ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ನೋಟು ನಿಷೇಧ ಕಾಳಧನಿಕರಿಗೆ ಬಿಸಿ ತುಪ್ಪವಾಗಿತ್ತು: ಅರುಣ್ ಜೇಟ್ಲಿ
ನವದೆಹಲಿ: ದೇಶದಲ್ಲಿ ನೋಟು ನಿಷೇಧಗೊಂಡು ನಾಳೆಗೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನೋಟು ನಿಷೇಧ ಹಾಗೂ ಜಿಎಸ್ಟಿಯಂಥ ಪರಿಣಾಮಕಾರಿ ಆಥರ್ಿಕ ಸುಧಾರಣೆಗಳ ಮೂಲಕ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸಕರ್ಾರ ಇಡೀದ ದೇಶದ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ ಅವರು ನೋಟು ನಿಷೇಧ ನಿಧರ್ಾರವನ್ನು ವಿರೋಧಿಸುತ್ತಿರುವವರೆಲ್ಲರೂ ಕಪ್ಪು ಹಣ ದಂಧೆಯಲ್ಲಿರುವವರು. ಹೀಗಾಗಿ ಕೆಲವು ಪಕ್ಷಗಳಿಗೆ ಈ ನಿಧರ್ಾರ ಕಹಿಯಾಗಿದೆ. ಆದರೆ ದೇಶದ ಕೋಟ್ಯಂತರ ಜನರ ಪಾಲಿಗೆ ಇದು ವರದಾನವಾಗಿ ಪರಿಣಮಿಸಿದೆ ಎಂದರು.
ನೋಟು ನಿಷೇಧದಿಂದಾಗಿ ನಗದು ವಹಿವಾಟು ಪ್ರಮಾಣ ಕಡಿಮೆಯಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಉಗ್ರರಿಗೆ ರವಾನೆಯಾಗುತ್ತಿದ್ದ ಕೋಟಿ ಕೋಟಿ ಹಣಕ್ಕೆ ಕಡಿವಾಣ ಬಿದ್ದಿದೆ. ಈ ಮೊದಲು ಕಪ್ಪು ಹಣವು ಉಗ್ರ ಸಂಘಟನೆಗಳಿಗೆ ರವಾನೆಯಾಗುತ್ತಿತ್ತು. ಅದೀಗ ಸಂಪೂರ್ಣ ಸ್ಧಗಿತಗೊಂಡಿದೆ ಎಂದು ಜೇಟ್ಲಿ ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸಕರ್ಾರದಲ್ಲಿ ಕೆಲ ನಿಧರ್ಾರಗಳು ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಆಥರ್ಿಕ ಸುಧಾರಣೆ ಕ್ರಮಗಳಿಗೆ ಇಡೀ ವಿಶ್ವವೇ ತಲೆದೂಗಿದೆ ಎಂದರು. ಇನ್ನು ನೋಟು ನಿಷೇಧವನ್ನು ಪ್ರತಿಪಕ್ಷಗಳು ಲೂಟಿ ಎಂದು ಬಣ್ಣಿಸುತ್ತಿವೆ. ಹಾಗಾದರೆ 2ಜಿ ಹಗರಣ, ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣವನ್ನು ಏನೆನ್ನಬೇಕು. ಅವರುಗಳು ಮಾಡಿದ್ದು ಲೂಟಿ ಆದರೆ ನಾವು ಮಾಡಿದ್ದು ಸುಧಾರಣೆ ಕ್ರಮ ಎಂದು ಕಾಂಗ್ರೆಸ್ ಗೆ ಜೇಟ್ಲಿ ತಿರುಗೇಟು ನೀಡಿದರು.