HEALTH TIPS

ಯಾವುದೇ ಶೀರ್ಷಿಕೆಯಿಲ್ಲ


ಬದಿಯಡ್ಕ : ಎಪ್ರಿಲ್ 04ರಿಂದ 12ರ ತನಕ ಬ್ರಹ್ಮಕಲಶೋತ್ಸವವನ್ನು ನಡೆಸಲು ತೀಮರ್ಾನಿಸಲಾಗಿದ್ದು ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮ ಅತೀ ಅಗತ್ಯ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಸಂತ ಪೈ ಬದಿಯಡ್ಕ ಹೇಳಿದರು.
ಅವರು ಭಾನುವಾರ ಬೊಳ್ಳೂರು ಶ್ರೀ ಸದಾಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳ ರೂಪೀಕರಣ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ದೇವತಾನುಗ್ರಹ ಲಭಿಸಬೇಕಾದರೆ ತ್ಯಾಗಮನೋಭಾವವಿರಬೇಕು. ನಮ್ಮೂರ ಕ್ಷೇತ್ರದ ಬ್ರಹ್ಮಕಲಶ ಮಹೋತ್ಸವ ಉತ್ತಮ ರೀತಿಯಲ್ಲಿ ನಡೆಯಬೇಕೆಂಬ ಛಲವಿದ್ದರೆ ಮಾತ್ರ ಯಶಸ್ಸು ನಮ್ಮದಾಗಲಿದೆ ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ನಡುವಂತಿಲ್ಲಾಯ ಮುನಿಯೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಭಕ್ತಾದಿಗಳ ಕೈಜೋಡಿಸುವಿಕೆಯಿಂದ ಮಾತ್ರ ಇಂತಹ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತದೆ ಎಂದರು. ಧಾಮರ್ಿಕ ಮುಂದಾಳುಗಳಾದ ಎಸ್.ಎನ್. ಮಯ್ಯ ಬದಿಯಡ್ಕ, ಉಮೇಶ್ ರೈ ಮೇಗಿನ ಕಡಾರು ಮಾತನಾಡಿದರು. ಪ್ರ.ಕಾರ್ಯದಶರ್ಿ ಶ್ರೀನಿವಾಸ ನಡುವಂತಿಲ್ಲಾಯ ಮುನಿಯೂರು ಸ್ವಾಗತಿಸಿ, ಈಶ್ವರ ಮಾಸ್ತರ್ ಧನ್ಯವಾದವನ್ನಿತ್ತರು. ಊರ ಪರವೂರ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
2018 ಎಪ್ರಿಲ್ 04ರಿಂದ 12ರ ತನಕ ಬ್ರಹ್ಮಕಲಶೋತ್ಸವ, ಎ. 9ನೇ ತಾರೀಕು ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿರುವುದು. ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವರೇ ಸಭೆಯಲ್ಲಿ ತೀಮರ್ಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಮುಂದಿನ ಸಭೆಯು ಜನವರಿ 7 ಭಾನುವಾರ 10 ಗಂಟೆಗೆ ನಡೆಯಲಿರುವುದು. ಈ ಸಂದರ್ಭದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries