ಪ್ರೇರಣ, ನಿಶ್ಚಿತ, ಸುರಕ್ಷಾ ರಿಂದ ರಂಗ ಪ್ರವೇಶ, ಬಳಿಕ ಕಾರ್ಕಳ ಅನಂತಪದ್ಮನಾಭ ಭಟ್ ರವರಿಂದ ಭಕ್ತ ಭೀಷ್ಮ ಕಥಾ ಸಂಕೀರ್ತನೆ ನಡೆಯಲಿದೆ.