HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಭರತನಾಟ್ಯ ಆರೋಗ್ಯ ಸಂವರ್ಧನೆಯನ್ನುಂಟುಮಾಡುತ್ತದೆ
    ಬದಿಯಡ್ಕ: ಭರತನಾಟ್ಯ ಅತ್ಯುದ್ಭುತ ಕಲೆ, ಜಗತ್ತಿನ ಮಾನವರೆನ್ನೆಲ್ಲ ದೇಶ-ಭಾಷೆಗಳನ್ನು ಮೀರಿ ಒಂದೂಗೂಡಿಸುವ ಸಾಮಥ್ರ್ಯ ನೃತ್ಯಕ್ಕಿದೆ. ದೃಶ್ಯ-ಶ್ರಾವ್ಯವೆರಡೂ ಕಲೆಗಳು ಸಂಮಿಳಿತವಾಗಿರುವ ಈ ಕಲೆಯು ಮಾನಸಿಕ ಸಮತೋಲನ ಹಾಗೂ ಆರೋಗ್ಯ ಸಂವರ್ಧನೆಯನ್ನುಂಟುಮಾಡುತ್ತದೆ ಎಂದು ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಅಭಿಪ್ರಾಯಪಟ್ಟರು.
   ಅವರು ಮವ್ವಾರಿನ ಶ್ರೀ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯ ಇದರ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಬುಧವಾರ ನೃತ್ಯ ಕಲಿಕೆ ಮತ್ತು ಪ್ರಾತ್ಯಕ್ಷಿಕೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯಶಿಕ್ಷಕ ಸೀತಾರಾಮ ರಾವ್ ಪಿಲಿಕೂಡ್ಲು ಮಾತನಾಡಿ, ಭರತನಾಟ್ಯ ದೇವಕಲೆ, ನೃತ್ಯಾಭ್ಯಾಸವು ಮನುಷ್ಯನ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಸಂರಕ್ಷಿಸುವುದು. ಅಸ್ತಮಾದಂತಹ ದೀರ್ಘ ಕಾಲದ ಕಾಯಿಲೆಗಳನ್ನು ಕೂಡ ಗುಣಪಡಿಸುವ ಶಕ್ತಿ ನೃತ್ಯಾಭ್ಯಾಸದಿಂದ ಪ್ರಾಪ್ತಾವಾಗುತ್ತದೆ. ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಬೆಗಳನ್ನು ಕಂಡು ಹಿಡಿದು ಉತ್ತಮ ತರಬೇತಿ ನೀಡಲು ಸಮರ್ಥ ಗುರುಗಳ ಮಾರ್ಗದರ್ಶನ ಅಗತ್ಯ ಎಂದರು.
   ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕ, ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಅಡ್ಕ ಮಾತನಾಡಿ, ಕಲೆ ಅಮೂಲ್ಯ ಸಂಪತ್ತು, ಕಲೆಯು ಆರೋಗ್ಯವನ್ನು ಸಂರಕ್ಷಿಸುವ ಸಂಜೀವಿನಿ. ಶಾಸ್ತ್ರೀಯ ಕಲೆಗಳು ಮನುಷ್ಯರಿಗೆ ಮಾತ್ರವಲ್ಲ, ಆಸ್ವಾದಿಸುವ ಸಕಲ ಜೀವಿಗಳಿಗೂ ಮನೋ ಸಂತೃಪ್ತಿಯನ್ನು ಹಾಗೂ ಆತ್ಮ ಸುಖವನ್ನು ನೀಡುತ್ತದೆ. ಕಲಾ ಸಂಪತ್ತು ಧನ ಸಂಪತ್ತಿಗಿಂತ ಮಿಗಿಲು. ನೃತ್ಯ ಕಲೆಯು ಭರತ ಮುನಿಗಳಿಂದ ಪ್ರಾರಂಭಿಸಲ್ಪಟ್ಟ ಭಾರತೀಯ ಕಲೆಯಾಗಿದೆ ಎಂದರು.
   ವಿದ್ಯಾಥರ್ಿನಿಯರಾದ ಶ್ರುತಿ ಕುಂಬಳೆ, ಧನ್ಯ ಕುಂಟಿಕಾನ ಹಾಗೂ ಅಶ್ವಿನಿ ನೀಚರ್ಾಲು ಅವರಿಂದ ನೃತ್ಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದುಷಿಯವರ ಶಿಷ್ಯವರ್ಗದ ಮಕ್ಕಳು, ನೃತ್ಯಾಸಕ್ತ ವಿದ್ಯಾಥರ್ಿಗಳು ಹಾಗೂ ಊರವರು ಭಾಗವಹಿಸಿದರು. ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಎ. ಹಾಗೂ ಸುಬ್ರಹ್ಮಣ್ಯ ಭಟ್ ಅಡ್ಕ ವಿದ್ಯಾಲಕ್ಷ್ಮೀ ಅವರನ್ನು ಶಾಲುಹೊದಿಸಿ ಸಮ್ಮಾನಿಸಿದರು.
   ಸಂಘದ ಗ್ರಂಥಾಲಯವನ್ನು ಮೆಚ್ಚಿಕೊಂಡ ಸುಬ್ರಹ್ಮಣ್ಯ ಭಟ್ ಅಡ್ಕ ಹಾಗೂ ವಿದುಷಿ ವಿದ್ಯಾಲಕ್ಷ್ಮೀ ಗ್ರಂಥಾಲಯಕ್ಕೆ ಹಲವು ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಎ. ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಎಂ.ಗಂಗಾಧರ ಮಾಸ್ತರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದಶರ್ಿ ಸದಾಶಿವ ಕೆ. ವಂದಿಸಿದರು. ಶ್ವೇತಾ ಪ್ರಾರ್ಥನೆ ಹಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries