HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕಾಸರಗೋಡು ಎಂದೆಂದೂ ಕನ್ನಡದ ನೆಲ : ಮಹಾಜನ ವರದಿ ಜಾರಿಯಾಗಲಿ ಕಾಲೇಜು ವಿದ್ಯಾಥರ್ಿಗಳ ಸಹಿತ ಕನ್ನಡಿಗರಿಂದ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಕಾಸರಗೋಡು: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಡಾ|ಕಯ್ಯಾರ ಕಿಂಞ್ಞಣ್ಣ ರೈ ಅಂತಹ ಮಂತರನ್ನು ಕೊಡುಗೆಯಾಗಿ ನೀಡಿದ ಕಾಸರಗೋಡು ಎಂದೆಂದೂ ಕನ್ನಡ ನಾಡು. ಕಾಸರಗೋಡಿನ ಸಂಸ್ಕೃತಿ ಎಲ್ಲವೂ ಕನ್ನಡವೇ. ಕಾಸರಗೋಡು ಕನರ್ಾಟಕಕ್ಕೆ ಸೇರಬೇಕೆಂದು ಘೋಷಿಸಿದ ಮಹಾಜನ ವರದಿ ಶೀಘ್ರವೇ ಜಾರಿಯಾಗಬೇಕು. ಆ ಮೂಲಕ ಕಾಸರಗೋಡನ್ನು ಕನರ್ಾಟಕಕ್ಕೆ ಸೇರ್ಪಡೆಗೊಳಿಸಬೇಕೆಂದು ಕನರ್ಾಟಕ ನವನಿಮರ್ಾಣ ಸೇನೆ ಬೆಂಗಳೂರು ಇದರ ರಾಜ್ಯಾ`್ಯಕ್ಷ ಭೀಮಾಶಂಕರ ಪಾಟೀಲ ಅವರು ಹೇಳಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಗೋಡೆಗಳಲ್ಲಿ ಕನ್ನಡ ವಿರೋಧಿ ಬರಹಗಳನ್ನು ಬರೆದು ಕನ್ನಡಿಗರನ್ನು, ವಿದ್ಯಾಥರ್ಿಗಳನ್ನು, ಸಾಹಿತಿಗಳನ್ನು ಅವಮಾನಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಕನರ್ಾಟಕ ನವನಿಮರ್ಾಣ ಸೇನೆ, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಕಾಸರಗೋಡು, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾಥರ್ಿಗಳ ಸ್ನೇಹರಂಗ ಜಂಟಿಯಾಗಿ ನಡೆಸಿದ ಜಿಲ್ಲಾಕಾರಿ ಕಚೇರಿಗೆ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ 62 ವರ್ಷಗಳಿಂದ ಕಾಸರಗೋಡಿನ ಕನ್ನಡಿಗರು ವಿವಿ` ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಪಣಿಕ್ಕರ್ ಅವರ ವಂಚನೆಯಿಂದ ಇಡೀ ಕನ್ನಡದ ಕುಡಿಗಳು ಸಂಕಷ್ಟ, ನೋವನ್ನು ಅನು`ವಿಸುವಂತಾಗಿದೆ. ಈ ಎಲ್ಲಾ ನೋವು, ಸಂಕಷ್ಟಗಳಿಗೆ ಒಂದೇ ಒಂದು ಪರಿಹಾರ ಮಹಾಜನ ಆಯೋಗ ವರದಿ ಜಾರಿ ಎಂದ ಅವರು ಕಾಸರಗೋಡಿನ ಕನ್ನಡಿಗರಿಗೆ ಯಾವುದೇ ಸಮಸ್ಯೆ ಎದುರಾದರೂ ನಾವು ನಿಮ್ಮ ಜತೆಯಲ್ಲಿರುತ್ತೇವೆ. ಯಾವುದಕ್ಕೂ ಕುಗ್ಗದೆ, ಜಗ್ಗದೆ ನಿಲ್ಲಬೇಕು. ನಿರಂತರವಾಗಿ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ಇನ್ನೂ ಮುಂದುವರಿದರೆ ಅದರ ವಿರುದ್ಧ ಸೆಟೆದು ನಿಂತು ಸರಿಯಾದ ದಾರಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾಥರ್ಿಗಳ ಮೇಲೆ ಇನ್ನೂ ದೌರ್ಜನ್ಯ ನಡೆದರೆ ನಾವಂತೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಈಗಾಗಲೇ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ವಿರೋ ಚಟುವಟಿಕೆಗಳಲ್ಲಿ ನಿರತರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಅವರು ಹೇಳಿದರು. ಕಾಸರಗೋಡಿನ ಕನ್ನಡಿಗರಿಗಾಗುತ್ತಿರುವ ಅನ್ಯಾಯವನ್ನು ಪ್ರತಿ`ಟಿಸಿ ಡಿ.1 ರಂದು ಕೇರಳದ ರಾಜಾ`ಾನಿಯಲ್ಲಿ ಸೆಕ್ರೆಟರಿಯೇಟ್ ಮುಂದೆ `ರಣಿ ನಡೆಸುವುದಾಗಿ ಇದೇ ಸಂದರ್`ದಲ್ಲಿ ಅವರು ಹೇಳಿದರು. ಮಲಯಾಳಿಗಳ ಅಟ್ಟಹಾಸ ಕಾಸರಗೋಡಿನ ಕನ್ನಡಿಗರ ಮೇಲೆ ಇನ್ನೂ ಮುಂದುವರಿದರೆ ಬೆಂಗಳೂರಿನಿಂದ ಮಲಯಾಳಿಗರನ್ನು ಹೊರ ದಬ್ಬಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಲಯಾಳಿಗಳ ಹಿಂಸೆಗೆ ಜಗ್ಗುವುದು, ಕುಗ್ಗುವುದು ಬೇಡ. ಕನ್ನಡ ಡಿಂಡಿಮವನ್ನು ಬಾರಿಸಿ ಅವರಿಗೆ ಸರಿಯಾದ ಪಾಠವನ್ನು ಕಲಿಸುವ ಶಕ್ತಿಯಾಗಬೇಕು ಎಂದರು. ಅಚ್ಚಗನ್ನಡ ಪ್ರದೇಶವಾದ ಕಾಸರಗೋಡನ್ನು ಕನರ್ಾಟಕಕ್ಕೆ ಸೇರಿಸಬೇಕೆಂಬ ಇಚ್ಛಾಶಕ್ತಿಯನ್ನು ಕನರ್ಾಟಕದ ಸಂಸದರು ತೋರಬೇಕು. ಲೋಕಸ`ೆಯಲ್ಲಿ ಮಹಾಜನ ವರದಿ ಜಾರಿಗೆ ಒತ್ತಾಯಿಸಬೇಕೆಂದು ಆಗ್ರಹಿಸಿದ ಅವರು ಮಲಯಾಳಿಗಳ ಗೊಡ್ಡು ಬೆದರಿಕೆಗೆ ಬಾಗುವ ಅಗತ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಕ್ ಅವರು ಮಾತನಾಡಿ ಅನ್ಯಾಯವಾಗಿ ಕೇರಳಕ್ಕೆ ಸೇರಿಹೋದ ಕಾಸರಗೋಡನ್ನು ಕನರ್ಾಟಕಕ್ಕೆ ಸೇರಿಸಲು ಮಹಾಜನ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಕನರ್ಾಟಕ ನವ ನಿಮರ್ಾಣ ಸೇನೆಯ ಕೇರಳ ರಾಜ್ಯ ಅ`್ಯಕ್ಷ ಶಿವರಾಮ ಕಾಸರಗೋಡು ಅ`್ಯಕ್ಷತೆ ವಹಿಸಿದರು. ಸ್ನೇಹರಂಗದ ಅ`್ಯಕ್ಷ ಬಾಲಕೃಷ್ಣ ಅವರು ಮಾತನಾಡಿದರು. ಗುರುಪ್ರಸಾದ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಜಾಗೃತಿ ಸಮಿತಿ ಅ`್ಯಕ್ಷ ಸತ್ಯನಾರಾಯಣ ಅಮೈ ಅವರು ಸ್ವಾಗತಿಸಿದರು. ವಿದ್ಯಾನಗರದ ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಆರಂ`ಗೊಂಡ ಜಿಲ್ಲಾಕಾರಿ ಕಚೇರಿ ಜಾಥಾವನ್ನು ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಕ್ ಅವರು ಕನ್ನಡ `್ವಜವನ್ನು ಕನರ್ಾಟಕ ನವನಿಮರ್ಾಣ ಸೇನೆಯ ಕನರ್ಾಟಕ ರಾಜ್ಯಾ`್ಯಕ್ಷ ಭೀಮಾಶಂಕರ ಪಾಟೀಲ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು. ವಿದ್ಯಾಥರ್ಿಗಳು ಸಹಿತ ನೂರಾರು ಮಂದಿ `ಾಗವಹಿಸಿದ ಜಾಥಾವನ್ನು ಜಿಲ್ಲಾಕಾರಿ ಕಚೇರಿ ಪರಿಸರದಲ್ಲಿ ಪೊಲೀಸರು ತಡೆದರು. ಜಿಲ್ಲಾಕಾರಿ ಕಚೇರಿ ಮುಂ`ಾಗ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಕೇರಳ ಸರಕಾರಕ್ಕೆ ಕ್ಕಾರ ಹಾಕುತ್ತಾ ಕನ್ನಡಿಗರ ಹಕ್ಕು ಸವಲತ್ತುಗಳನ್ನು ಕಾಪಾಡುವಂತೆ ಸರಕಾರವನ್ನು ಒತ್ತಾಯಿಸಲಾಯಿತು. ಸ`ೆಯ ಬಳಿಕ ಭೀಮಾಶಂಕರ ಪಾಟೀಲ ಅವರ ನೇತೃತ್ವದಲ್ಲಿ ಕನ್ನಡಿಗರ ವಿವಿ` ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಕಾರಿಗೆ ಸಲ್ಲಿಸಲಾಯಿತು. ಕಾಸರಗೋಡಿನ ಕನ್ನಡಿಗರು ಅನು`ವಿಸುತ್ತಿರುವ ವಿವಿ` ಸಮಸ್ಯೆಗಳ ಬಗ್ಗೆ ಜಿಲ್ಲಾಕಾರಿಗಳ ಗಮನ ಸೆಳೆಯಲಾಯಿತು. ಸರಕಾರಿ ಕಾಲೇಜಿನಲ್ಲಿ ಕನ್ನಡ ವಿದ್ಯಾಥರ್ಿಗಳಿಗೆಸಗಿದ ಅವಮಾನದ ಹಿಂದಿನ ಶಕ್ತಿಯನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಲಾಯಿತು. ಕನ್ನಡಿಗರ ಅಹವಾಲು ಆಲಿಸಿದ ಜಿಲ್ಲಾಕಾರಿಗಳು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ `ರವಸೆ ನೀಡಿದರು. ಮೆರವಣಿಗೆಗೆ ನ್ಯಾಯವಾದಿ ಅಡೂರು ಉಮೇಶ್ ನಾಕ್, ಕಾಸರಗೋಡು ನಗರಸ`ಾ ಸದಸ್ಯರಾದ ಸವಿತಾ ಟೀಚರ್, ಶಂಕರ್, ಶಿವರಾಮ ಕಾಸರಗೋಡು, ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ಅಮೈ, ಶ್ರೀಕಾಂತ್ ಕಾಸರಗೋಡು, ದಯಾನಂದ ಬೆಳ್ಳೂರಡ್ಕ, ಯೋಗೀಶ್ ಕೋಟೆಕಣಿ ಮೊದಲಾದವರು ನೇತೃತ್ವ ನೀಡಿದರು. -

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries