HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕೊನೆಗೂ ಸುಖ ಪ್ರಸವ
         280 ದಿನಗಳ ಸುಧೀರ್ಘ ಅವಧಿಯ ಕ್ರಿಯಾ ಸಮಿತಿ ಹೋರಾಟಕ್ಕೆ ಜಯ
  ಕುಂಬಳೆ:  ಕುಂಬಳೆಯಲ್ಲಿ ಕಾಯರ್ಾಚರಿಸುತ್ತಿದ್ದ ಕೇರಳ ಸರಕಾರದ ಮದ್ಯ ಮಾರಾಟ ಕೇಂದ್ರವನ್ನು ನಾರಾಯಣಮಂಗಲದ ಸಾರ್ವಜನಿಕ ಪರಿಸರಕ್ಕೆ ಸ್ಥಳಾಂತರಿಸುವ ಯತ್ನದ ವಿರುದ್ದ ಕ್ರಿಯಾ ಸಮಿತಿ ರಚನೆಗೊಂಡು 280 ದಿನಗಳ ಕಾಲ ನಡೆಸಿದ ಆಹೋರಾತ್ರಿ ಹೋರಾಟ ಕೊನೆಗೂ ಜಯಗಳಿಸಿದ್ದು, ಭಾನುವಾರ ಕ್ರಿಯಾ ಸಮಿತಿ ತನ್ನ ಹೋರಾಟವನ್ನು ಹಿಂತೆಗೆದುಕೊಂಡಿತು.
   ಈ ಬಗ್ಗೆ ಭಾನುವಾರ ಸಂಜೆ ಕುಂಬಳೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕ್ರಿಯಾ ಸಮಿತಿ ಪದಾಧಿಕಾರಿಗಳು ತಮ್ಮ ಸುಧೀರ್ಘ ಅವಧಿಯ ಬೇಡಿಕೆಯಂತೆ ಮದ್ಯದಂಗಡಿ ಆರಂಭಿಸುವ ಅಧಿಕೃತರ ಯತ್ನ ವಿಫಲಗೊಂಡಿದ್ದು, ಅದು ಬೇರೆಡೆ ಸ್ಥಳಾಂತರಗೊಂಡಿರುವುದು ಕ್ರಿಯಾ ಸಮಿತಿಯ ಹೋರಾಟಕ್ಕೆ ಲಭಿಸಿದ ಅಂತಿಮ ಜಯ ಎಂದು ತಿಳಿಸಿದರು. ಸ್ಥಳೀಯ ನಾಗರಿಕರು,ಶಾಸಕರ ಸಹಿತ  ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಕೊಂಡೆವೂರು, ಎಡನೀರು ಶ್ರೀಗಳು, ಕುಂಬಳೆ ಚಚರ್್ನ ಧರ್ಮಗುರುಗಳು   ಕ್ರಿಯಾ ಸಮಿತಿ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರಿಂದ ಇಷ್ಟು ಸುಧೀರ್ಘ ಅವಧಿ ನಿರಂತರ ಹೋರಾಟ ನಡೆಸಲು ಸಹಕಾರಿಯಾಯಿತೆಂದು ಸುದ್ದಿಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದರು.
  ಸುದ್ದಿಗೋಷ್ಠಿಯಲ್ಲಿ ಕ್ರಿಯಾ ಸಮಿತಿ ಮುಖಂಡ, ಬ್ಲಾಕ್ ಪಂಚಾಯತು ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ನಾರಾಯಣ ಕುಂಬಳೆ, ಶಶಿಧರ ಪಾಟಾಳಿ, ಜಯಪ್ರಕಾಶ್ ಕುಂಬಳೆ ಉಪಸ್ಥಿತರಿದ್ದು ಮಾತನಾಡಿದರು.
   ಏನಾಗಿತ್ತು:
   ಕುಂಬಳೆಯಲ್ಲಿ ಕಾಯರ್ಾಚರಿಸುತ್ತಿದ್ದ ಕೇರಳ ಸರಕಾರದ ಮದ್ಯ ವಿತರಣಾ ಔಟ್ಲೆಟ್ ಸುಪ್ರೀಂ ಕೋಟರ್್ ಆದೇಶಾನುಸಾರ(ರಾ.ಹೆದ್ದಾರಿಯ ಸನಿಹ ಇದೆ ಎಂಬುದರಿಂದ) ಸ್ಥಳಾಂತರಿಸಬೇಕಾಯಿತು. ಕುಂಬಳೆಯ ಮದ್ಯ ಮರಾಟ ಮಳಿಗೆಯನ್ನು ಅಧಿಕೃತರು ಯಾವುದೇ ಮುನ್ಸೂಚನೆ ನೀಡದೆ ಸನಿಹದ ನಾರಾಯಣಮಂಗಲ ಪರಿಸರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದು, ಇದನ್ನು ವಿರೋಧಿಸಿ ನಾರಾಯಣಮಂಗಲ ಪರಿಸರದ ನಾಗರಿಕರು ಮದ್ಯದಂಗಡಿ ಬೇಡವೆಂದು ಏ. 2ರಿಂದ ಕ್ರಿಯಾ ಸಮಿತಿ ರೂಪೀಕರಿಸಿ ಆಹೋರಾತ್ರಿ ಹೋರಾಟಕ್ಕಿಳಿದರು.
  ಆರಂಭದಲ್ಲಿ ತೀವ್ರ ಆತಂಕಕಾರಿಯಾಗಿ ಮುಂದುವರಿದ ಹೋರಾಟ ಬಳಿಕ ಜನರ ಪೂರ್ಣ ಸಹಭಾಗಿತ್ವದೊಂದಿಗೆ ಯಸಸ್ವಿಯಾಗಿ ಬಿಸಿಲು,ಮಳೆ, ಚಳಿಗಳಿಗೆ ಮೈಯೊಡ್ಡಿ ಮುಂದುವರಿಯಿತು. ಜೊತೆಗೆ ಕ್ರಿಯಾ ಸಮಿತಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಯಾವ ಕಾರಣಕ್ಕೂ ಮದ್ಯದಂಗಡಿ ನಾರಾಯಣಮಂಗಲದಲ್ಲಿ ಆರಂಭಿಸಲು ಬಿಡೆವು ಎಂದು ವಾದಮಂಡಿಸಿ ಹೋರಾಡಿತು. ವಾದ ನ್ಯಾಯಾಲಯದಲ್ಲಿರುವಂತೆಯೇ ಇದೀಗ ಮದ್ಯದಂಗಡಿ ಶನಿವಾರ ಸೀತಾಂಗೋಳಿಯಲ್ಲಿ ಆರಂಭಗೊಂಡಿದ್ದು, ಇದು ಹೋರಾಟಕ್ಕೆ ಲಭಿಸಿದ ಜಯವೆಂದು ತಿಳಿದುಬಂದಿದೆ.
   ಕ್ರಿಸ್ಮಸ್ ರಜೆಯ ಬಳಿಕ ನ್ಯಾಯಾಲಯದ ಅಂತಿಮ ತೀಪರ್ು ಹೊರಬರಲಿದ್ದು, ಸೀತಾಂಗೋಳಿಯಲ್ಲಿ ಶನಿವಾರ ಆರಂಭಗೊಂಡ ನೂತನ ಮದ್ಯ ಮಾರಾಟ ಮಳಿಗೆ ಕುಂಬಳೆಯಲ್ಲಿದ್ದ ಹಳೆಯ ಮದ್ಯ ಮಾರಾಟ ಕೇಂದ್ರದ ದಾಖಲಾತಿ ಸಂಖ್ಯೆ ಹೊಂದಿರುವುದರಿಂದ ನಾರಾಯಣಮಂಗಲದಲ್ಲಿ ಮದ್ಯ ಮಾರಾಟ ಕೇಂದ್ರ ಆರಂಭಿಸಲಿದ್ದ ಆತಂಕ ನಿವಾರಣೆಯಾಯಿತು.
   ಗೌಪ್ಯತೆಯಲ್ಲಿ ಆರಂಭ:
   ಸೀತಾಂಗೋಳಿಯಲ್ಲಿ ಶನಿವಾರ ನೂತನ ಮದ್ಯ ಮಾರಾಟ ಕೇಂದ್ರ ಆರಂಭಗೊಳ್ಳುವಲ್ಲಿಯ ವರೆಗೆ ಅಲ್ಲಿ ಮಾರಾಟ ಕೇಂದ್ರ ಆರಂಭಗೊಳ್ಳುವ ಬಗ್ಗೆ ಯಾರಿಗೂ ಅನುಮಾನವಿರದಂತೆ ನೋಡಿಕೊಂಡಿದ್ದರು. ಸೀತಾಂಗೋಳಿಯ ಜನತೆ ಸಂಶಯಿಸುವಂತೆ ಕಳೆದ ಮೂರು ತಿಂಗಳುಗಳಿಂದ ಕಟ್ಟಡವೊಂದು ತಲೆಯೆತ್ತುತ್ತಿರುವುದು  ಶನಿವಾರ ಬೆಳಿಗ್ಗೆಯಷ್ಟೆ ಅನುಮಾನ ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries