HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ 2018ರಿಂದ ವ್ಯಾಟ್ ತೆರಿಗೆ ಜಾರಿ!
      ಸೌದಿ ಅರೇಬಿಯಾ ಹಾಗೂ ಯುಎಇನಲ್ಲಿ ಮುಂದಿನ ವರ್ಷದಿಂದ ವ್ಯಾಟ್
   ದುಬೈ:  ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತೆರಿಗೆ ಮುಕ್ತ ಆಥರ್ಿಕತೆಯಿಂದ ಜಾಗತಿಕವಾಗಿ ನಾನಾ ದೇಶಗಳ ನೌಕರರನ್ನು ತನ್ನತ್ತ ಆಕಷರ್ಿಸಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಜಾಗತಿಕ ತೈಲ ಬೆಲೆ ಕುಸಿತದ ಕಾರಣ ಅರಬ್ ರಾಷ್ಟ್ರಗಳ ಆಥರ್ಿಕತೆ ಸಂಕಷ್ಟದಲ್ಲಿ ಸಿಲುಕಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ತನ್ನ ಆದಾಯ ಹೆಚ್ಚಳಕ್ಕಾಗಿ ಬಹುತೇಕ ಸರಕು ಹಾಗೂ ಸೇವೆಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಲು ಮುಂದಾಗಿದೆ. ಮುಂದಿನ ವರ್ಷದಿಂದಲೇ ರಾಷ್ಟ್ರವು ಮೌಲ್ಯವಧರ್ಿತ ತೆರಿಗೆ ಪದ್ದತಿ  (ವ್ಯಾಟ್) ಅಳವಡಿಸಿಕೊಳ್ಳಲು ಯೋಜನೆ ರೂಪಿಸಿದೆ.
   ಈ ಪ್ರಕಾರವಾಗಿ ಆಹಾರ ಪದಾರ್ಥಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಸೋಲಿನ್ ಮುಂತಾದ ಸರಕುಗಳು ಹಾಗೆಯೇ ದೂರವಾಣಿ, ನೀರು ಮತ್ತು ವಿದ್ಯುತ್ ಸಂಪರ್ಕ ಸೇವೆ ಮತ್ತು ಐಶಾರಾಮಿ ಹೋಟೆಲ್ ಗಳಲ್ಲಿ ಕೋಣೆಗಳನ್ನು ಕಾಯ್ದಿರಿಸಿರುವುದು ಸೇರಿ ಹತ್ತು ಹಲುವು ಸೇವೆಗಳಿಗೆ ಮೌಲ್ಯವಧರ್ಿತ ತೆರಿಗೆ ಅನ್ವಯವಾಗಲಿದೆ.
   "ಇದಾಗಲೇ ದುಬೈನಲ್ಲಿ ಎಲ್ಲಾ ವಸ್ತುಗಳೂ ದುಬಾರಿಯಾಗಿರುವುದರಿಂದ ಇನ್ನು ಅದರ ಮೇಲೆ ಶೇ 5 ರಷ್ಟು ತೆರಿಗೆ ವಿಧಿಸುತ್ತಿರುವುದು ನಿಜಕ್ಕೂ ಭಯಹುಟ್ಟಿಸುವ ಕ್ರಮ. " ದುಬೈನಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಪದವೀಧರರಾದ ಎಲ್ಡಾ ನಾಗೊಂಬೆ ಹೇಳಿದ್ದಾರೆ. ಬಾಡಿಗೆ, ರಿಯಲ್ ಎಸ್ಟೇಟ್ ಮಾರಾಟ ಹಾಗೂ ಖರೀದಿ, ನಿದರ್ಿಷ್ಟ ಔಷಧಗಳು, ವಿಮಾನ ಟಿಕೆಟ್ ಗಳು ಮತ್ತು ಶಾಲಾ ಕಾಲೇಜು ವಿದ್ಯಾಭ್ಯಾಸ ಸೇರಿ ಹಲವು ಸೇವೆಗಳು ತೆರಿಗೆಯಿಂದಾಗಿ ದುಬಾರಿಯಾಗಲಿದೆ. ಇನ್ನು ಯುಎಇ ನಲ್ಲಿ ಉನ್ನತ ಶಿಕ್ಷಣಕ್ಕೆ ಇದಾಗಲೇ ತೆರಿಗೆ ವಿಧಿಸಲಾಗಿತ್ತು
   ಏತನ್ಮಧ್ಯೆ, ಸೌದಿ ಅರೇಬಿಯಾ ಇತ್ತೀಚೆಗೆ ತನ್ನ ಇತಿಹಾಸದಲ್ಲೇ ಬೃಹತ್ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದು . ಸರಕಾರವು ಮುಂದಿನ ಹಣಕಾಸು ವರ್ಷದಲ್ಲಿ  978 ಬಿಲಿಯನ್ ರಿಯಾಲ್ಲ್ ಗಳನ್ನು (261 ಶತಕೋಟಿ ಅಮೆರಿಕನ್ ಡಾಲರ್) ವೆಚ್ಚ ಮಾಡುವ ಯೋಜನೆಯನ್ನು ಹೊಂದಿದೆ. ಸಕರ್ಾರವು ವ್ಯಾಟ್ ಪರಿಚಯಿಸುವ ಮುಖೇನ ಆದಾಯದಲ್ಲಿ ಹೆಚ್ಚಳ ಮತ್ತು ಸಬ್ಸಿಡಿಗಳನ್ನು ತಗ್ಗಿಸುವ ಮುನ್ಸೂಚನೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries