ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 30, 2017
ಕೂಡ್ಲು ಮೇಳದ ಪ್ರಥಮ ಸೇವೆಯಾಟ, ತಿರುಗಾಟಕ್ಕೆ ಚಾಲನೆ
ಕುಂಬಳೆ: ತೆಂಕುತಿಟ್ಟಿನ ಅತಿ ಪ್ರಾಚೀನ ಯಕ್ಷಗಾನ ಮೇಳವೆಂಬ ಖ್ಯಾತಿಯ ಕೂಡ್ಲು ಮೇಳದ ಪ್ರಸ್ತುತ ವರ್ಷದ ಸೇವೆಯಾಟ ಇತ್ತೀಚೆಗೆ ಶ್ರೀಕ್ಷೇತ್ರ ಕೂಡ್ಲು ದೇವಸ್ಥಾನದಲ್ಲಿ ನಡೆಯಿತು.
ಕೂಡ್ಲು ಶಾನುಭೋಗರ ಮೇಲ್ತನಿಖೆಯಲ್ಲಿ ಆರಂಬಗೊಂಡಿದ್ದ ಕೂಡ್ಲು ಮೇಳಕ್ಕೆ ಎರಡು ಶತಮಾನಗಳ ಇತಿಹಾಸವಿದ್ದು, ಹಲವು ಆಟ-ಜೊಡಾಟಗಳ ಮೂಲಕ ಹೆಸರುಗಳಿಸಿತ್ತು. ಘಟಾನುಘಟಿಗಳ ಮೇಳವಾಗಿದ್ದ ಈ ಮೇಳ ಆಧುನಿಕತೆಯ ವೇಗದಲ್ಲಿ ಬಳಿಕ ದಶಕಗಳ ಕಾಲ ನಿಂತುಹೋಗಿದ್ದರೂ, ಬಳಿಕ ಕಳೆದ ಕೆಲವು ವರ್ಷಗಳಿಂದ ಮತ್ತೆ ಸಹೃದಯ ಪ್ರೇಕ್ಷಕರ ಮುತುವಜರ್ಿಯಿಂದ ತಿರುಗಾಟ ನಡೆಸುತ್ತಿದೆ.
ಕೂಡ್ಲು ಶ್ರೀಕ್ಷೇತ್ರ ಪರಿಸರದಲ್ಲಿ ಇತ್ತೀಚೆಗೆ ಪಾಂಡವಾಶ್ವಮೇಧ ಪ್ರಸಂಗದ ಸೇವೆಯಾಟ ನಡೆಸುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಲಾಯಿತು.ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕೆ.ಜಿ.ಶಾನುಭೋಗ್ ಚಾಲನೆ ನೀಡಿ ಶುಭಹಾರೈಸಿದರು.
ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟರಮಣ ಭಟ್, ಮಧೂರು ವಾಸುದೇವ ಕಲ್ಲೂರಾಯ, ರಾಮಪ್ರಸಾದ್, ಹರೀಶ್ ಅಡೂರು, ಲಕ್ಷ್ಮೀಶ ಬೆಂದ್ರೊಡಿ, ರಿತೇಶ್ ಸಹಕರಿಸಿದರು. ಮುಮ್ಮೇಳದಲ್ಲಿ ಮೂಲಡ್ಕ ನಾರಾಯಣ ಮಣಿಯಾಣಿ, ನಾ.ಕಾರಂತ ಪೆರಾಜೆ, ಶಶಿಕಿರಣ ಕಾವು, ರಾಮಚಂದ್ರ ಹೊಳ್ಳ, ಓಂಪ್ರಕಾಶ ಬದಿಯಡ್ಕ, ಅಚ್ಯುತ ಬಲ್ಯಾಯ, ರಾಕೇಶ್ ಗೋಳಿಯಡ್ಕ, ಕಿಶೋರ್ ಕೂಡ್ಲು, ಚಂದ್ರಮೋಹನ ಕೂಡ್ಲು, ಅರುಣ್ ಪಾಟಾಳಿ, ಮಧುರಾಜ್ ಎಡನೀರು, ರಂಜಿತ್ ಗೋಳಿಯಡ್ಕ, ವಿಘ್ನೇಶ ಕಾರಂತ ಕೂಡ್ಲು, ಅಪರ್ಿತಾ ಕೂಡ್ಲು, ಅನ್ವಿತಾ ಕುಡ್ಲು, ಶ್ರೀರಾಮ ಕೂಡ್ಲು, ಲತೇಶ್ ಆಚಾರ್ಯ, ವೈಷ್ಣವಿ ಕಾರಂತ ಕೂಡ್ಲು ವಿವಿಧ ಪಾತ್ರಗಳನ್ನು ನಿರ್ವಹಿಸಿದರು.