HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಮುಸ್ಲಿಂ ಮಹಿಳೆಯರ ಮಸೂದೆ- 2017
               ತ್ರಿವಳಿ ತಲಾಖ್ ಮಸೂದೆ: ಮೇಲ್ಮನೆಯಲ್ಲಿ ಜ.2ರಂದು ಮಂಡನೆ
       ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ `ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ? 2017' ಮಂಗಳವಾರ (ಜನವರಿ 2) ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
  ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಹೆಚ್ಚಿರುವ ಮೇಲ್ಮನೆಯಲ್ಲಿ ಮಸೂದೆಯ ಬಗ್ಗೆ ಯಾವ ರೀತಿಯ ಚಚರ್ೆ ನಡೆಯಲಿದೆ ಮತ್ತು ಅದು ಅಂಗೀಕಾರವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
  ಲೋಕಸಭೆಯಲ್ಲಿ ಗುರುವಾರ ಅಂಗೀಕೃತವಾಗಿರುವ ಈ ಮಸೂದೆಯನ್ನು ರಾಜ್ಯಸಭೆಯ ಮಂಗಳವಾರದ ಕಾರ್ಯಕಲಾಪದ ಪಟ್ಟಿಯಲ್ಲಿ ಎರಡನೇ ಚಚರ್ಾ ವಿಷಯವಾಗಿ ನಮೂದಿಸಲಾಗಿದೆ.
  ಪ್ರಸ್ತಾವಿತ ಮಸೂದೆಯಲ್ಲಿ ಕೆಲವು ಅಸಂಗತ ಅಂಶಗಳಿವೆ ಎಂಬ ಭಾವನೆ ಕಾಂಗ್ರೆಸ್ನ ಕೆಲವು ಮೇಲ್ಮನೆ ಸದಸ್ಯರಲ್ಲಿದೆ. ಹಾಗಾಗಿ, ಮಸೂದೆಯನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಲು ಪರಿಶೀಲನಾ ಸಮಿತಿಗೆ ಕಳುಹಿಸಲು ಅವರು ಯತ್ನಿಸುತ್ತಿದ್ದಾರೆ.
  ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ಮಸೂದೆಯನ್ನು ಬೆಂಬಲಿಸಿದ್ದರೂ ಅದರಲ್ಲಿನ ಕೆಲವು ನಿಯಮಗಳ ಬಗ್ಗೆ ಆಕ್ಷೇಪ ಎತ್ತಿದ್ದರು. ಆದರೆ, ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸುವುದಕ್ಕಷ್ಟೇ ವಿರೋಧ ಸೀಮಿತವಾಗಿತ್ತು.
  ಈ ವಿಚಾರದ ಬಗ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ನ ಕಾರ್ಯತಂತ್ರ ಬೇರೆ ಇರಲಿದೆಯೇ ಎಂಬುದನ್ನು ನೋಡಬೇಕು, ಆದರೆ ಅಂತಹ ಸಾಧ್ಯತೆ ಕ್ಷೀಣ ಎಂದು ಮೂಲಗಳು ತಿಳಿಸಿವೆ.
   ವಿಶ್ವಾಸ: ಮೇಲ್ಮನೆಯಲ್ಲೂ ಈ ಮಸೂದೆ ಅಂಗೀಕಾರಗೊಳ್ಳುವ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳ ಕೆಲ ಸದಸ್ಯರು ಸಭಾತ್ಯಾಗ ಮಾಡಿ ಮಸೂದೆ ಅಂಗೀಕಾರಕ್ಕೆ ನೆರವಾಗಬಹುದು ಎಂಬುದು ಅವರ ಲೆಕ್ಕಾಚಾರ.
     ಮೇಲ್ಮನೆ ಸ್ಥಾನಬಲ ಲೆಕ್ಕಾಚಾರ:
  245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 57 ಸದಸ್ಯರನ್ನು ಹೊಂದಿವೆ. ಏಳು ಸ್ಥಾನಗಳು ಖಾಲಿ ಇವೆ.ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಎಐಎಡಿಎಂಕೆ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಬಿಜೆಡಿಗಳು ಒಟ್ಟಾಗಿ 43 ಸಂಸದರನ್ನು ಹೊಂದಿವೆ. ಒಂದು ವೇಳೆ ಸಿಪಿಎಂ, ಸಿಪಿಐ, ಬಿಎಸ್ಪಿ ಮತ್ತು ಮುಸ್ಲಿಂ ಲೀಗ್ಗಳು ಈ ಪಕ್ಷಗಳೊಂದಿಗೆ ಕೈ ಜೋಡಿಸಿದರೆ ಕಾಂಗ್ರೆಸ್ಯೇತರ ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ 60ಕ್ಕೆ ಏರಲಿದೆ. ಇಷ್ಟು ಸದಸ್ಯರೆಲ್ಲ ಒಟ್ಟಾದರೆ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಕಳುಹಿಸಲು ಸಾಧ್ಯವಾಗಲಿದೆ.
  ರಾಜ್ಯಸಭೆಯಲ್ಲಿ 12 ಸದಸ್ಯರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ವಿಚಾರದಲ್ಲಿ ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಲೋಕಸಭೆಯಲ್ಲಿ ಅದರ ಸಂಸದರು ಮಸೂದೆಯ ಚಚರ್ೆಯಲ್ಲೇ ಭಾಗವಹಿಸಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries