ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಕುಂಬಳೆ ಉಪಜಿಲ್ಲಾ ಕಲೋತ್ಸವ : ಕಾಟುಕುಕ್ಕೆ ಶಾಲೆ ಸಮಗ್ರ ಚಾಂಪಿಯನ್
ಕಾಸರಗೊಡು: ನೀಚರ್ಾಲು ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕಂಡರಿ ಶಾಲೆ ಸಮಗ್ರ ಚಾಂಪಿಯನ್ಶಿಪ್ ಪಡೆಯಿತು.
ಐದು ದಿನಗಳಿಂದ ನಡೆದ ಕಲೋತ್ಸವದಲ್ಲಿ 209 ಅಂಕಗಳೊಂದಿಗೆ ಸತತ ಎರಡನೇ ಬಾರಿ ಕಾಟುಕುಕ್ಕೆ ಶಾಲೆ ಚಾಂಪಿಯನ್ಶಿಪ್ ಪಡೆದಿದೆ. ಗ್ರೂಪ್ ಸ್ಪಧರ್ೆಗಳಾದ ಸಮೂಹ ನೃತ್ಯ, ನಾಟಕ, ದಫ್ಮುಟ್, ಜಾನಪದ ಹಾಡು, ಚೆಂಡೆಮೇಳ, ಮಾರ್ಗಂಕಳಿ ಸ್ಪಧರ್ೆಗಳಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ, ತಿರುವಾದಿರ, ಇಂಗ್ಲೀಷ್ ಪ್ರಹಸನ, ಕೋಲಾಟ, ವಂಜಿಪಾಟ್ ಸ್ಪಧರ್ೆಗಳಲ್ಲಿ ಎ ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ, ವೈಯಕ್ತಿಕ ಸ್ಪಧರ್ೆಗಳಾದ ಚೆಂಡೆ, ಸಂಸ್ಕೃತ ಕಂಠಪಾಠ, ಹಿಂದಿ ಕಂಠಪಾಠ, ಇಂಗ್ಲೀಷ್ ಕಂಠಪಾಠ, ತಮಿಳು ಕಂಠಪಾಠ, ಮಾಪಿಳ್ಳಪಾಟು, ಕೊಲಾಷ್, ಭರತನಾಟ್ಯ, ಸಂಸ್ಕೃತ ಕಥಾರಚನೆ, ಉದರ್ು ಗಝಲ್, ಕೇರಳ ನಟನೆ ಇತ್ಯಾದಿ ಸ್ಪಧರ್ೆಗಳಲ್ಲಿ ಕಾಟುಕುಕ್ಕೆ ಶಾಲಾ ವಿದ್ಯಾಥರ್ಿಗಳು ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
138 ವಿದ್ಯಾಥರ್ಿಗಳು ಸ್ಪಧರ್ೆಗಳಲ್ಲಿ ಭಾಗವಹಿಸಿದ್ದರು. ವಿಜೇತ ವಿದ್ಯಾಥರ್ಿಗಳನ್ನು ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್, ಶಾಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಜೀವ ರೈ, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಅಭಿನಂದಿಸಿದರು. ಅಧ್ಯಾಪಕರಾದ ವಾಣಿಶ್ರೀ, ರಾಜೇಶ್ ಸಿ.ಎಚ್., ಅನಿತಾ ಕುಮಾರಿ, ವಿನೋದ ಕುಮಾರ್, ರಮಣಿ ಎಂ.ಎಸ್., ಸರಸ್ವತಿ ಪ್ರಸನ್ನ, ವಾಣಿ ಕೆ., ಕೃಷ್ಣ ಕುಮಾರಿ, ಬಾಲಕೃಷ್ಣ, ಸುರೇಶ್, ಗೋವಿಂದನ್ ನಂಬೂದಿರಿ, ಸಂದೀಪ್ ಕುಮಾರ್, ಈಶ್ವರ ನಾಯಕ್, ಮಹೇಶ್ ಏತಡ್ಕ, ಹೇಮಲತ ನೇತೃತ್ವ ವಹಿಸಿದ್ದರು.