HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಶಿಥಿಲಾವಸ್ಥೆಯಲ್ಲಿರುವ ಪೊವ್ವಲ್ ಕೋಟೆ ಅಭಿವೃದ್ಧಿ 
                52.50 ಲಕ್ಷ  ರೂ.ಗಳ ಯೋಜನೆಗೆ ರೂಪು
   ಮುಳ್ಳೇರಿಯ: ಇಕ್ಕೇರಿ ನಾಯಕರ ಆಶ್ರಯದಲ್ಲಿ  ಕಾಸರಗೋಡು ಜಿಲ್ಲೆಯಲ್ಲಿ  ಸ್ಥಾಪಿಸಿದ್ದ  ನಾಲ್ಕು ಪ್ರಧಾನ ಕೋಟೆಗಳಲ್ಲಿ  ಒಂದಾಗಿರುವ ಬೋವಿಕ್ಕಾನ ಸಮೀಪದ ಪೊವ್ವಲ್ ಕೋಟೆಯನ್ನು  ನವೀಕರಿಸಲು ಕೇರಳ ಪ್ರಾಚ್ಯವಸ್ತು  ಇಲಾಖೆಯು ಹೊಸ ಹಾಗೂ ವಿಶೇಷ ಯೋಜನೆಯೊಂದಕ್ಕೆ ರೂಪು ನೀಡಿದೆ.
   ಕೋಟೆ ಅಭಿವೃದ್ದಿಗೆ 52.50 ಲಕ್ಷ  ರೂ.ಗಳ ಯೋಜನೆಯನ್ನು  ರಚಿಸಲಾಗಿದೆ. ಈ ನಿಟ್ಟಿನಲ್ಲಿ  ಗುತ್ತಿಗೆ(ಟೆಂಡರ್) ಆಹ್ವಾನ ಪ್ರಕ್ರಿಯೆಗಳಿಗೂ ಈಗಾಗಲೇ ಚಾಲನೆ ಕೊಡಲಾಗಿದೆ. ಪೊವ್ವಲ್ ಕೋಟೆಯು ಇದೀಗ ಅತ್ಯಂತ ಶಿಥಿಲಾವಸ್ಥೆಯಲ್ಲಿದೆ. ಅದರೊಳಗಿರುವ ಇತಿಹಾಸ ಪ್ರಸಿದ್ಧ  ಹಾಗೂ ಅತ್ಯಂತ ಕಾರಣಿಕ ಶ್ರೀ ಹನುಮಾನ್ ಕ್ಷೇತ್ರವೂ ಪಾಳುಬಿದ್ದಿದೆ.
    ಐತಿಹಾಸಿಕ ಹಿನ್ನೆಲೆ ಮತ್ತು  ಪ್ರಾಚೀನತೆಯ ಮೇಲೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ಕೋಟೆಯನ್ನು  ಅಭಿವೃದ್ದಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇದರಂತೆ ಕೋಟೆಯ ಸುತ್ತಲೂ ನೆರಳು ವೃಕ್ಷಗಳನ್ನು  ನೆಡಲಾಗುವುದು. ಮಾತ್ರವಲ್ಲದೆ ಕೋಟೆಯ ಪರಿಸರದಲ್ಲಿ  ಹೂದೋಟ, ಆಕರ್ಷಕ ಬಣ್ಣಬಣ್ಣದ ಚಿತ್ತಾರ ಮೂಡಿಸುವ ಗಿಡಗಳು ಇತ್ಯಾದಿಗಳನ್ನು  ಅಳವಡಿಸಲು ಯೋಜನೆ ರೂಪಿಸಲಾಗಿದೆ.
  ಕೋಟೆ ಸಂದಶರ್ಿಸಲು ಬರುವವರಿಗೆ ಕುಳಿತುಕೊಳ್ಳಲು ಆಸನ ಸೌಕರ್ಯ, ಶೌಚಾಲಯ, ಟಿಕೆಟ್ ಕೌಂಟರ್ಗಳನ್ನು  ಸ್ಥಾಪಿಸಲಾಗುವುದು. ಜೊತೆಗೆ ಹೋಟೆಲ್, ತಂಪು ಪಾನೀಯ ಶಾಪ್ಗಳು ಮುಂತಾದವುಗಳನ್ನೂ  ಸ್ಥಾಪಿಸಲು ನಿಧರ್ಾರ ಕೈಗೊಳ್ಳಲಾಗಿದೆ. ಕುಸಿದು ಬಿದ್ದ  ಕೋಟೆಯ ಕೆಲವು ಭಾಗಗಳನ್ನು  ಅದೇ ರೀತಿ ಪುನರ್ ನಿಮರ್ಿಸಲಾಗುವುದು. ಯೋಜನೆಯ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ  ಪೊವ್ವಲ್ ಕೋಟೆಯನ್ನು  ಸಂರಕ್ಷಿಸಿ ಒಂದು ಶ್ರೇಷ್ಠ  ಪ್ರವಾಸಿ ಕೇಂದ್ರವನ್ನಾಗಿಸುವ ಹೊಸ ಯೋಜನೆಗೆ ಪ್ರಾಚ್ಯವಸ್ತು  ಇಲಾಖೆಯು ಮುಂದಾಗಿದೆ.

    ಹನುಮಾನ್ ಕ್ಷೇತ್ರದ ಅಭಿವೃದ್ಧಿ 
  ಗತಕಾಲದ ಇತಿಹಾಸ ಮತ್ತು  ಐತಿಹಾಸಿಕವಾಗಿರುವ ಪೊವ್ವಲ್ ಕೋಟೆಯು ಈಗ ಸಮಾಜದ್ರೋಹಿಗಳ ಕೇಂದ್ರವಾಗಿದೆ. ಇಲ್ಲಿ  ಕತ್ತಲಾಗುತ್ತಿದ್ದಂತೆ ಸಮಾಜಕಂಟಕರ ಉಪಟಳ ಹೆಚ್ಚಾಗುತ್ತಿದೆ. ಇದರಿಂದ ಪರಿಸರದ ಜನರಿಗೂ ತೊಂದರೆಯಾಗುತ್ತಿದೆ ಎಂಬ ಆರೋಪವಿದೆ.
   ವಿಜಯನಗರ ಸಾಮಾಜ್ರದ ಸಾಮಂತರಸ ರಾಜ ಇಕ್ಕೇರಿ ನಾಯಕರ ಆಳ್ವಿಕೆ ಕಾಲದಲ್ಲಿ  ಈ ಕೋಟೆಯನ್ನು  ಅತ್ಯಂತ ಆಕರ್ಷಕವಾಗಿ ನಿಮರ್ಿಸಲಾಗಿತ್ತು. ಈಗ ಮಾತ್ರ ಅದು ಪಾಳುಬಿದ್ದಿದೆ. ಈ ಕೋಟೆಯೊಳಗೆ ಶ್ರೀ ಹನುಮಾನ್ ಕ್ಷೇತ್ರವಿದ್ದು , ಅದನ್ನು  ನವೀಕರಿಸುವ ಯೋಜನೆಯನ್ನು  ಇಲಾಖೆಯು ಹಾಕಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries