ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2017
ಮಕ್ಕಳಲ್ಲಿ ಪುಸ್ತಕ ಪ್ರೀತಿ ಹುಟ್ಟಿಸಿಬೇಕು-ಹುಸೈನ್ ಮಾಸ್ತರ್
ಕುಂಬಳೆ: ಮನುಷ್ಯನ ಸಂಬಂಧಗಳು ಪರಸ್ಪರ ಬೆಸೆದುಕೊಳ್ಳಲು ಪುಸ್ತಕಗಳು ಬಹಳಷ್ಟು ಸಹಕಾರಿಯಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳ ಸಹಿತ ಮನುಷ್ಯ ಸಂಬಂಧಗಳು ಮರೀಚಿಕೆಯಾಗುತ್ತಿವೆ ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ನ ಕಾರ್ಯದಶರ್ಿ ಅಹ್ಮದ್ ಹುಸೈನ್ ಪಿ.ಕೆ ಅವರು ಅಭಿಪ್ರಾಯಪಟ್ಟರು.
ಇಎಂಎಸ್ ಸ್ಮಾರಕ ಗ್ರಂಥಾಲಯ ಕುಂಬಳೆ ಇದರ ಆಶ್ರಯದಲ್ಲಿ ಗ್ರಂಥಾಲಯ ಆವರಣದಲ್ಲಿ ಶನಿವಾರ ನಡೆದ ಮಹಿಳೆ ಮತ್ತು ಪುಸ್ತಕ ಎಂಬ ಚಚರ್ಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕದ ಓದು ಕಾಟಾಚಾರಕ್ಕಾಗಿರದೆ ತೀವ್ರ ಗಂಭೀರ ಓದುವ ಅಭ್ಯಾಸವನ್ನು ಬೆಳೆಸುವ ಅನಿವಾರ್ಯತೆ ಇದೆ. ಸಾಮಾನ್ಯವಾಗಿ ಮಹಿಳೆಯರು ಸಾಮಾಜಿಕ ಕಾದಂಬರಿಗಳನ್ನು ಓದಲು ಹೆಚ್ಚು ಉತ್ಸುಕರಾಗಿರುತ್ತಾರೆ. ಹಾಗೆಯೇ ಮುಂದಿನ ಜನಾಂಗವನ್ನು ಪುಸ್ತಕವನ್ನು ಪ್ರೇಮಿಸಲು ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರತ್ನಾಕರ ಅವರು, ಹೊತ್ತಗೆಗಳತ್ತ ಒಲವು ಕಡಿಮೆಯಾಗಿರುವುದು ಖೇಧಕರ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಮಹತ್ವಪೂರ್ಣ ಕಾರ್ಯವನ್ನು ಸಾಧಿಸಿರುವುದು ಸಾವಿರಾರು ಪುಸ್ತಕಪ್ರೇಮಿಗಳನ್ನು ಹುಟ್ಟು ಹಾಕುವಂತೆ ಮಾಡಿದೆ ಎಂದು ತಿಳಿಸಿದರು.
ಬಳಿಕ ಮಹಿಳೆ ಮತ್ತು ಪುಸ್ತಕ ಎಂಬ ವಿಚಾರವಾಗಿ ಲೇಖಕಿ ಕೃಷ್ಣವೇಣಿ ಕಿದೂರು, ಭಾಗ್ಯ ಕುಂಬಳೆ ವಿಚಾರ ವಿನಿಮಯ ಮಾಡಿಕೊಂಡರು.
ಗೀತಾ ಕುಂಬಳೆ ಸ್ವಾಗತಿಸಿ, ಪೂಣರ್ಿಮಾ ವಂದಿಸಿದರು.