ಶಬರಿಮಲೆಗೆ ಕಾಲ್ನಡಿಗೆ ಯಾತ್ರೆ
ಮಂಜೇಶ್ವರ: ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದಲ್ಲಿ ಶಬರಿಮಲೆ ಯಾತ್ರೆಗೆ ವೃತಾನುಷ್ಠರಾಗಿ ಮಾಲೆಧಾರಿಗಳಾದವರ ಪೈಕಿ 11 ಮಂದಿ ಭಕ್ತರು ಭಾನುವಾರ ಸಂಜೆ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆಗೆ ತೆರಳಿದರು. ಇವರನ್ನು ಕ್ಷೇತ್ರದ ಗುರುಸ್ವಾಮಿ ಬಿ.ಎಂ.ಉಮೇಶ್ ಹಾಗೂ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ ಶುಭಾಶೀವರ್ಾದಗೈದು ಬೀಳ್ಕೊಟ್ಟರು.