HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಮಂಜೇಶ್ವರದಲ್ಲಿ ಕಾಂಗ್ರೆಸ್ 133ನೇ ಸ್ಥಾಪನಾ ದಿನಾಚರಣೆ
   ಕಾಂಗ್ರೆಸ್ ಪಕ್ಷ ಭಾರತೀಯರ ಹೃದಯದಲ್ಲಿ ನೆಲೆನಿಂತ ಪಕ್ಷ.- ಹಕ್ಕಿಂ ಕುನ್ನಿಲ್
  ಮಂಜೇಶ್ವರ : ಇಂಡಿಯನ್ ನೇಶನಲ್ ಕಾಂಗ್ರೆಸ್ ಪ್ರತೀ ಭಾರತೀಯ ಪ್ರಜೆಯ ಹೃದಯದಲ್ಲಿ ನೆಲೆನಿಂತಿರುವ ಪಕ್ಷವಾಗಿದೆ. ಪ್ರಜಾಪ್ರಭುತ್ವ,ಸಮಾಜವಾದ,ಮತೇತರವಾದ,ಸ್ವಾತಂತ್ರ್ಯ ಇತ್ಯಾದಿಗಳನ್ನು ಪ್ರತೀ ಭಾರತೀಯನಿಗೆ ಖಾತರಿಪಡಿಸಿದ ಪಕ್ಷವಾಗಿದೆ ಕಾಂಗ್ರೆಸ್. ತ್ಯಾಗ,ಸರ್ವಧರ್ಮ ಸಮಭಾವ ಮತ್ತು ಅಹಿಂಸೆ ಕಾಂಗ್ರೆಸ್ ನ ಮೂಲಮಂತ್ರಗಳಾಗಿವೆ.
   ಆದುದರಿಂದಲೇ ಬರೀ ಎಪ್ಪತ್ತೆರಡು ಜನರಿಂದ ಸ್ಥಾಪಿತವಾದ ಈ ಪಕ್ಷವು ನೂರಮೂವತ್ತೆರಡು ವರ್ಷಗಳು ಸಂದರೂ ಇನ್ನೂ ಅಸ್ತಿತ್ವದಲ್ಲಿದೆಯೆಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ *ಹಕ್ಕಿಂ ಕುನ್ನಿಲ್* ಹೇಳಿದ್ದಾರೆ. ಅವರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿ ಹಿಲ್ ಸೈಡ್ ಆಡಿಟೋರಿಯಂನಲ್ಲಿ ಜರುಗಿದ ಇಂಡಿಯನ್ ನೇಶನಲ್ ಕಾಂಗ್ರೆಸ್ ಪಕ್ಷದ 133ನೇ ಜನ್ಮದಿನಾಚರಣಾ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
    ಪರಕೀಯರ ದಾಸ್ಯದಿಂದ ದೇಶವನ್ನು ಸ್ವತಂತ್ರಗೊಳಿಸಲು ಸುದೀರ್ಘ ಕಾಲ ನಡೆಸಿದ ಹೋರಾಟಗಳು ಜಗತ್ತಿಗೇ ಮಾದರಿಯಾಗಿದೆ. ಪಕ್ಷ ಸ್ಥಾಪಿತಗೊಂಡ ಅರುವತ್ತೆರಡು ವರ್ಷಗಳ ಬಳಿಕವಷ್ಟೇ ಪಕ್ಷ ಅಧಿಕಾರಕ್ಕೆ ಬಂತು.ಅಂದರೆ ಒಂದು ತಲೆಮಾರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದೇಶ ಮತ್ತು ಪಕ್ಷಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಮೋಘ ನಿದರ್ಶನವಿದಾಗಿದೆಯೆಂದು ಅವರು ಹೇಳಿದರು.  ಸ್ವಾತಂತ್ರ್ಯಾನಂತರ ದೇಶದಲ್ಲಿದ್ದ ಆರುನೂರರಷ್ಟು ತುಂಡು ರಾಜ್ಯಗಳನ್ನು ಒಗ್ಗೂಡಿಸಿ ಭಾರತ ಒಕ್ಕೂಟದಡಿಯಲ್ಲಿ ತಂದು ಅಖಂಡ ಭಾರತ ನಿಮರ್ಾಣ ಮಾಡಿದ್ದು ಪಕ್ಷದ ಮಹತ್ಸಾಧನೆಯಾಗಿದೆ.
    ಅರೆ ಹೊಟ್ಟೆಯ,ಅರೆಬೆತ್ತಲೆ ಜನತೆಗೆ ಅನ್ನ,ವಸ್ತ್ರ ಹಾಗೂ ವಸತಿ ನೀಡಿದ್ದು,ಹುಟ್ಟಿದ ಮಣ್ಣಿನಲ್ಲಿ ದುಡಿಯುವ ಭೂಮಿಯ ಮಾಲಕತ್ವ ಒದಗಿಸಿಕೊಟ್ಟದ್ದು, ಹಸಿರುಕ್ರಾಂತಿಯ ಮೂಲಕ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ತಂದದ್ದು, ಕೈಗಾರಿಕಾ ಕ್ರಾಂತಿಯ ಮೂಲಕ ಉದ್ಯೋಗ ಮತ್ತು ಅಭಿವೃದ್ಧಿಯನ್ನು ಸಾಧಿಸಿದ್ದು, ಪಂಚವಾಷರ್ಿಕ ಯೋಜನೆಗಳ ಮೂಲಕ ವ್ಯವಸ್ಥಿತ ಅಭಿವೃದ್ಧಿ ಜ್ಯಾರಿಗೊಳಿಸಿದ್ದು, ಬ್ಯಾಂಕ್ ರಾಷ್ಟ್ರೀಕರಣ ಮೂಲಕ ಬಡವನಿಗೆ ಬ್ಯಾಂಕ್ ಬಾಗಿಲು ತೆರೆದುಕೊಟ್ಟದ್ದು, ರಾಜಧನ ರದ್ಧತಿ,ಬಾಂಗ್ಲಾ ವಿಮೋಚನೆ, ಪಂಜಾಬ್ ಪ್ರತ್ಯೆಕತಾವಾದದ ನಿಮರ್ೂಲನ, ಅಲಿಪ್ತ ಚಳವಳಿಯ ರೂಪೀಕರಣ, ವಿಜ್ಞಾನ ಹಾಗೂ ತಂತ್ರಜ್ಞಾನ ದಲ್ಲಿ ರಾಷ್ಟ್ರವನ್ನು ಜಗತ್ತಿನ ಇತರ ರಾಷ್ಟ್ರಗಳ ಪಂಕ್ತಿಗೆ ಸೇರ್ಪಡೆಗೊಳಿಸಿದ್ದು, ಇಪ್ಪತ್ತಂಶಗಳ ಕಾರ್ಯಕ್ರಮಗಳ ಮೂಲಕ ಜನತೆಯ ಸವರ್ಾಂಗೀಣ ಅಭಿವೃದ್ಧಿ ಸಾಧಿಸಿದ್ದು, ಉದ್ಯೋಗ ಖಾತರಿ ಯೋಜನೆಯ ಮೂಲಕ ದುಡಿಯಲು ಆಸಕ್ತಿಯಿರುವ ಸರ್ವರಿಗೂ ಉದ್ಯೋಗ ಖಾತರಿಪಡಿಸಿದ್ದು, ಆಹಾರ ಭದ್ರತಾ ಕಾಯ್ದೆ ಜ್ಯಾರಿಗೊಳಿಸಿದ್ದು, ಕ್ರಾಂತಿಕಾರಿ ಮಾಹಿತಿ ಹಕ್ಕು ಜ್ಯಾರಿಗೊಳಿಸಿದ್ದು ಇತ್ಯಾದಿಗಳು ದೇಶಕ್ಕೆ ಪಕ್ಷ ನೀಡಿದ ಕೊಡುಗೆಗಳಾಗಿವೆ. ಪ್ರಸ್ತುತ ಕಲುಷಿತ ರಾಜಕೀಯ ವಾತಾವರಣದಲ್ಲಿ ಭಾರತದ ದಲಿತ,ಅಲ್ಪಸಂಖ್ಯಾತ, ಹಿಂದುಳಿದ ಕೋಟ್ಯಂತರ ಜನತೆಗೆ ಇಂಡಿಯನ್ ನೇಶನಲ್ ಕಾಂಗ್ರೆಸ್ ಮಾತ್ರ ಏಕೈಕ ಆಶಾಕಿರಣವಾಗಿದೆ. ಇಂಡಿಯನ್ ನೇಶನಲ್ ಕಾಂಗ್ರೆಸ್ ಎಂಬ ಮಹಾನ್ ರಾಜಕೀಯ ಪಕ್ಷದ ಕಾರ್ಯಕರ್ತರಾಗಿ ಮುಂದುವರಿಯುವುದೇ ನಮಗಿರುವ ಸ್ಪಷ್ಟವಾದ ಮತ್ತು ಸರಿಯಾದ ಹಾದಿಯಾಗಿದೆ. ಆ ನಿಟ್ಟಿನಲ್ಲಿ ಮುಂದುವರಿದು ಪೂವರ್ಿಕರು ಹಚ್ಚಿದ ಬೆಳಕನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡುವ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸೋಣ ಎಂದು ಕಾಸರಗೋಡು ಜಿಲ್ಲಾ ಗಾಂಧಿದರ್ಶನ ವೇದಿಕೆ ಅಧ್ಯಕ್ಷ  ನ್ಯಾಯವಾದಿ  ಟಿ ಕೆ ಸುಧಾಕರನ್* ಹೇಳಿದ್ದಾರೆ. ಕಾರ್ಯಕ್ರಮದ ವಿಚಾರ ಸಂಕಿರಣದಲ್ಲಿ  ಅವರು ವಿಚಾರ ಮಂಡಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ *ಶ್ರೀ ಉಮ್ಮರ್ ಬೋರ್ಕಳ  ಅಧ್ಯಕ್ಷತೆ ವಹಿಸಿದರು.
   ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದಶರ್ಿಗಳಾದ ಸೋಮಶೇಖರ ಜೆ.ಎಸ್, ಸುಂದರ ಆರಿಕ್ಕಾಡಿ,ಅಲ್ಪಸಂಖ್ಯಾತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಮೀದ್ ಕೋಡಿಯಡ್ಕ, ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಮತಾ ದಿವಾಕರ್, ಗ್ರಾ.ಪಂ.ಅಧ್ಯಕ್ಷೆ ಶಂಷಾದ್ ಶುಕೂರ್, ಉಪಾಧ್ಯಕ್ಷರಾದ ಶಶಿಕಲಾ, ಸುನಿತಾ ಡಿ.ಸೋಜ, ಸದಸ್ಯರಾದ ಶೋಭಾ ಸೋಮಪ್ಪ, ಫಾತಿಮತ್ ಝೌರ, ಚಂದ್ರಾವತಿ,  ಮಂಜುನಾಥ ಪ್ರಸಾದ್ ರೈ, ಸೀತಾ.ಡಿ, ಮಂಡಲಾಧ್ಯಕ್ಷರಾದ ಸತ್ಯನ್.ಸಿ.ಉಪ್ಪಳ, ಸತ್ಯನಾರಾಯಣ ಕಲ್ಲೂರಾಯ,ಮೊಹಮ್ಮದ್ ಮಜಾಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಾ ಆರ್.ನಾಯಿಕ್ ಕನರ್ಾಟಕ ಕೊಂಕಣಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಲಕ್ಷ್ಮಣ ಪ್ರಭು,ಸಂಸ್ಕಾರ ಸಾಹಿತಿ ಬ್ಲೋಕ್ ಅಧ್ಯಕ್ಷ ಶ್ರೀ ಸತೀಶ್ ಅಡಪ್ಪ ಸಂಕಬೈಲ್, ಕಾರ್ಯದಶರ್ಿ ಶ್ರೀ ಆರಿಫ್ ಮಚ್ಚಂಪಾಡಿ ಬ್ಲೋಕ್ ಕಾಂಗ್ರೆಸ್ ಪದಾಧಿಕಾರಿಗಳಾದ  ಹಮೀದ್ ಕೋಡಿಯಡ್ಕ,ಎ.ಪ್ರಕಾಶ್ ನಾಯ್ಕ್,ಇಬ್ರಾಹಿಂ ಐ ಆರ್ ಡಿ ಪಿ,ಗುರುವಪ್ಪ ಮಂಜೇಶ್ವರ, ದಿವಾಕರ್ ಎಸ್ ಜೆ,ದಾಮೋದರ ಮಾಸ್ಟರ್,ನಾಗೇಶ್ ಮಂಜೇಶ್ವರ, ಬಾಬು ಬಂದ್ಯೋಡು, ಪೊನ್ನಮ್ಮ ಟೀಚರ್, ನವೀನ್ ರೈ ಉಪ್ಪಳ, ಮೊಹಮ್ಮದ್ ಬೆಜ್ಜ, ಇಕ್ಬಾಲ್ ಕಳಿಯೂರು,  ಪಿ.ಎಂ.ಖಾದರ್ ಹಾಜಿ,ತಿಮ್ಮಪ್ಪ ಶೆಟ್ಟಿ, ಓಂ ಕೃಷ್ಣ,ಎಸ್ ಅಬ್ದುಲ್ ಖಾದರ್ ಹಾಜಿ,ರಾಘವೇಂದ್ರ ಭಟ್ ,ಜಿ.ರಾಮಭಟ್,  ಬಿ.ಕೆ.ಮೊಹಮ್ಮದ್,ಇಂಟಕ್ ನಾಯಕರಾದ ಶ್ರೀನಿವಾಸ ಶೆಣೈ,ಹಮೀದ್ ಕಣಿಯೂರು,ಸುಧಾಕರ ಉಜಿರೆ,ರಾಮನ್ ಮಂಜೇಶ್ವರ,
ಯುವ ಕಾಂಗ್ರೆಸ್ ನಾಯಕರಾದ ಜಗದೀಶ್ ಮೂಡಂಬೈಲ್,ಇಷರ್ಾದ್ ಮಂಜೇಶ್ವರ, ಝಕರಿಯ್ಯಾ ಮಂಜೇಶ್ವರ,ಶರೀಫ್ ಅರಿಬೈಲ್,ಸಲೀಂ,ನಾರಾಯಣ ಏದಾರು,ಶಫೀಕ್ ಅಹಮದ್,ಅಸೀಸ್ ಕಟ್ಟೆ,ಮುಸ್ತಫಾ ಅಟ್ಟೆಗೋಳಿ,ನೇತಾರರಾದ ಫ್ರಾನ್ಸಿಸ್ ಡಿ ಸೋಜಾ, ರಂಜಿತ್ ಮಂಜೇಶ್ವರ, ಶುಕೂರ್ ತಲೆಕಳ,ಮುಷ್ತಾಕ್ ಹಾಜಿ,ಎ.ಎಂ.ಉಮ್ಮರ್ ಕುಂಞಿ,ಮಾಲಿಂಗ ಮಂಜೇಶ್ವರ, ರಾಮಚಂದ್ರ ಗಟ್ಟಿ, ಕೆ.ರಾಮ ಭಟ್,  ಡಿ.ಎಂ.ಕುಲಾಲ್, ರಝಾಕ್ ಹೊಸಂಗಡಿ,ರವಿಚಂದ್ರ ಕುಮಾರ್, ಮುಂತಾದವರು ಉಪಸ್ಥಿತರಿದ್ದರು..ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್  ವಕರ್ಾಡಿ ಸ್ವಾಗತಿಸಿ, ವಂದಿಸಿದರು.
   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries