ಮಿಜರ್ಾ ಗಾಲಿಬ್ 220ನೇ ಜನ್ಮದಿನಕ್ಕೆ ಡೂಡಲ್ ಗೌರವ
ಬೆಂಗಳೂರು: ಗಝಲ್ ಕವಿ ಮಿಜರ್ಾ ಗಾಲಿಬ್ ಅವರ 220ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.
1797ರ ಡಿಸೆಂಬರ್ 27 ರಂದು ಜನಿಸಿದ ಗಾಲಿಬ್ ಉದರ್ು, ಪಷರ್ಿಯನ್, ಅರೇಬಿಕ್ ಭಾಷೆಗಳಲ್ಲಿ ಶಿಕ್ಷಣ ಪಡೆದಿದ್ದರು. ಗಾಲಿಬ್ 11ನೇ ವರ್ಷದಿಂದಲೇ ಕಾವ್ಯ ರಚನೆಯಲ್ಲಿ ತೊಡಗಿದ್ದರೆಂಬ ಉಲ್ಲೇಖಗಳಿವೆ.
ಭಾರತದಲ್ಲಿ ಮೊಘಲರ ಆಳ್ವಿಕೆ ಕೊನೆಗೊಂಡು ಬ್ರಿಟಿಷರ ಆಡಳಿತ ಜಾರಿಗೆ ಬರುತ್ತಿದ್ದ ಕಾಲದಲ್ಲಿ ಗಾಲಿಬ್ ಕಾವ್ಯ ರಚನೆಯಲ್ಲಿ ತೊಡಗಿದ್ದರು.ಗಾಲಿಬ್ 1869ರ ಫೆಬ್ರುವರಿ 15ರಂದು ದೆಹಲಿಯಲ್ಲಿ ನಿಧನರಾದರು. ಗಾಲಿಬ್ ಗಝಲ್ಗಳು ಹಲವು ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯವಾಗಿವೆ.
ಭಾರತೀಯ ಕಾವ್ಯಲೋಕದ ಧ್ರುವತಾರೆಗಳಲ್ಲಿ ಮಿಜರ್ಾ ಗಾಲಿಬ್ ಒಬ್ಬರು. ಕಾವ್ಯವನ್ನೇ ಬದುಕಿನ ದ್ರವ್ಯವನ್ನಾಗಿಸಿಕೊಂಡ ಗಾಲಿಬ್, ಬದುಕಿನ ಯಾತನೆಯನ್ನು ಉಲ್ಲಾಸದ ಹಾಡು ಗಳನ್ನಾಗಿ ಹಾಡಿದ ಕವಿ. ಡಿ. 27 ಅವರ 219ನೇ ಜಯಂತಿ.
ನಿನ್ನ ಚೆಲುವಿನ ಮಿಂಚಿನ ಹೊಳಪಿನಿಂದಾಗಿ
ನನ್ನ ದೃಷ್ಟಿಸುಟ್ಟು ಕೇವಲ ರೆಪ್ಪೆಯ
ಕೂದಲು ಮಾತ್ರ ಉಳಿಯಿತು.
ಎಲ್ಲ ಸುಟ್ಟು ಬೂದಿ ಹೊಳೆಯುವ ಹಾಗೆ!
ನಿನ್ನ ನೋಡಲೆಂದು ನನ್ನ ಕಣ್ಣೀರು ಸ್ವಪ್ರತಿಷ್ಠೆಯ
ಚಿನ್ನವನೂ ಸಂಪೂರ್ಣ ತೊಳೆದು ಹಾಕಿದೆ!
ಈಗ ಮಂಜು ಹನಿಯಂತಿರುವ
ಪವಿತ್ರ ದೃಷ್ಟಿಯೊಂದು ಮಾತ್ರ ಉಳಿದಿದೆ!
ಆಸೆಗಳ ತೋಟಿ ಬೇಸಿಗೆಯ ಬೇಟೆಯಾಗಿದೆ
ಮತ್ತೆ ವಸಂತ ಬರಬಹುದು!
ಆದರೆ ನನ್ನ ನಿರಾಶೆಗಳ ನಿಟ್ಟುಸಿರುನೊಲು
ಉಳಿದಿಲ್ಲ ಪ್ರೇಯಸಿ ನೋಟದಚ್ಚರಿ
ಇಲ್ಲ ಸುರೆಯ ಸಹವಾಸ
ಕೇಳು ಗಾಲಿಬ್ ನನ್ನ `ಮಹಫಿಲ'ದಿ
ಉಳಿದಿಹುದು ಬರಿ ಭಾಗ್ಯಚಕ್ರ
ಇದು ಉದರ್ುಕವಿ ಮಿಜರ್ಾ ಗಾಲಿಬ್ರವರ ನಿರಾಶೆ, ನೋವು, ಮನಸ್ಸಿನ ಹೊಯ್ದಾಟ, ಪ್ರೇಮದ ಒಳನೋಟವನ್ನು ಒಳಗೊಂಡ ಒಂದು ಗಜಲ್. ಬದುಕಿನುದ್ದಕ್ಕೂ ಪ್ರೇಮ, ವಿರಹ ವಿಪ್ರಲಂಭ, ಒಂಟಿತನ, ವಿಷಣ್ಣತೆಗಳನ್ನು ಕುರಿತೇ ನೂರಾರು ಗಜಲ್ ? ದ್ವಿಪದಿಗಳನ್ನು ಬರೆದು ಉದರ್ು ಕಾವ್ಯಲೋಕದಲ್ಲಿ ಅಜರಾಮರವಾಗುಳಿದ ಗಾಲಿಬ್ರು ಹುಟ್ಟಿದ್ದು 27-12-1797ರಂದು.
ಪ್ರೀತಿಯ ದ್ಯೋತಕವಾಗಿ ನಿಮರ್ಾಣವಾದ ತಾಜಮಹಲ್ನ ಆಗ್ರಾ ಗಾಲಿಬ್ರ ಊರು. ತಂದೆ ಮಿಜರ್ಾ ಅಬ್ದುಲ್ಲಾಬೇಗ್ ಲಕಸಾದ ಅಸಫದ್ದೌಲನ ಸೈನ್ಯದಲ್ಲಿ, ಹೈದರಾಬಾದ್ ನಿಜಾಮರಲ್ಲಿ ಕೆಲವು ವರ್ಷಗಳ ಕಾಲ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಕೊನೆಗೆ ಆಳ್ವಾರದ ರಾಜಾ ಬುಖ್ತಾವರಸಿಂಗರವರಲ್ಲಿ ಕೆಲಸ ಮಾಡುತ್ತಿದ್ದಾಗ ಯುದ್ಧದಲ್ಲಿ ಕೊಲೆಗೀಡಾದರು. ತನ್ನ ತಂದೆ ಹೀಗೆ ದುರಂತ ಮರಣಕ್ಕೀಡಾದಾಗ ಗಾಲಿಬ್ನಿಗಿನ್ನೂ ಐದು ವರ್ಷ.
ಗಾಲಿಬ್ ಪೂತರ್ಿ ಹೆಸರು ಮಿಜರ್ಾ ಅಸಾದುಲ್ಲಾಹಖಾನ್ ಗಾಲಿಬ್. ಈತನ ಕಾವ್ಯನಾಮ ಅಸದ್. ಗಾಲಿಬ್ ತುಂಬಾ ಸುಂದರನಾದ ಹುಡುಗನಾಗಿದ್ದ. ಜೊತೆಗೆ ಚುರುಕು ತುಂಟತನದವನಾಗಿದ್ದ. ಹೀಗಾಗಿ ಬಂಧುಗಳು ಅವನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಹದಿಮೂರನೆಯ ವಯಸ್ಸಿಗೆ ಗಾಲಿಬ್ ಕಾಲಿಡುತ್ತಿದ್ದಂತೆಯೇ ಉಮಾರಾವ್ ಬೇಗಂಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಗಾಲಿಬ್ರ ದಾಂಪತ್ಯ ಜೀವನ ಸುಗಮವಾಗಿಯೇನೋ ಸಾಗಿತು. ಅದರೆ ಬರುಬರುತ್ತಾ ಗಾಲಿಬ್ ಕುಡಿತದ ದಾಸನಾದ, ವೇಶ್ಯೆಯರೊಂದಿಗೆ ಸಹವಾಸ ಮಾಡಿದ. ಮಾಂಸವಿಲ್ಲದೆ ಊಟ ಮಾಡುತ್ತಿರಲಿಲ್ಲ. ದುಂದುವೆಚ್ಚವನ್ನು ಮಾಡುತ್ತಿದ್ದ. ಗೆಳೆಯರಿಗಾಗಿ ಹಣವನ್ನು ನೀರಿನಂತೆ ಪೋಲು ಮಾಡುತ್ತಿದ್ದ.
ಕಾವ್ಯದ ದೃಷ್ಟಿಯಿಂದ ಗಾಲಿಬ್ ಜನಮಾನಸದಲ್ಲಿ ಅತ್ಯುನ್ನತ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ. ಆದರೆ ಆತನ ಇಡೀ ಬದುಕು ಅಶಿಸ್ತಿನಿಂದ, ದ್ವಂದ್ವದಿಂದ ಕೂಡಿದುದಾಗಿತ್ತು. ಆತನ ಸ್ವಭಾವಗಳನ್ನು ತಿದ್ದಲು ಸ್ವತಃ ಬೇಗಂರಿಗೂ ಆಗಲಿಲ್ಲ.
ಗಾಲಿಬ್ರವರ ಹೆಂಡತಿಯ ಮನೋಭಾವ ಗಾಲಿಬ್ರವರ ಮನೋಭಾವಕ್ಕೆ ತದ್ವಿರುದ್ಧವಾಗಿತ್ತು. ಶಿಸ್ತು ಮತ್ತು ಅಚ್ಚುಕಟ್ಟಿನ ಜೀವನವನ್ನು ಅವರು ನಡೆಸುತ್ತಿದ್ದರು. ಉಮಾರಾವ್ ಏಳು ಮಕ್ಕಳಿಗೆ ಜನ್ಮವಿತ್ತಳು. ದುದರ್ೈವವೆಂದರೆ ಯಾವ ಮಗುವೂ ಬದುಕುಳಿಯಲಿಲ್ಲ. ಮಕ್ಕಳ ಸಾವು, ಗಾಲಿಬ್ರ ವಿಚಿತ್ರ ನಡವಳಿಕೆ ಅವರನ್ನು ತಲ್ಲಣಕ್ಕೀಡುಮಾಡಿದ್ದವು. ಮನಸ್ಸಿನ ಈ ನೋವು-ದುಗುಡಗಳನ್ನು ಅವರು ಯಾರೊಂದಿಗೂ ಹಂಚಿಕೊಳ್ಳದೆ ತುಟಿ ಕಚ್ಚಿ ನುಂಗುತ್ತಿದ್ದರು. ಹೀಗಾಗಿ ಬೇಗಂ ಅತೀ ಹೆಚ್ಚು ಕಾಲವನ್ನು ಉಪವಾಸ, ವ್ರತನೇಮ, ಪ್ರಾರ್ಥನೆಗಳಲ್ಲಿಯೇ ಕಳೆಯುತ್ತಿದ್ದರು.
ಗಾಲಿಬ್ನ ಬದುಕು ದಿನೇ ದಿನೇ ಆಥರ್ಿಕವಾಗಿ ತೊಂದರೆಗೀಡಾಯಿತು. ಅವನು ಝಿಕರ್ಾದ ನವಾಬಿ ಕುಟುಂಬಕ್ಕೆ ಸೇರಿದವನಾಗಿದ್ದರಿಂದ ಹದಿನೈದು ನೂರು ರೂಪಾಯಿ ವಾಷರ್ಿಕ ಗೌರವಧನ ಸಿಗುತ್ತಿತ್ತು. ಕ್ರಮೇಣ ಅದು ಕೂಡ ನಿಂತು ಹೋಯಿತು. ತನ್ನ ಆಥರ್ಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕೆಂದು ಗಾಲಿಬ್ ಎಷ್ಟು ಹೆಣಗಾಡಿದರೂ ಫಲಕಾರಿಯಾಗಲಿಲ್ಲ. 1825ರಿಂದ ಫಿರೋಜಪುರ ಝಿಕರ್ಾ, ಲೋಹಾರು, ಆಸ್ತಿಯಿಂದ ತನಗೆ ಪಾಲು ಬರಬೇಕೆಂದು ಬೇಡಿಕೆ ಮುಂದಿಟ್ಟ. ದೆಹಲಿಯ ಕೋಟರ್್ನಲ್ಲಿ ದಾವೆ ಹೂಡಿದ. ಯಾವುದೂ ಗಾಲಿಬ್ಗೆ ಸಾಥಿ ನೀಡಲಿಲ್ಲ.
ಗಾಲಿಬ್ ಕಾವ್ಯ ರಚನೆಯೊಂದಿಗೆ ಆಕರ್ಷಕ ಮಾತುಗಾರ ಕೂಡ ಆಗಿದ್ದ. ಗೆಳೆಯರೊಂದಿಗೆ ಕಾವ್ಯದ ಸೂಕ್ಷ್ಮತೆ ಮತ್ತು ಅದರ ಒಳನೋಟಗಳ ಬಗೆಗೆ ಆಳವಾಗಿ ಚಚರ್ಿಸುತ್ತಿದ್ದ. ಯುವ ಬರಹಗಾರರ ಬರಹಗಳನ್ನು ತಿದ್ದುವ, ಮಾರ್ಗದರ್ಶನ ಮಾಡುವ ಮನಸ್ಸು ಗಾಲಿಬ್ರದಾಗಿತ್ತು. ಅನೇಕ ಉದರ್ು ಯುವ ಕವಿಗಳ ಸಂಕಲನಗಳಿಗೆ ಪ್ರೀತಿಯಿಂದ ಮುನ್ನುಡಿ ಬರೆದು ಬೆನ್ನು ತಟ್ಟುತ್ತಿದ್ದ. ಮುಶಾಹಿರಾಗಳಲ್ಲೂ ಭಾಗವಹಿಸುತ್ತಿದ್ದ. ಬೇರೆಯವರು ಗಜಲ್ಗಳನ್ನು ವಾಚಿಸುವಾಗ ಸಹೃದಯರು `ವಾಹ್ ವಾಹ್' ಎನ್ನುತ್ತಿದ್ದರೆ ಈತ ಕಲ್ಲುಗೊಂಬೆಯಂತೆ ಕೂಡುತ್ತಿದ್ದ. ತನಗೆ ಇಷ್ಟವಾದ ಗಜಲ್ ಓದಿದ ಕವಿಯನ್ನು ಎತ್ತಿಕೊಂಡು ಕುಣಿಯುತ್ತಿದ್ದ. ಗಾಲಿಬ್ರ ಈ ವಿಲಕ್ಷಣ ಸ್ವಭಾವ ಬಹುಪಾಲು ಜನರಿಗೆ ಅರ್ಥವಾಗುತ್ತಿರಲಿಲ್ಲ.
ದೆಹಲಿಯ ಕಾಲೇಜೊಂದರ ಪ್ರಾಧ್ಯಾಪಕ ಹುದ್ದೆಗೆ ಗಾಲಿಬ್ ಅಜರ್ಿ ಸಲ್ಲಿಸಿದ್ದ. ಸಂದರ್ಶನದ ದಿನ ಪಲ್ಲಕಿಯಲ್ಲಿ ಕೂತು ಹೋದ ಗಾಲಿಬ್ ಪಲ್ಲಕ್ಕಿಯನ್ನು ಇಳಿದು ಒಳಗೆ ಹೋಗಲಿಲ್ಲ. ಒಳಗೆ ಬರಲು ಹೇಳಿದರೂ ಹಾಗೆಯೇ ಕೂತ. `ನನಗೆ ಯಾಕೆ ಕರೆ ಬರಲಿಲ್ಲ' ಎಂದು ಕೇಳಿದ ಗಾಲಿಬ್ಗೆ ಬಂದ ಉತ್ತರ? `ನೀವು ನೌಕರಿಗಾಗಿ ಅಭ್ಯಥರ್ಿಯಾಗಿ ಬಂದಿರುವಿರಿ. ದಬರ್ಾರ್ ರೀತಿ ನೀತಿಗಳಂತೆ ನೀವು ಅತಿಥಿಗಳಾಗಿ ಬಂದಿಲ್ಲ' ಎಂದಾಗ ವಾಪಾಸ್ಸಾದ. ಕವಿಗೆ ಇಲ್ಲಿ ತನ್ನ ಬದುಕಿನ ಭದ್ರತೆಗಿಂತ ಸ್ವಾಭಿಮಾನವೇ ಹೆಚ್ಚು ಪ್ರತಿಷ್ಠೆಯಾಗಿ ಕಾಡುತ್ತದೆ.
ಸದಾ ಕುಡಿತ, ಜೂಜುಗಳಿಗೆ ತನ್ನ ಬದುಕನ್ನು ಒಡ್ಡಿಕೊಂಡಿದ್ದ ಗಾಲಿಬ್ ಸಿಕ್ಕಾಪಟ್ಟೆ ಸಾಲ ಮಾಡಿದ್ದ. ಸಾಲಗಾರರ ಕಾಟ, ರಾಜ ಮಹಾರಾಜರ ನವಾಬಾರ ಉದಾಸೀನತೆ ಅವನ ಸ್ಥಿತಿಯನ್ನು ಚಿಂತಾಜನಕವಾಗುವಂತೆ ಮಾಡಿದ್ದವು.
ಕವಿಗಳನ್ನು ಯಾರೂ ಬಂಧಿಸಬಾರದು ಎಂಬ ನಿಯಮದಿಂದಾಗಿ ಗಾಲಿಬ್ ಸಾಲಗಾರರಿಂದ ಬಚಾವಾಗುಳಿದ. ಇಂತಹ ಕಷ್ಟದ ಸನ್ನಿವೇಶದಲ್ಲೂ ಭಿಕ್ಷುಕರಿಗೆ, ಅಸಹಾಯಕರಿಗೆ ಗಾಲಿಬ್ ಸಹಾಯದ ಹಸ್ತ ನೀಡುತ್ತಿದ್ದ. ಹಣದ ತೀವ್ರ ಕೊರತೆಯಿಂದಾಗಿ ಕಂಗಾಲಾಗಿ ಬಟ್ಟೆ, ಕಪಾಟು ಮಾರುವ ಪ್ರಸಂಗಗಳು ಬಂದಾಗ ಸ್ನೇಹಿತನಿಗೆ ಹೀಗೆ ಪತ್ರ ಬರೆದಿದ್ದ? `ಉಳಿದವರು ರೊಟ್ಟಿ ತಿಂದು ಜೀವಿಸಿದರೆ ನಾನು ನನ್ನ ಬಟ್ಟೆಗಳನ್ನು ತಿಂದು ಜೀವಿಸುತ್ತೇನೆ'.
ನಾನು ಮನುಷ್ಯ ಸ್ವಭಾವದವನಾಗಿದ್ದೇನೆ
ಮನುಷ್ಯನಾಗಿ ಹುಟ್ಟಿದ್ದೇನೆ
ನಾನೆಷ್ಟು ಸಾಧ್ಯವೋ ಅಷ್ಟು
ಪಾಪ ಮಾಡಬಲ್ಲೆ
ಎನ್ನುವ ಅಭಿಮಾನ ನನಗಿದೆ
ದ್ರಾಕ್ಷಾರಸ ಪೂಜೆಯನ್ನು
ನಾನೆಂದೂ ನಿಲ್ಲಿಸುವುದಿಲ್ಲ
ಭೋರಿಡುವ ಗಾಳಿಯ ಸುಳಿಯಲ್ಲಿ
ನಾನು ಸದಾ ಜಿಗಿಯುತ್ತಿರುತ್ತೇನೆ.
ಗಾಲಿಬ್ರ ಬದುಕು ಅನೇಕ ಸಂಕಷ್ಟಗಳನ್ನು ಹೊದ್ದುಕೊಂಡಿದ್ದರೂ ಅವರ ಕಾವ್ಯ ಹಾಸ್ಯಪ್ರಜ್ಞೆಯನ್ನು ಬಿಟ್ಟುಕೊಟ್ಟಿರಲಿಲ್ಲ. ``ಹೇಗಿದ್ದೀಯಾ ಎಂದು ಗಾಲಿಬ್ನನ್ನು / ಯಾಕೆ ಕೇಳುತ್ತೀರಿ? / ಒಂದೆರಡು ದಿನಗಳಲ್ಲಿ / ನೆರೆ ಹೊರೆಯವರನ್ನು ಕೇಳಿ / ಅವರು ಹೇಳುತ್ತಾರೆ'' ಎಂದು ಬರೆಯಬಲ್ಲ ಜೀವನೋತ್ಸಾಹ ಅವರದಾಗಿತ್ತು.
ಪ್ರೇಮ, ವಿರಹ, ಮಧುರ ಭಾವನೆಗಳನ್ನು ಕಾವ್ಯದಲ್ಲಿ ಅಭಿವ್ಯಕ್ತಿಸಿದಂತೆ ದೀನದಲಿತರು, ಶೋಷಣೆ, ನೈತಿಕ ಅಧಃಪತನ, ಸಾಮಾಜಿಕ ತವಕ, ತಲ್ಲಣಗಳ ಬಗೆಗೆ ಗಾಲಿಬ್ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ. ಗಾಲಿಬ್ ಪ್ರಾರಂಭದಲ್ಲಿ ಉದರ್ುವಿನಲ್ಲಿ ಬರೆದರೂ ಆನಂತರ ಪಷರ್ಿಯನ್ ಭಾಷೆಯಲ್ಲಿ ಬರೆದದ್ದೇ ಹೆಚ್ಚು. ಗೆಳೆಯರೊಂದಿಗೆ ಆಪ್ತವಾದ ಪತ್ರವ್ಯವಹಾರ ಇಟ್ಟುಕೊಂಡಿದ್ದ ಆತನ ಪತ್ರ ಸಾಹಿತ್ಯ ಆಧುನಿಕ ಉದರ್ು ಗದ್ಯಕ್ಕೆ ಒಂದು ಶಕ್ತಿಯನ್ನು ಒದಗಿಸುವಂತಿದೆ.
ದೆಹಲಿ ಗಾಲಿಬ್ರ ಅತ್ಯಂತ ಪ್ರೀತಿಯ ನಗರವಾಗಿತ್ತು. ಒಂದು ರೀತಿಯಲ್ಲಿ ಅದು ಆತ್ಮವೆ ಎಂದರೂ ಅತಿಶಯೋಕ್ತಿ ಏನಲ್ಲ. ದೆಹಲಿಯ ಮೊಘಲ್ ಅರಮನೆಯ ಆಸ್ಥಾನ ಕವಿಯಾಗಿ ಸೇರಿಕೊಂಡ ಗಾಲಿಬ್ ಕುಡಿತ, ಜೂಜಿನ ಕಾರಣಕ್ಕಾಗಿ ಜೈಲಿಗೂ ಹೋಗಿ ಬರುತ್ತಾರೆ. `ಕಸೀದಾ'ಗಳನ್ನು (ಪ್ರಶಂಸಾ) ಬರೆಯುವುದರ ಮೂಲಕ ಜಫರ್ನ ಆಸ್ಥಾನವನ್ನು ಸೇರಿಕೊಂಡ ಗಾಲಿಬ್ ಅಲ್ಲೂ ಬಹುಕಾಲ ನೆಲೆ ನಿಲ್ಲುವುದಿಲ್ಲ. ಬ್ರಿಟಿಷರ ದಾಳಿಗೆ ಒಳಗಾದ ದೆಹಲಿಯ ದಂಗೆಯ ದಿನಗಳು ಗಾಲಿಬ್ನ ಮನವನ್ನು ತುಂಬ ಕಲಕುತ್ತವೆ. ಚಿಂತನೆಗೀಡು ಮಾಡುತ್ತವೆ.
ಗಜಲ್, ದ್ವಿಪದಿಗಳನ್ನು ಬರೆಯುವುದರ ಮೂಲಕ ಭಾರತೀಯ ಸಾಹಿತ್ಯದ ಅತ್ಯುತ್ತಮ ಕವಿಗಳಲ್ಲೊಬ್ಬರಾಗಿ ಗುತರ್ಿಸಿಕೊಂಡ ಗಾಲಿಬ್ ಮರಳಿ ಬಾರದ ನಾಡಿಗೆ ಹೋದದ್ದು 1869ರ ಡಿಸೆಂಬರ್ 18ರಂದು. ಸಾಯುವ ಮುನ್ನ ಅವರು ಗಜಲ್ ಒಂದನ್ನು ತಿದ್ದುತ್ತಿದ್ದಂತೆ. ಆ ಗಜಲ್ ಹೀಗಿದೆ:
ಆ ಮತ್ತ ರಾತ್ರಿಗಳ ಉನ್ಮಾದಗಳೆಲ್ಲಿ ಹೋದವು.
ಎದ್ದು ಬಿಡು ಈಗ.
ಬೆಳಗು ಹರಿಯುವ ಹೊತ್ತು
ಇನ್ನು ಕನಸು ಕಾಣುವುದಿಲ್ಲ.
(ಇಲ್ಲಿನ ಗಜಲ್ಗಳನ್ನು ಡಾ. ಪಂಚಾಕ್ಷರಿ ಹಿರೇಮಠರ `ಗಾಲಿಬ್' ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ...ಲೇಖನದ ಮೂಲ ಪ್ರಜಾವಾಣಿ..2016ರ ಸಂಚಿಕೆ)