ರಾ. ಹೆದ್ದಾರಿ ಚತುಷ್ಪಥ ಯೋಜನೆ: ಜಿಲ್ಲೆಯಲ್ಲಿ 42 ಆರಾಧನಾಲಯಗಳ ತೆರವು; ಪದಾಧಿಕಾರಿಗಳೊಂದಿಗೆ ಚಚರ್ೆ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಯನ್ನು ಚತುಷ್ಪಥವಾಗಿ ಅಭಿವೃದ್ಧಿಗೊಳಿಸುವ ಯೋಜನೆಯಂತೆ ಜಿಲ್ಲೆಯ 42 ಆರಾಧನಾಲಯಗಳು ಮತ್ತು ಅವುಗಳು ಒಳಗೊಂಡ ಸ್ಥಳಗಳು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಟ್ಟುಕೊಡಬೇಕಾಗಿ ಬರಲಿದೆ.
ಇದರಲ್ಲಿ ಗುಳಿಗನ ಆರಾಧನಾಲಯ, ಸಹಿತ 19 ಹಿಂದೂ ಆರಾಧನಾಲಯಗಳಿದ್ದು, 22 ಮುಸ್ಲಿಂ ಹಾಗೂ ಒಂದು ಕ್ರೈಸ್ತ ಆರಾಧನಾಲಯಗಳು ಒಳಗೊಂಡಿವೆಯೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿ ಅಭಿವೃದ್ಧಿಗಾಗಿ ವಶಪಡಿಸುವ 42 ಆರಾಧನಾಲಯಗಳ ಭೂಮಿ ಮತ್ತು ಅದರಲ್ಲಿ ಒಳಗೊಂಡಿರುವ ಆರಾಧನಾಲಯಗಳನ್ನು ಈಗಾಗಲೇ ಅಳೆದು ಲೆಕ್ಕ ಹಾಕಲಾಗಿದೆ. ಅದಕ್ಕೆ ಹೊಂದಿಕೊಂಡು ಆರಾಧನಾಲಯಗಳಿಗೆ ಸೂಕ್ತ ನಷ್ಟಪರಿಹಾರ ನೀಡಲಾಗುವುದು.
42 ಆರಾಧನಾಲಯಗಳ ಪೈಕಿ ಹತ್ತರಷ್ಟು ಸರಕಾರಿ ಭೂಮಿಯಲ್ಲಿ ನೆಲೆಗೊಂಡಿದೆ. ಸರಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿರುವ ಆರಾಧನಾಲಯಗಳನ್ನು ಅಭಿವೃದ್ಧಿಗಾಗಿ ಕೆಡವಿ ಬಳಿಕ ಅವುಗಳ ಪುನರ್ ನಿಮರ್ಾಣಕ್ಕೆ ಅಗತ್ಯವಿರುವ ವೆಚ್ಚವನ್ನು ಸರಕಾರವೇ ವಹಿಸಲಿದೆಯೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಆರಾಧನಾಲಯಗಳನ್ನು ಬಿಟ್ಟುಕೊಡಬೇಕಾಗಿರುವ ವಿಷಯಗಳ ಬಗ್ಗೆ ಚಚರ್ಿಸಲು ಆಯಾ ಆರಾಧನಾಲಯಗಳ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆ ಇಂದು ನಡೆಯಲಿದೆ. ಇದರಲ್ಲಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳಲ್ಲಿರುವ ಆರಾಧನಾಲಯಗಳ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆ ಬುಧವಾರ ಅಪರಾಹ್ನ 3 ಗಂಟೆಗೆ ನಡೆಯಿತು. ಹೊಸದುರ್ಗ ತಾಲೂಕಿಗೊಳಪಟ್ಟ ಆರಾಧನಾಲಯಗಳ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆ ಇಂದು ನಡೆಯಲಿದೆ. ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ವಿಭಾಗದ ಸ್ಪೆಷಲ್ ಡೆಪ್ಯುಟಿ ಕಲೆಕ್ಟರ್ ಕಚೇರಿಯಲ್ಲಿ ಸಭೆ ನಡೆಯಿತು.
ಮಂಜೇಶ್ವರ ತಾಲೂಕಿನಲ್ಲಿ ಖಾಸಗಿ ಹಿತ್ತಿಲಲ್ಲಿರುವ ಒಂಭತ್ತು ಮತ್ತು ಸರಕಾರಿ ಭೂಮಿಯಲ್ಲಿರುವ ಎರಡು ಸೇರಿದಂತೆ 11 ಆರಾಧನಾಲಯಗಳು, ಕಾಸರಗೋಡು ತಾಲೂಕಿನಲ್ಲಿ ಖಾಸಗಿ ಸ್ಥಳದಲ್ಲಿರುವ ಎಂಟು ಮತ್ತು ಸರಕಾರಿ ಸ್ಥಳದಲ್ಲಿರುವ ಒಂದು ಸೇರಿದಂತೆ 9 ಆರಾಧನಾಲಯಗಳು ಮತ್ತು ಹೊಸದುರ್ಗ ತಾಲೂಕಿನಲ್ಲಿ ಖಾಸಗಿ 12, ಸರಕಾರಿ ಸ್ಥಳದಲ್ಲಿರುವ 9 ಮತ್ತು ಆಂಶಿಕವಾಗಿ ಸರಕಾರಿ ಮತ್ತು ಖಾಸಗಿ ಭೂಮಿಯಲ್ಲಿರುವ ಒಂದು ಸೇರಿದಂತೆ ಒಟ್ಟು 22 ಆರಾಧನಾಲಯಗಳನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಬಿಟ್ಟುಕೊಡಬೇಕಾಗಿ ಬಂದಿದೆ.